ETV Bharat / entertainment

'ನಾನು Jr NTR ಅವರ ದೊಡ್ಡ ಅಭಿಮಾನಿ': 'ಆರ್​ಆರ್​ಆರ್​' ಸಿನಿಮಾ ಕೊಂಡಾಡಿದ ಜಪಾನ್​ ವಿದೇಶಾಂಗ ಸಚಿವ - etv bharat kannada

ಆಸ್ಕರ್​ ವಿಜೇತ 'ಆರ್​ಆರ್​ಆರ್'​ ಸಿನಿಮಾವನ್ನು ಜಪಾನಿನ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಅವರು ಕೊಂಡಾಡಿದ್ದಾರೆ.

Japanese FM Yoshimasa Hayashi
ಯೋಶಿಮಾಸಾ ಹಯಾಶಿ
author img

By

Published : Jul 29, 2023, 5:41 PM IST

ಸೌತ್​ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ 'ಆರ್​ಆರ್​ಆರ್'​ ಸಿನಿಮಾಗೆ ಸಲ್ಲುತ್ತದೆ. ಎಸ್​ಎಸ್​ ರಾಜಮೌಳಿ ಅದ್ಭುತ ನಿರ್ದೇಶನ ಶೈಲಿ, ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ಚರಣ್​ ಅಮೋಘ ಅಭಿನಯದ ಕಾಂಬಿನೇಶನ್​ನಲ್ಲಿ ಮೂಡಿ ಬಂದ ಈ ಚಿತ್ರ ಭಾರತೀಯ ಚಿತ್ರರಂಗದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದೆ. ಈ ವರ್ಷದ ಆರಂಭದಲ್ಲಿ ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಮುಡಿಗೇರಿಸಿಕೊಳ್ಳುವುದರ ಮೂಲಕ 'ಆರ್​ಆರ್​ಆರ್​ ದಿ ಬೆಸ್ಟ್​ ಸಿನಿಮಾ' ಎನಿಸಿಕೊಂಡಿದೆ.

ಈ ಸಿನಿಮಾದಿಂದ ರಾಜಮೌಳಿ ಜೊತೆಗೆ ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ಚರಣ್​ ಜನಪ್ರಿಯತೆಯೂ ಹೆಚ್ಚಿದೆ. ಅವರು ಪ್ರಪಂಚದ ವಿವಿಧ ಭಾಗಗಳಿಂದ ಹೆಚ್ಚಿನ ಮೆಚ್ಚುಗೆ ಗಳಿಸಿದ್ದಾರೆ. ಜಪಾನಿನ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಅವರು ಇತ್ತೀಚೆಗೆ ಆರ್​ಆರ್​ಆರ್​ ಸಿನಿಮಾವನ್ನು ಹೊಗಳಿದ್ದಾರೆ. ಜೂನಿಯರ್​ ಎನ್​ಟಿಆರ್​ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.

ಆರ್​ಆರ್​ಆರ್​ ಸಿನಿಮಾದಲ್ಲಿ ಜೂನಿಯರ್​ ಎನ್​ಟಿಆರ್​ ಅವರನ್ನು ಒಳಗೊಂಡ ದೃಶ್ಯಗಳು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿದೆ. ಹೀಗಾಗಿಯೇ ಜಾಗತಿಕ ಮಟ್ಟದಲ್ಲಿ ಅವರ ನಟನೆಗೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ಜಪಾನ್​ನಲ್ಲಿ ಜೂನಿಯರ್​ ಎನ್​ಟಿಆರ್​ ಅವರ ಜನಪ್ರಿಯತೆ ಮತ್ತು ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಯೋಶಿಮಾಸಾ ಹಯಾಶಿ ಅವರು ಕೂಡ ನಟನ ಅಭಿಮಾನಿಯೆಂದು ಒಪ್ಪಿಕೊಂಡಿದ್ದಾರೆ. ಅವರನ್ನು ಜಪಾನ್​ ರಾಷ್ಟ್ರದ ಜನರು ಆರಾಧಿಸುವ ಭಾರತೀಯ ನಟನನ್ನಾಗಿ ಮಾಡಿದ್ದಾರೆ.

ಇದನ್ನೂ ಓದಿ: ಥಿಯೇಟರ್​ನಲ್ಲಿ ಧೂಳೆಬ್ಬಿಸಿದ 'ಬ್ರೋ': ಮೊದಲ ದಿನವೇ 30 ಕೋಟಿ ಬಾಚಿದ ಸಿನಿಮಾ..​

ಆರ್​ಆರ್​ಆರ್​ ಚಿತ್ರದಲ್ಲಿನ ಜೂನಿಯರ್​ ಎನ್​ಟಿಆರ್​ ಅವರ ಅಭಿನಯವು ಯೋಶಿಮಾಸಾ ಹಯಾಶಿ ಅವರನ್ನು ಹೆಚ್ಚು ಪ್ರಭಾವಿತರನ್ನಾಗಿಸಿದೆ. ಹೀಗಾಗಿಯೇ ಅವರು ಜೂನಿಯರ್​ ಎನ್​ಟಿಆರ್​ ಅವರ ಅಭಿಮಾನಿಯೆಂದು ಹೇಳಿದ್ದಾರೆ. ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಬಂದಿದ್ದ ಹಯಾಶಿ ನಿನ್ನೆ ರಾತ್ರಿ ದೆಹಲಿಯಲ್ಲಿ ಎಸ್​ಎಸ್​ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾವನ್ನು ವೀಕ್ಷಿಸಿದರು. ಬಳಿಕ ಭಾರತೀಯ ವಿದೇಶಾಂಗ ಸಚಿವ ಎಸ್​ ಜೈಶಂಕರ್​ ಅವರೊಂದಿಗೆ ಇಂಡೋ-ಜಪಾನ್ ಫಾರಂ ಕಾನ್ಫರೆನ್ಸ್​ ಭಾಗವಹಿಸಿದರು.

'ಆರ್​ಆರ್​ಆರ್​ ಚಿತ್ರವನ್ನು ತುಂಬಾ ಇಷ್ಟಪಟ್ಟಿದ್ದೇನೆ..' ಈ ವೇಳೆ ಹಯಾಶಿ ಅವರು ಭಾರತೀಯ ಚಿತ್ರರಂಗದ ಬಗ್ಗೆ ಮಾತನಾಡಿದರು. "ಭಾರತೀಯ ಚಿತ್ರಗಳಿಗೆ ನಮ್ಮ ದೇಶದಲ್ಲಿ ಉತ್ತಮ ಮನ್ನಣೆ ಸಿಗುತ್ತಿದೆ. ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ಚರಣ್​ ಅಭಿನಯದ ಆರ್​ಆರ್​ಆರ್​ ಸಿನಿಮಾ ಜಪಾನಿನಲ್ಲಿ ಬಹಳ ಜನಪ್ರಿಯವಾಗಿದೆ. ನಾನು ಆರ್​ಆರ್​ಆರ್​ ಚಿತ್ರವನ್ನು ತುಂಬಾ ಇಷ್ಟಪಟ್ಟಿದ್ದೇನೆ. ಜೂನಿಯರ್​ ಎನ್​ಟಿಆರ್​ ಅಭಿನಯ ತುಂಬಾ ಚೆನ್ನಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಟೋಕಿಯೋದಲ್ಲಿನ ಹಲವಾರು ಭಾರತೀಯ ರೆಸ್ಟೋರಂಟ್​ಗಳಲ್ಲಿ ಪ್ರಸಿದ್ಧ ಹೈದರಾಬಾದಿ ಬಿರಿಯಾನಿಯನ್ನು ಅಲ್ಲಿನ ಜನ ಪ್ರೀತಿಯಿಂದ ಸವಿಯುತ್ತಿರುವುದಾಗಿ ಸಚಿವರು ಹೇಳಿದರು.

ಇದನ್ನೂ ಓದಿ: ಕರಣ್​ ಜೋಹರ್​ ತರಾಟೆಗೆ ತೆಗೆದುಕೊಂಡ ಕಂಗನಾ ರಣಾವತ್.. ಸೌತ್​ ಸ್ಟಾರ್ಸ್ ನೋಡಿ ಕಲಿಯಿರಿ ಎಂದು ರಣ್​ವೀರ್​ಗೆ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.