ETV Bharat / entertainment

ರಾಜಮೌಳಿ ಸಿನಿಮಾದಲ್ಲಿ ಒಡಹುಟ್ಟಿದವರಾಗಿ ಕಾಣಿಸಿಕೊಳ್ಳಲಿದ್ದಾರೆ ಜೂ. ಎನ್​​ಟಿಆರ್​ - ಮಹೇಶ್​ ಬಾಬು ಮಕ್ಕಳು - NTR son Abhay

ರಾಜಮೌಳಿ ನಿರ್ದೇಶಿಸಲಿರುವ ಸಿನಿಮಾದಲ್ಲಿ ಜೂ. ಎನ್​​ಟಿಆರ್​ ಮತ್ತು ಮಹೇಶ್​ ಬಾಬು ಮಕ್ಕಳು ಒಡಹುಟ್ಟಿದವರಾಗಿ ಕಾಣಿಸಿಕೊಳ್ಳಲಿದ್ದಾರೆ.

JR NTR and Mahesh babu children in Rajamouli film
ರಾಜಮೌಳಿ ಸಿನಿಮಾದಲ್ಲಿ ಜೂ.ಎನ್​​ಟಿಆರ್​ - ಮಹೇಶ್​ ಬಾಬು ಮಕ್ಕಳು
author img

By

Published : Jul 15, 2023, 12:42 PM IST

ಭಾರತೀಯ ಚಿತ್ರರಂಗದಲ್ಲಿ ನಟರು, ನಿರ್ದೇಶಕರುಗಳ ಸ್ನೇಹದ ಬಗ್ಗೆ ನಿಮಗೆ ತಿಳಿದೇ ಇದೆ. ಸ್ಟಾರ್ ನಟರು ಪರಸ್ಪರ ಬಹಳ ಫ್ರೆಂಡ್ಲಿ ಆಗಿ ಕಾಣಿಸಿಕೊಳ್ಳುತ್ತಾರೆ. ಪರಸ್ಪರ ಸಿನಿಮಾ ಈವೆಂಟ್​ಗಳಲ್ಲಿ ಭಾಗವಹಿಸುತ್ತಾರೆ. ಜೊತೆಗೆ, ಸ್ನೇಹ ಸಂಬಂಧದ ಕುರಿತು ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತಾರೆ. ಇಂದಿನ ಪೀಳಿಗೆಯ ಮಕ್ಕಳೂ ಸಹ ಆ ಸಂಪರ್ಕ, ಸ್ನೇಹ ಮುಂದುವರಿಸಲು ಹೊರಟಿದ್ದಾರೆ ಎಂಬುದು ಗಮನಾರ್ಹ ವಿಷಯ.

ಸ್ಟಾರ್ ಕಿಡ್ಸ್ ಸಿನಿಮಾಗಳು: ಸ್ಟಾರ್ ಕಿಡ್ಸ್ ಈಗಾಗಲೇ ಟಾಲಿವುಡ್ ಇಂಡಸ್ಟ್ರಿಗೆ ಒಬ್ಬರ ನಂತರ ಒಬ್ಬರಂತೆ ಎಂಟ್ರಿಯಾಗಿದ್ದಾರೆ. ರವಿತೇಜ, ಸುಧೀರ್ ಬಾಬು, ಮಹೇಶ್ ಬಾಬು, ಅಲ್ಲು ಅರ್ಜುನ್ ಸೇರಿದಂತೆ ಇತರೆ ನಾಯಕ ನಟರ ಮಕ್ಕಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ರವಿತೇಜ ಅವರ ಮಗ ರಾಜಾ ದಿ ಗ್ರೇಟ್ ಚಿತ್ರದಲ್ಲಿ, ಭಲೇ ಭಲೇ ಮಗಾಡಿವೋಯ್ ಚಿತ್ರದಲ್ಲಿ ಸುಧೀರ್ ಬಾಬು ಮಗ ನಟಿಸಿದ್ದರೆ, ಅಲ್ಲು ಅರ್ಜುನ್ ಪುತ್ರಿ ಶಾಕುಂತಲಂ ಸಿನಿಮಾದಲ್ಲಿ, ಮಹೇಶ್ ಬಾಬು ಪುತ್ರಿ ಸರ್ಕಾರು ವಾರಿ ಪಾಟ ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಪರಿಚಯವಾಗಿದ್ದಾರೆ.

ಜೂ. ಎನ್​ಟಿಆರ್​ ಮಗ ಅಭಯ್ ರಾಮ್: ಇದೀಗ ಆರ್​ಆರ್​ಆರ್​ ಸ್ಟಾರ್ ಜೂನಿಯರ್ ಎನ್​ಟಿಆರ್ ಅವರ ಹಿರಿಯ ಮಗ ಅಭಯ್ ರಾಮ್ ಕೂಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆಂಬ ಮಾಹಿತಿ ಇದೆ. ಇತ್ತ ಮಗಳು ಸಿತಾರಾ ಜೊತೆ ಸೂಪರ್​ ಸ್ಟಾರ್ ಮಹೇಶ್ ಬಾಬು ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜಮೌಳಿ ಸಿನಿಮಾದಲ್ಲಿ ಸ್ಟಾರ್ ಕಿಡ್ಸ್: ಬಾಹುಬಲಿ, ಆರ್​ಆರ್​ಆರ್​ ಖ್ಯಾತಿಯ ಲೆಜೆಂಡರಿ ಡೈರೆಕ್ಟರ್ ಎಸ್​ಎಸ್​ ರಾಜಮೌಳಿ ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ಅಭಯ್ ರಾಮ್ ಎಂಟ್ರಿ ಕೊಡಲಿದ್ದಾರೆ. ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಶನ್​ನಲ್ಲಿ ಬಿಗ್​ ಬಜೆಟ್​ನ ಆ್ಯಕ್ಷನ್​​ ಸಿನಿಮಾ ಮೂಡಿಬರಲಿದೆ. ಸದ್ಯ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ನಟರ ಇಂಟ್ರೂಡಕ್ಷನ್ ಸೀನ್ ಸುಮಾರು 20 ನಿಮಿಷ ಇರಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Alia Bhatt: ರಾಕಿ & ರಾಣಿ ಲವ್​ಸ್ಟೋರಿ ರಿಲೀಸ್​ಗೆ ರೆಡಿ .. ಸ್ಪೈ ಸಿನಿಮಾದಲ್ಲಿ ಆಲಿಯಾ - ಹಿಂದೆಂದೂ ನೋಡಿರದ ಪಾತ್ರದಲ್ಲಿ ಭಟ್!

ಮಹೇಶ್ ಬಾಬು ಪುತ್ರಿ ಸಿತಾರಾ ಹಾಗೂ ಜೂ. ಎಸ್​ಟಿಆರ್ ಪುತ್ರ ಅಭಯ್ ರಾಮ್ ಅವರನ್ನು ರಾಜಮೌಳಿ ಅವರು ತಮ್ಮ ಮುಂದಿನ ಸಿನಿಮಾದಲ್ಲಿ ಒಡಹುಟ್ಟಿದವರಂತೆ ತೋರಿಸಲಿದ್ದಾರೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಘೋಷಣೆ ಆಗಬೇಕಿದೆ. ಇದು ನಿಜವೇ ಆಗಿದ್ದರೆ ಜೂ. ಎನ್​ಟಿಆರ್​ ಪುತ್ರ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ.

ಇದನ್ನೂ ಓದಿ: ರೋಸ್​ ಡಿಸೈನ್​ ಡ್ರೆಸ್​ನಲ್ಲಿ ಬಾಲಿವುಡ್​ ಗುಲಾಬಿ: ಜಾನ್ವಿ ಕಪೂರ್ ಬವಾಲ್​ ಸಿನಿಮಾ ರಿಲೀಸ್​ಗೆ ರೆಡಿ

ಮಹೇಶ್ ಬಾಬು ಪುತ್ರಿ ಸಿತಾರಾ ಘಟ್ಟಮನೇನಿ ಈಗಾಗಲೇ ಬಹುಮುಖ ಪ್ರತಿಭೆಯಾಗಿ ಜನಪ್ರಿಯರಾಗಿದ್ದಾರೆ. ಅದ್ಭುತ ನೃತ್ಯಗಾರ್ತಿ ಆಗಿರುವ ಇವರು ಸಾಮಾಜಿಕ ಜಾಲತಾಣದಲ್ಲೂ ಉತ್ತಮ ಫಾಲೋವರ್ಸ್ ಸಂಪಾದಿಸಿದ್ದಾರೆ. 10ರ ಹರೆಯದಲ್ಲೇ ಖ್ಯಾತ ಆಭರಣ ಕಂಪನಿಯೊಂದರ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಇವರ ಫೋಟೋ ನ್ಯೂಯಾರ್ಕ್​ ಸಿಟಿಯಲ್ಲಿರುವ ಟೈಮ್​ ಸ್ಕ್ವೇರ್​ನಲ್ಲಿ ಪ್ರದರ್ಶನಗೊಂಡು ಸದ್ದು ಮಾಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.