ETV Bharat / entertainment

'Jawan fever': ಪತ್ನಿ ಪ್ರಿಯಾರೊಂದಿಗೆ ದೊಡ್ಡ ಪರದೆಯಲ್ಲಿ 'ಜವಾನ್'​ ವೀಕ್ಷಿಸಿದ ನಿರ್ದೇಶಕ ಅಟ್ಲೀ - etv bharat kannada

Jawan release: ನಿರ್ದೇಶಕ ಅಟ್ಲೀ ತಾವೇ ಆಕ್ಷನ್​ ಕಟ್​ ಹೇಳಿರುವ 'ಜವಾನ್'​ ಸಿನಿಮಾವನ್ನು ಪತ್ನಿ ಪ್ರಿಯಾರ ಜೊತೆ ಥಿಯೇಟರ್​ನಲ್ಲಿ ವೀಕ್ಷಿಸಿದ್ದಾರೆ.

Jawan
ಜವಾನ್
author img

By ETV Bharat Karnataka Team

Published : Sep 7, 2023, 12:05 PM IST

ಬಾಲಿವುಡ್​ ಸೂಪರ್​ಸ್ಟಾರ್ ಶಾರುಖ್​ ಖಾನ್​ ನಟನೆಯ 'ಜವಾನ್​' ಸಿನಿಮಾ​ ಇಂದು ತೆರೆಗಪ್ಪಳಿಸಿದೆ. ಈ ಆಕ್ಷನ್​ ಥ್ರಿಲ್ಲರ್​ ಚಿತ್ರಕ್ಕೆ ತಮಿಳು ನಿರ್ದೇಶಕ ಅಟ್ಲೀ ಆಕ್ಷನ್​ ಕಟ್​ ಹೇಳಿದ್ದಾರೆ. ಚಿತ್ರದಲ್ಲಿ ನಯನತಾರಾ, ವಿಜಯ್​ ಸೇತುಪತಿ, ದೀಪಿಕಾ ಪಡುಕೋಣೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಜವಾನ್​' ಫಸ್ಟ್​ ಡೇ, ಫಸ್ಟ್​ ಶೋ ವೀಕ್ಷಿಸಲು ಅಭಿಮಾನಿಗಳು ಥಿಯೇಟರ್​ಗೆ ಮುಗಿಬೀಳುತ್ತಿದ್ದಂತೆ ಅಟ್ಲೀ ಕೂಡ ತಮ್ಮ ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಿದ್ದಾರೆ.

ಗುರುವಾರ ಬೆಳಗ್ಗೆ ಅಟ್ಲೀ ತಮ್ಮ ಪತ್ನಿ ಪ್ರಿಯಾ ಜೊತೆಗಿನ ಫೋಟೋವನ್ನು ಹಂಚಿಕೊಳ್ಳಲು ಇನ್​ಸ್ಟಾ ವೇದಿಕೆಯನ್ನು ಬಳಸಿಕೊಂಡರು. ಜೋಡಿಯು 'ಜವಾನ್​' ನಾಮಮುದ್ರಿತ ಬಿಳಿ ಟೀ-ಶರ್ಟ್​ ಧರಿಸಿದ್ದರು. ತಮಿಳುನಾಡಿನ ಚೆನ್ನೈನಲ್ಲಿರುವ ರೋಹಿಣಿ ಥಿಯೇಟರ್​ಗೆ ತೆರಳುತ್ತಿರುವ ವೇಳೆ ದಂಪತಿ ಕಾರಿನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಫೋಟೋ ಹಂಚಿಕೊಂಡ ಅಟ್ಲೀ, "ಜವಾನ್​ ಮೊದಲ ಶೋಗೆ ಹೋಗುವ ದಾರಿಯಲ್ಲಿ" ಎಂದು ಕ್ಯಾಪ್ಶನ್​ ನೀಡಿದ್ದಾರೆ. ಜೊತೆಗೆ "#jawanfever," ಮತ್ತು "#jawanday" ಎಂಬ ಹ್ಯಾಶ್​ಟ್ಯಾಗ್​ ಅನ್ನು ಸೇರಿಸಿದ್ದಾರೆ.

ಸೆಲೆಬ್ರಿಟಿಗಳಿಗೆ ವಿಶೇಷ ಸ್ಕ್ರೀನಿಂಗ್​: ಇಂದು ವಿಶ್ವದಾದ್ಯಂತ 'ಜವಾನ್​' ಸಿನಿಮಾ ಬಿಡುಗಡೆಯಾಗಿದೆ. ಚಿತ್ರ ರಿಲೀಸ್​ಗೂ ಮುನ್ನ 'ಜವಾನ್'​ ವಿಶೇಷ ಸ್ಕ್ರೀನಿಂಗ್​ ಕಾರ್ಯಕ್ರಮವನ್ನು ಸಿನಿ ಸೆಲೆಬ್ರಿಟಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು. ಆದಿತ್ಯಾ ಚೋಪ್ರಾ ಒಡೆತನದ ಮುಂಬೈನ ಯಶ್​ ರಾಜ್​ ಸ್ಟುಡಿಯೋದಲ್ಲಿ ಜವಾನ್​ನ ಮೊದಲ ಸೆಲೆಬ್ರಿಟಿ ಶೋ ಬುಧವಾರ ಸಂಜೆ ನಡೆಯಿತು. ಶಾರುಖ್​ ಖಾನ್​ ಜೊತೆಗೆ ದೀಪಿಕಾ ಪಡುಕೋಣೆ, ಸುಹಾನ್​ ಖಾನ್​, ಶಾರುಖ್​ ಪತ್ನಿ ಗೌರಿ ಖಾನ್​, ಹೃತಿಕ್​ ರೋಷನ್​, ಕತ್ರಿನಾ ಕೈಫ್​ ಮತ್ತು ಇತರೆ ಜವಾನ್​ ತಂಡದ ಸದಸ್ಯರು ಸೇರಿದಂತೆ ಹಲವಾರು ಪ್ರಸಿದ್ಧ ಸೆಲೆಬ್ರಿಟಿಗಳು ಸ್ಕ್ರೀನಿಂಗ್​ಗೆ ಹಾಜರಾಗಿದ್ದರು.

ಇದನ್ನೂ ಓದಿ: ಫ್ಯಾಮಿಲಿಯೊಂದಿಗೆ ಜವಾನ್​ ವೀಕ್ಷಿಸಲಿರುವ ಮಹೇಶ್​ ಬಾಬು... ಟಾಲಿವುಡ್​ ಸ್ಟಾರ್ ಜೊತೆ ಸಿನಿಮಾ ನೋಡುತ್ತೇನೆ ಎಂದ ಶಾರುಖ್​ ಖಾನ್

ಹೃತಿಕ್​ ರೋಷನ್​ ಅವರು ಸ್ಕ್ರೀನಿಂಗ್​ಗೆ ಆಗಮಿಸುತ್ತಿರುವ ದೃಶ್ಯಗಳು ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ಕಪ್ಪು ಸ್ವೆಟ್​ಶರ್ಟ್​ ಮತ್ತು ಕಂದು ಬಣ್ಣದ ಟೋಪಿ ಧರಿಸಿದ್ದ ಅವರು ಫೋಟೋಗ್ರಾಫರ್​ಗಳತ್ತ ಕೈಬೀಸಿದರು. ಜಬ್​ ತಕ್​ ಹೈ ಜಾನ್​ ಮತ್ತು ಝೀರೋ ಚಿತ್ರದಲ್ಲಿ ಶಾರುಖ್​ ಜೊತೆ ನಟಿಸಿದ್ದ ಕತ್ರಿನಾ ಕೈಫ್​ ಕೂಡ ಸ್ಕ್ರೀನಿಂಗ್​ನಲ್ಲಿ ಕಾಣಿಸಿಕೊಂಡಿದ್ದರು. ಅವರು ಬೂದು ಬಣ್ಣದ ಡ್ರೆಸ್​ ಮತ್ತು ಬ್ಲ್ಯಾಕ್​ ಕೂಲಿಂಗ್​ ಗ್ಲಾಸ್​ ಧರಿಸಿ ಫೋಟೋಗ್ರಾಫರ್ಸ್​ಗೆ ಚಂದನೆಯ ನಗು ಬೀರಿದರು.

ಮತ್ತೊಂದು ವೈರಲ್​ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಪಾಪರಾಜಿಗಳನ್ನು ನೋಡಿ ನಗುತ್ತಿರುವುದನ್ನು ಕಾಣಬಹುದು. ನಟಿ ಕಪ್ಪು ಬಣ್ಣದ ದಿರಿಸಿನಲ್ಲಿ ಬೆರಗುಗೊಳಿಸಿದರು. ಅವರು ಕನಿಷ್ಠ ಮೇಕಪ್​ನೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ಎಸ್​ಆರ್​ಕೆ ಅವರ ಮಗಳು ಸುಹಾನಾ ಖಾನ್​ ಕೂಡ ತಮ್ಮ ಸ್ನೇಹಿತರೊಂದಿಗೆ ಸ್ಕ್ರೀನಿಂಗ್​ಗೆ ಆಗಮಿಸುತ್ತಿರುವ ದೃಶ್ಯಗಳು ಕಂಡುಬಂತು. ಅವರು ಈ ವೇಳೆ ಬ್ಲ್ಯಾಕ್​ ಗೌನ್​ ಧರಿಸಿದ್ದರು. ಗೌರಿ ಖಾನ್​ ಕೂಡ ಇದೇ ವೇಳೆ ಕಾಣಿಸಿಕೊಂಡರು.

ಇವರಲ್ಲದೇ, ಗಾಯಕಿ ರಾಜಾ ಕುಮಾರಿ, ಸುನಿಲ್​ ಗ್ರೋವರ್​, ಸಾನ್ಯಾ ಮಲ್ಹೋತ್ರಾ, ಮುಖೇಶ್​ ಛಾಬ್ರಾ ಸೇರಿದಂತೆ ಜವಾನ್​ ತಂಡದ ಸದಸ್ಯರು ಇದ್ದರು. ಸ್ಕ್ರೀನಿಂಗ್​ ನಂತರ ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಥಿಯೇಟರ್​ಗಳಲ್ಲಿ ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು. ಅಭಿಮಾನಿಗಳು ಎಸ್​ಆರ್​ಕೆ ಸಿನಿಮಾವನ್ನು ಸ್ವಾಗತಿಸಲು ಥಿಯೇಟರ್​ ಮುಂದೆ ಜಮಾಯಿಸಿರುವ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಬಹುನಿರೀಕ್ಷಿತ 'ಜವಾನ್​' ರಿಲೀಸ್​: ಎಸ್​ಆರ್​ಕೆ ಸಿನಿಮಾ ಸ್ವಾಗತಿಸಲು ಥಿಯೇಟರ್​ ಮುಂದೆ ಅಭಿಮಾನಿಗಳ ದಂಡು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.