ETV Bharat / entertainment

ರವಿಚಂದ್ರನ್​​ ಬರ್ತ್ ಡೇ: ಜಡ್ಜ್​​​ಮೆಂಟ್ ಸ್ಪೆಷಲ್ ಟೀಸರ್ ಬಿಡುಗಡೆ - Ravichandran Judgment movie

ರವಿಚಂದ್ರನ್​ ಜನ್ಮದಿನ ಹಿನ್ನೆಲೆ 'ದಿ ಜಡ್ಜ್​​​ಮೆಂಟ್' ಸ್ಪೆಷಲ್ ಟೀಸರ್ ಬಿಡುಗಡೆ ಮಾಡಲಾಗಿದೆ.

Judgment Special Teaser
ಜಡ್ಜ್ ಮೆಂಟ್ ಸ್ಪೆಷಲ್ ಟೀಸರ್ ಬಿಡುಗಡೆ
author img

By

Published : May 30, 2023, 3:52 PM IST

ಕನ್ನಡ ಚಿತ್ರರಂಗದಲ್ಲಿ ಕನಸುಗಾರ, ಶೋ ಮ್ಯಾನ್, ಕ್ರೇಜಿಸ್ಟಾರ್, ರಣಧೀರ, ರವಿಮಾಮ ಹೀಗೆ ನಾನಾ ಹೆಸರುಗಳಿಂದ ಗುರುತಿಸಿಕೊಂಡಿರುವ ಬಹು ಬೇಡಿಕೆ ನಟ ರವಿಚಂದ್ರನ್​​ ಇಂದು 62ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಮೆಚ್ಚಿನ ನಟನಿಗೆ ಅಭಿಮಾನಿಗಳು, ಚಿತ್ರರಂಗದವರು, ಕುಟುಂಬಸ್ಥರು, ಆಪ್ತರು ಶುಭಾಶಯಗಳ ಮಳೆಯನ್ನೇ ಸುರಿಸಿದ್ದಾರೆ. ರವಿಮಾಮನ ಬರ್ತ್ ಡೇ ಸಂಭ್ರಮವನ್ನು 'ದಿ ಜಡ್ಜ್ ಮೆಂಟ್' ಚಿತ್ರತಂಡ ಹೆಚ್ಚಿಸಿದೆ. ಹೌದು, ಸ್ಪೆಷಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರ ಹುಟ್ಟುಹಬ್ಬಕ್ಕೆ 'ದಿ ಜಡ್ಜ್ ಮೆಂಟ್' ಚಿತ್ರತಂಡ ವಿಶೇಷವಾಗಿ ಶುಭ ಕೋರಿದೆ.

  • " class="align-text-top noRightClick twitterSection" data="">

'ದೃಶ್ಯಂ 2' ಚಿತ್ರದ ಬಳಿಕ ಕ್ರೇಜಿಸ್ಟಾರ್ ಅಭಿನಯಿಸುತ್ತಿರುವ ಸಸ್ಪೆನ್ಸ್ ಕಮ್ ಥ್ರಿಲ್ಲರ್ ಕಥೆ ಆಧರಿಸಿರುವ‌ 'ದ ಜಡ್ಜ್ ಮೆಂಟ್' ಚಿತ್ರದಲ್ಲಿ ರವಿಚಂದ್ರನ್ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. ರವಿಚಂದ್ರನ್ ಅಲ್ಲದೇ ದಿಗಂತ್, ಧನ್ಯ ರಾಮಕುಮಾರ್, ಲಕ್ಷ್ಮೀಗೋಪಾಲಸ್ವಾಮಿ, ಟಿ.ಎಸ್ ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರೂಪ ರಾಯಪ್ಪ, ರಾಜೇಂದ್ರ ಕಾರಂತ್ ಹೀಗೆ ಬಹುದೊಡ್ಡ ತಾರಾಬಳಗವಿದೆ.

ಆಕ್ಸಿಡೆಂಟ್ , ಲಾಸ್ಟ್ ಬಸ್, ಅಮೃತ ಅಪಾರ್ಟ್‌ಮೆಂಟ್ಸ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಗುರುರಾಜ ಬಿ ಕುಲಕರ್ಣಿ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಶಿವು ಬಿ.ಕೆ ಕುಮಾರ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ ಹಾಗೂ ಎಂ.ಎಸ್ ರಮೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ನಿರ್ದೇಶಕ ಗುರುರಾಜು ನಿರ್ದೇಶನದ ‌ಜೊತೆಗೆ ಶರದ್ ಬಿ ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಆರ್ ಪಾಟೀಲ, ರಾಜೇಶ್ವರಿ ಆರ್ ಸುನೀಲ ಹಾಗೂ ಪ್ರತಿಮ ಬಿರಾದಾರ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: 62ನೇ ವಸಂತಕ್ಕೆ ಕಾಲಿಟ್ಟ ಕ್ರೇಜಿಸ್ಟಾರ್​: 'ಪ್ರೇಮಲೋಕದ ಹೆಡ್‌ಮಾಸ್ಟರ್​'​ ಸಕ್ಸ​ಸ್​ ಸೀಕ್ರೆಟ್​ ಏನು ಗೊತ್ತಾ?

1971ರಲ್ಲಿ 'ಕುಲ ಗೌರವ' ಚಿತ್ರದಲ್ಲಿ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರವಿಚಂದ್ರನ್​ ಬಹುತೇಕ ಹಿಟ್​ ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಪ್ರೇಮಲೋಕ, ರಣಧೀರ, ಅಂಜದ ಗಂಡು, ರಾಮಾಚಾರಿ, ಅಣ್ಣಯ್ಯ, ದೃಶ್ಯ, ಕ್ರೇಜಿಸ್ಟಾರ್​, ಕ್ರೇಜಿ ಲೋಕ, ಮಲ್ಲ, ಸಿಪಾಯಿ, ಯುದ್ಧ ಕಾಂಡ, ಶಾಂತಿ ಕ್ರಾಂತಿ, ನಾನು ನನ್ನ ಹೆಂಡ್ತೀರು, ಯಾರೆ ನೀನು ಚೆಲುವೆ, ಅಪೂರ್ವ, ಸಾಹುಕಾರ, ಹಠವಾದಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕನ್ನಡ ಚಿತ್ರರಂಗದ ಕನಸುಗಾರ'...ರವಿಚಂದ್ರನ್ ಅಪರೂಪದ ಚಿತ್ರಗಳಿವು!​​

ನಟನಾಗಿ ಮಾತ್ರವಲ್ಲದೇ ನಿರ್ದೇಶಕ, ನಿರ್ಮಾಪಕ, ಸಂಗೀತಗಾರನಾಗಿಯೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿಯೂ ಮಿಂಚುತ್ತಿದ್ದಾರೆ. ದಿ ಜಡ್ಜ್‌ಮೆಂಟ್ ಅಲ್ಲದೇ, ಗೌರಿ, ಮಹಾಲಕ್ಷ್ಮಿ, ತ್ರಿಶೂಲಂ ಎಂಬ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಅವರ ಈ ಚಿತ್ರಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ಸಾಕಷ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.