ETV Bharat / entertainment

Jawan Song: ನಾಳೆ ಜವಾನ್ ರೊಮ್ಯಾಂಟಿಕ್​​​ ಸಾಂಗ್​ ರಿಲೀಸ್;​ ಚಲೇಯಾ ಟೀಸರ್​ ನೋಡಿದ್ರಾ? - ನಯನತಾರಾ

Jawan Song Chaleya: ಬಹುನಿರೀಕ್ಷಿತ ಜವಾನ್​ ಚಿತ್ರದ ಚಲೇಯಾ ಹಾಡು ನಾಳೆ ರಿವೀಲ್​ ಆಗಲಿದೆ. ಇಂದು ಹಾಡಿನ ಟೀಸರ್​​ ಬಿಡುಗಡೆಯಾಗಿದೆ.

Chaleya song
ಜವಾನ್ ಚಲೇಯಾ ಸಾಂಗ್
author img

By

Published : Aug 13, 2023, 3:35 PM IST

ಸೂಪರ್‌ಸ್ಟಾರ್​ ಶಾರುಖ್​ ಖಾನ್ ಮತ್ತು ಸೌತ್​ ಸ್ಟಾರ್ ಡೈರೆಕ್ಟರ್​ ಅಟ್ಲೀ ಕಾಂಬಿನೇಶನ್​ನ ಬಹುನಿರೀಕ್ಷಿತ ಸಿನಿಮಾವೇ 'ಜವಾನ್​'. ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲು ಪ್ಯಾನ್​ ಇಂಡಿಯಾ ಸಿನಿಮಾ ರೆಡಿಯಾಗಿದ್ದು, ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯ ಪ್ರಾರಂಭಿಸಿದೆ. ಜವಾನ್​ ಪ್ರಮೋಶನ್​ ಭಾಗವಾಗಿ ಆಗಾಗ್ಗೆ ಚಿತ್ರತಂಡ ಅಪ್​ಡೇಟ್ಸ್ ಕೊಡುತ್ತಿದ್ದು, ಅಭಿಮಾನಿಗಳ ಉತ್ಸಾಹ ಹೆಚ್ಚಿಸುತ್ತಿದ್ದಾರೆ.

ಜವಾನ್​ ಪ್ರಮೋಶನ್​: ಸೌತ್​ ಮತ್ತು ಬಾಲಿವುಡ್​ ಕಾಂಬೋದಲ್ಲಿ ಮೂಡಿಬರುತ್ತಿರುವ ಸಿನಿಮಾವಾಗಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರ ನಿರೀಕ್ಷೆ ಸಹಜವಾಗಿಯೇ ಹೆಚ್ಚಿರುತ್ತದೆ. ಅಭಿಮಾನಿಗಳ ಕಾತುರಕ್ಕೆ ತಕ್ಕಂತೆ ಚಿತ್ರತಂಡವೂ ಸಿನಿಮಾ ಅಪ್​ಡೇಟ್ಸ್ ಕೊಡುತ್ತಿದೆ. ಸಿನಿಮಾ ಬಿಡುಗಡೆಗೆ ತಿಂಗಳು ಕೂಡಾ ಕಾಯಬೇಕಿಲ್ಲ. ಹೀಗಿರುವಾಗ ವಿಭಿನ್ನ ರೀತಿಯಲ್ಲಿ ಸಿನಿಮಾ ಪ್ರಮೋಶನ್​ ಮಾಡುವ ಮೂಲಕ ಪ್ರೇಕ್ಷಕರ ಮನಮುಟ್ಟುವ ಕೆಲಸ ನಡೆಯುತ್ತಿದೆ.

ಚಲೇಯಾ ಟೀಸರ್​ ರಿಲೀಸ್: ಇತ್ತೀಚೆಗಷ್ಟೇ ಪೋಸ್ಟರ್, ಸಿನಿಮಾದ ಮೊದಲ ಹಾಡು, ಮೇಕಿಂಗ್​ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿತ್ತು. ಇದೀಗ ಎರಡನೇ ಹಾಡಿನ ಬಿಡುಗಡೆಗೆ ದಿನ ನಿಗದಿಯಾಗಿದೆ. ಚಿತ್ರ ತಯಾರಕರು, ತಂಡದವರು ಹೊಸ ಟ್ರ್ಯಾಕ್​ನ ಟೀಸರ್​ ಹಂಚಿಕೊಲ್ಳುವ ಮೂಲಕ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದಾರೆ. ಇತ್ತೀಚೆಗಷ್ಟೇ ಜಿಂದಾ ಬಂದಾ ಹಾಡು ಅನಾವರಣಗೊಂಡಿತ್ತು. ಸಿನಿಮಾ ಸಾಂಗ್​ಗೆ ಸಿನಿರಸಿಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಇದನ್ನೂ ಓದಿ: ತೆರೆಕಂಡ ಎರಡೇ ದಿನದಲ್ಲಿ 83 ಕೋಟಿ ರೂ. ಸಂಪಾದಿಸಿದ ಗದರ್ 2: ಓಎಂಜಿ 2 ಕಲೆಕ್ಷನ್​?

ಜವಾನ್​ ನಾಯಕ ನಟ ಶಾರುಖ್​ ಖಾನ್​ ಹೊಸ ಹಾಡು 'ಚಲೇಯಾ'ದ ಟೀಸರ್​ ಅನ್ನು ಇಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರ ತಯಾರಕರಾದ ರೆಡ್​ ಚಿಲ್ಲೀಸ್​ ಬ್ಯಾನರ್​ ಕೂಡಾ ಟೀಸರ್​ ಶೇರ್ ಮಾಡಿದೆ. ಇತ್ತೀಚೆಗೆ ಅನಾವರಣಗೊಂಡಿದ್ದ ಜಿಂದಾ ಬಂದಾ ಹಾಡಿನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದರು.

ಆದ್ರೆ ನಾಳೆ ಅನಾವರಣಗೊಳ್ಳಲಿರುವ ಚಲೇಯಾ ಹಾಡಿನಲ್ಲಿ ಸಖತ್ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಎಸ್​ಆರ್​ಕೆ ಕಿಂಗ್​ ಆಫ್​ ರೊಮ್ಯಾನ್ಸ್ ಅನ್ನೋದು ನಿಮಗೆ ಗೊತ್ತಿರುವ ಸಂಗತಿ. ಸೌತ್​ ಸ್ಟಾರ್ ಹೀರೋಯಿನ್​ ನಯನತಾರಾ ಜೊತೆ ಶಾರುಖ್​ ಖಾನ್​​ ರೊಮ್ಯಾನ್ಸ್ ಮಾಡಿದ್ದು, ಚಲೇಯಾ ಟೀಸರ್ ಬಹಳ ಕುತೂಹಲ ಮೂಡಿಸುವಂತಿದೆ.​

ಇದನ್ನೂ ಓದಿ: ಪವಿತ್ರ ರಿಷ್ತಾ ನಟಿ ಅಂಕಿತಾ ಲೋಖಂಡೆ ತಂದೆ ಶಶಿಕಾಂತ್​ ವಿಧಿವಶ: ಕಂಬನಿ ಮಿಡಿದ ಗಣ್ಯರು

ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈ ಮೂರೂ ಭಾಷೆಗಳಲ್ಲೂ ಟೀಸರ್​ ಬಿಡುಗಡೆಯಾಗಿದೆ. ನಾಳೆ ಈ ಮೂರೂ ಭಾಷೆಗಳಲ್ಲಿ ಚಲೇಯಾ ಹಾಡನ್ನು ನೀವು ಎಂಜಾಯ್ ಮಾಡಬಹುದು. ಸೆಪ್ಟೆಂಬರ್​ 7ರಂದು ವಿಶ್ವಾದ್ಯಂತ ತೆರೆಕಾಣಲಿರುವ ಸಿನಿಮಾವನ್ನು ಶಾರುಖ್​ - ಗೌರಿ ಅವರ ರೆಡ್​ ಚಿಲ್ಲೀಸ್ ಬ್ಯಾನರ್​ ನಿರ್ಮಿಸಿದೆ. ಸೌತ್ ಸ್ಟಾರ್​ ನಟ ವಿಜಯ್​ ಸೇತುಪತಿ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಉಳಿದಂತೆ, ಪ್ರಿಯಾಮಣಿ, ರಿಧಿ ಡೋಗ್ರಾ, ಸಾನ್ಯಾ ಮಲ್ಹೋತ್ರಾ ತಾರಾಗಣದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.