ETV Bharat / entertainment

Jawan: ಬಾಕ್ಸ್​ ಆಫೀಸ್​ನಲ್ಲಿ 'ಜವಾನ್​' ಅಬ್ಬರ: ಅಬ್ಬಬ್ಬಾ.. ಎರಡು ದಿನದಲ್ಲಿ ಇಷ್ಟೊಂದು ಕಲೆಕ್ಷನ್​ - ಈಟಿವಿ ಭಾರತ ಕನ್ನಡ

Jawan box office collection day 2: 'ಜವಾನ್​' ಬಿಡುಗಡೆಯಾದ ಎರಡನೇ ದಿನದಂದು 50.50 ಕೋಟಿ ರೂಪಾಯಿ ಗಳಿಸಿದೆ.

jawan box office collections day 2
ಜವಾನ್
author img

By ETV Bharat Karnataka Team

Published : Sep 9, 2023, 11:00 AM IST

ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ನಟನೆಯ 'ಜವಾನ್'​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಅಟ್ಲೀ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ​ ಸಿಕ್ಕಿದೆ. ಸೆಪ್ಟಂಬರ್​ 7ರಂದು ತೆರೆಕಂಡ ಚಿತ್ರ ಮೊದಲ ದಿನದ ಗಳಿಕೆಯಲ್ಲೇ ಹೊಸ ದಾಖಲೆಯನ್ನು ಬರೆದಿದೆ. ಶಾರುಖ್​ ಹೊರತುಪಡಿಸಿ, ನಯನತಾರಾ, ವಿಜಯ್​ ಸೇತುಪತಿ ಅವರಿಗೂ 'ಜವಾನ್​' ಉತ್ತಮ ಹೆಸರು ತಂದುಕೊಟ್ಟಿದೆ. ಎರಡು ದಿನದ ಕಲೆಕ್ಷನ್​ನೊಂದಿಗೆ ಸಿನಿಮಾವು ಭಾರತದಲ್ಲಿ 100 ಕೋಟಿ ರೂ. ಗಡಿ ದಾಟಿದೆ.

'ಜವಾನ್​' ಕಲೆಕ್ಷನ್': 'ಜವಾನ್​' ಸಿನಿಮಾ ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದೆ. ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರ ಫಸ್ಟ್​ ಡೇ 74.5 ಕೋಟಿ ರೂಪಾಯಿಗೂ ಹೆಚ್ಚು ಸಂಪಾದಿಸಿದೆ. ಸಿನಿಮಾವು ಹಿಂದಿ ಭಾಷೆಯಲ್ಲಿ 65.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ್ದರೆ, ಉಳಿದ ಮೊತ್ತವು ಸಿನಿಮಾದ ಆವೃತ್ತಿಯಿಂದ ಬಂದಿದೆ. ವಿಶ್ವದಾದ್ಯಂತ ಮೊದಲ ದಿನವೇ ಚಿತ್ರವು 100 ಕೋಟಿ ಕ್ಲಬ್​ ಸೇರಿದೆ. ಚಿತ್ರ ಸುಮಾರು 129.6 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ.

ಸ್ಯಾಕ್ನಿಲ್​ ಅಂದಾಜು ವರದಿಯ ಪ್ರಕಾರ, ಜವಾನ್​ ಆರಂಭಿಕ ದಿನಕ್ಕಿಂತ ಎರಡನೇ ದಿನ ಕಡಿಮೆ ಗಳಿಸಿದೆ. ಚಿತ್ರವು ಸೆಕೆಂಡ್​ ಡೇ ಒಟ್ಟು 50.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ಅಂದಾಜು ಸರಿಯಾದಲ್ಲಿ ಚಿತ್ರ ಒಟ್ಟು ಭಾರತದ ಬಾಕ್ಸ್​​ ಆಫೀಸ್​ನಲ್ಲಿ 125 ಕೋಟಿ ರೂಪಾಯಿ ಸಂಗ್ರಹಿಸಿದೆ. ವಿಶ್ವದಾದ್ಯಂತ ನೋಡುವುದಾದರೆ, ಚಿತ್ರವು 200 ಕೋಟಿ ರೂಪಾಯಿಗಳನ್ನು ದಾಟಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇಂದು ಮತ್ತು ನಾಳೆ ಕಲೆಕ್ಷನ್​ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಅಭಿಮಾನಿಗಳ ಮೇಲೆ ಪ್ರೀತಿಯ ಧಾರೆಯೆರೆದ ಶಾರುಖ್​ ಖಾನ್​​...ಜವಾನ್​ ನಟನ ಫ್ಯಾನ್ಸ್ ಫುಲ್​ ಖುಷ್​

ಮೂರನೇ ದಿನದ ಕಲೆಕ್ಷನ್​?: ವಾರಾಂತ್ಯವಾದ ಇಂದು ಮತ್ತು ನಾಳೆ ಥಿಯೇಟರ್​ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಲಿದೆ. ಚಿತ್ರವು ಮೂರನೇ ದಿನಕ್ಕೆ ಕಾಲಿಟ್ಟಿದ್ದು, 200 ಕೋಟಿಯತ್ತ ಸಾಗುತ್ತಿದೆ. ಮೊದಲ ವಾರಾಂತ್ಯದಲ್ಲಿ ವಿಶ್ವದಾದ್ಯಂತ ಜವಾನ್​ 250 ಕೋಟಿಗೂ ಹೆಚ್ಚು ಬ್ಯುಸಿನೆಸ್​ ಮಾಡಲಿದೆ. ಶನಿವಾರವಾದ ಇಂದು ಚಿತ್ರವು ಗಲ್ಲಾಪೆಟ್ಟಿಗೆ ತುಂಬಿಸಲಿದೆ. ಇಂದು ವಿಶ್ವದಾದ್ಯಂತ ಗಳಿಕೆಯೂ 200 ಕೋಟಿ ರೂಪಾಯಿಗಳನ್ನು ದಾಟಲಿದೆ. ಸ್ಯಾಕ್ನಿಲ್​ ಪ್ರಕಾರ, ಚಿತ್ರವು ಮೂರನೇ ದಿನಕ್ಕೆ ಭಾರತದಲ್ಲಿ 70 ಕೋಟಿ ಗಳಿಸಲಿದೆ. ಈ ಮೂಲಕ ವಿಶ್ವದಾದ್ಯಂತ ಚಿತ್ರದ ಕಲೆಕ್ಷನ್​ 200 ಕೋಟಿ ದಾಟಲಿದೆ.

'ಜವಾನ್' ಸಿನಿಮಾವನ್ನು ತಮಿಳು ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ.​ ಚಿತ್ರದಲ್ಲಿ ಶಾರುಖ್​ ಖಾನ್​ ಅಲ್ಲದೇ, ದಕ್ಷಿಣ ಭಾರತದ ಪ್ರಮುಖ ನಟ ನಟಿಯರಾಗಿರುವ ನಯನತಾರ, ವಿಜಯ್​​ ಸೇತುಪತಿ ಇದೇ ಮೊದಲ ಬಾರಿಗೆ ಬಾಲಿವುಡ್​ನಲ್ಲಿ ಮಿಂಚು ಹರಿಸಿದ್ದಾರೆ. ಇದರ ಜೊತೆಗೆ ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ರಿದ್ದಿ ಡೊಗ್ರಾ ಕೂಡ ಬಣ್ಣ ಹಚ್ಚಿದ್ದಾರೆ. ಗೌರವ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ಸಂಜಯ್​ ದತ್​​​ ನಟನೆ ಚಿತ್ರದ ಮತ್ತೊಂದು ಹೈಲೈಟ್​ ಆಗಿದೆ.

ಇದನ್ನೂ ಓದಿ: ಬಿಡುಗಡೆಯಾದ ಮೊದಲ ದಿನವೇ ಬಾಂಗ್ಲಾದೇಶದಲ್ಲಿ 'ಜವಾನ್​' ಪ್ರದರ್ಶನ; ಶಾರುಖ್​ಗೆ ಮತ್ತೊಂದು ಯಶಸ್ಸು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.