ETV Bharat / entertainment

ಖುಷಿ ಜನ್ಮದಿನಕ್ಕೆ ವಿಶೇಷವಾಗಿ ಶುಭಕೋರಿದ ಸಹೋದರಿ ಜಾನ್ವಿ ಕಪೂರ್

ಖುಷಿ ಕಪೂರ್ ಹುಟ್ಟುಹಬ್ಬಕ್ಕೆ ಸಹೋದರಿ, ಬಾಲಿವುಡ್ ನಟಿ ಜಾನ್ವಿ ಕಪೂರ್ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

Janhvi Kapoor special post for Khushi birthday
ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್
author img

By

Published : Nov 5, 2022, 3:24 PM IST

ಬಾಲಿವುಡ್ ನಟಿ ಜಾನ್ವಿ ಕಪೂರ್ ತಂಗಿ, ಸಹೋದರಿ ಖುಷಿ ಕಪೂರ್ ಇಂದು 22ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ಸಹೋದರಿ ಜಾನ್ವಿ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಮತ್ತು ದಿವಂಗತ ನಟಿ ಶ್ರೀದೇವಿ ಅವರ ಪುತ್ರಿಯರಾದ ಜಾನ್ವಿ ಮತ್ತು ಖುಷಿ ಇಬ್ಬರೂ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರು. ಸಾಮಾಜಿಕ ಮಾಧ್ಯಮದಲ್ಲಿ ಬಗೆ ಬಗೆಯ ಫೋಟೋ ಹಂಚಿಕೊಳ್ಳುವುದರಲ್ಲಿ, ಪ್ರೀತಿ ವ್ಯಕ್ತಪಡಿಸುವುದರಲ್ಲಿ ವಿಫಲರಾಗಿಲ್ಲ. ಅದರಂತೆ ಇಂದು ಕೂಡ ಜಾನ್ವಿ ಕಪೂರ್ ಅವರು ಖುಷಿ ಕಪೂರ್ ಫೋಟೋ ಶೇರ್ ಮಾಡಿ ಜನ್ಮದಿನಕ್ಕೆ ಶುಭ ಕೋರಿದ್ದಾರೆ.

Janhvi Kapoor special post for Khushi birthday
ಜಾನ್ವಿ ಕಪೂರ್ ಪೋಸ್ಟ್

ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​ ಮಾಡಿರುವ ಜಾನ್ವಿ ಕಪೂರ್, ''ಇಂದು ನನ್ನ ಮೆಚ್ಚಿನ ವ್ಯಕ್ತಿಯ ಜನ್ಮದಿನ, ಪ್ರಪಂಚದಲ್ಲೇ ನಾನು ಕಂಡ ಉತ್ತಮ ವ್ಯಕ್ತಿ, ನನ್ನ ಸಂಪೂರ್ಣ ಹೃದಯ ಮತ್ತು ಲೈಫ್​ಲೈನ್​​, ಐ ಲವ್​ ಯೂ ಖುಷಿ'' ಎಂದು ಬರೆದಿದ್ದಾರೆ.

ಇದನ್ನೂ ಓದಿ: ಕಾಂತಾರ-2 ಬಗ್ಗೆ ರಿಷಬ್ ಹೇಳಿದ್ದೇನು, ಬಾಲಿವುಡ್​ಗೆ ಎಂಟ್ರಿ ಕೊಡ್ತಾರಾ ಶೆಟ್ರು?

ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್, ಖುಷಿ ಕಪೂರ್ ಮತ್ತು ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ತಮ್ಮ ಚೊಚ್ಚಲ ಸಿನಿಮಾದ ಚಿತ್ರೀಕರಣವನ್ನು ಈಗಾಗಲೇ ಪ್ರಾರಂಭಿದ್ದಾರೆ. ಜೋಯಾ ಅಖ್ತರ್ ಅವರ ಚಿತ್ರದ ಮೂಲಕ ಈ ಮೂವರು ಹೊಸ ಪ್ರತಿಭೆಗಳು ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

'ಆರ್ಚಿ ಕಾಮಿಕ್ಸ್​' ಒಂದು ಆ್ಯಕ್ಷನ್ ಮತ್ತು​ ಥ್ರಿಲ್ಲಿಂಗ್​ ಕಥೆಯಾಗಿದೆ. ಜೋಯಾ ಮತ್ತು ರೀಮಾ ಕಾಗ್ತಿ ಅವರ ಬ್ಯಾನರ್ ಟೈಗರ್ ಬೇಬಿ ಪ್ರೊಡಕ್ಷನ್ಸ್ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಇನ್ನೂ ನಟಿ ಜಾನ್ವಿ ಕಪೂರ್ ಅಭಿನಯದ ಮಿಲಿ ಚಿತ್ರ ನಿನ್ನೆ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಗಳಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.