ETV Bharat / entertainment

'ಅಶ್ಲೀಲ ವೆಬ್​ಸೈಟ್​ಗಳಲ್ಲಿ ಕಾಣಿಸಿಕೊಂಡಿದ್ದೆ': ಬಾಲ್ಯದ ಕಹಿ ನೆನಪುಗಳನ್ನು ತೆರೆದಿಟ್ಟ ಜಾಹ್ನವಿ ಕಪೂರ್​ - etv bharat kannada

'ಚಿಕ್ಕ ವಯಸ್ಸಿನಲ್ಲಿ ಸಿಗುತ್ತಿದ್ದ ಮನ್ನಣೆ ಆಹ್ಲಾದಕರ ಅನುಭವವಾಗಿರಲಿಲ್ಲ' ಎಂದು ನಟಿ ಜಾಹ್ನವಿ ಕಪೂರ್​ ಬಾಲ್ಯದ ದಿನಗಳ ಕಹಿ ನೆನಪುಗಳನ್ನು ತೆರೆದಿಟ್ಟಿದ್ದಾರೆ.

Janhvi Kapoor recalls finding herself on 'almost pornographic pages'
'ಅಶ್ಲೀಲ ವೆಬ್​ಸೈಟ್​ಗಳಲ್ಲಿ ಕಾಣಿಸಿಕೊಂಡಿದ್ದೆ': ಬಾಲ್ಯದ ಕಹಿ ನೆನಪುಗಳನ್ನು ತೆರೆದಿಟ್ಟ ಜಾಹ್ನವಿ ಕಪೂರ್​
author img

By ETV Bharat Karnataka Team

Published : Sep 29, 2023, 10:55 PM IST

ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಟಿ, ದಿ. ಶ್ರೀದೇವಿ ಮತ್ತು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್​ ದಂಪತಿಯ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್​ನಲ್ಲಿ ಬೆಳೆಯುತ್ತಿರುವ ನಟಿ. ಹಿಂದಿ ಚಿತ್ರರಂಗದಲ್ಲಿ ಈಗಾಗಲೇ ತಮ್ಮ ವೃತ್ತಿ ಜೀವನ ಪ್ರಾರಂಭಿಸಿ ಯಶಸ್ಸು ಕಾಣುತ್ತಿರುವ ತಾರೆ ಸೌತ್​ ಇಂಡಸ್ಟ್ರಿಗೂ ಎಂಟ್ರಿ ಕೊಟ್ಟಿದ್ದಾರೆ. ಈ ಮಧ್ಯೆ ಕೆಲವು ವೈಯಕ್ತಿಕ ವಿಚಾರಗಳನ್ನು ಸಾರ್ವಜನಿಕವಾಗಿ ತೆರೆದಿಟ್ಟಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಸಿಗುತ್ತಿದ್ದ ಮನ್ನಣೆ ಆಹ್ಲಾದಕರ ಅನುಭವವಾಗಿರಲಿಲ್ಲ ಎಂದು ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಜಾಹ್ನವಿ ಕಪೂರ್​, ತಮ್ಮ ಪೋಷಕರು ಸೆಲೆಬ್ರಿಟಿಗಳಾಗಿದ್ದ ಕಾರಣಕ್ಕಾಗಿ 10 ವರ್ಷವಿರುವಾಗಲೇ ಪಾಪರಾಜಿಗಳು ಜಾನು ಫೋಟೋವನ್ನು ತೆಗೆಯಲು ಪ್ರಾರಂಭಿಸಿದ್ದರಂತೆ. ಅಂದು ತೆಗೆದ ಫೋಟೋಗಳು Yahoo ನಂತಹ ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿದ್ದವು. ಆ ಫೋಟೋಗಳನ್ನು ಒಮ್ಮೆ ನೋಡುವಾಗ ನಟಿ ಅಹಿತಕರ ಭಾವನೆಯನ್ನು ಅನುಭವಿಸಿರುವುದಾಗಿ ಹೇಳಿದರು. ಕೆಲವು ಅಶ್ಲೀಲ ವೆಬ್​ಸೈಟ್​ಗಳಲ್ಲಿ ನನ್ನ ಫೋಟೋಗಳು ಕಾಣಿಸಿಕೊಂಡಿದ್ದವು ಎಂದು ಅವರು ನೆನಪಿಸಿಕೊಂಡರು.

ಒಂದು ದಿನ ಶಾಲೆಯ ಲ್ಯಾಬ್​ನ ಕಂಪ್ಯೂಟರ್​ಗಳಲ್ಲಿ ಎಲ್ಲಾ ಸಹಪಾಠಿಗಳ ಮುಂದೆ ಪಾಪರಾಜಿಗಳು ತೆಗೆದ ಆ ಫೋಟೋಗಳು ಕಾಣಿಸಿಕೊಂಡಾಗ ಜಾಹ್ನವಿ ಕಪೂರ್​ ಅವರಿಗೆ ಕೇವಲ 10 ವರ್ಷವಂತೆ. ಆ ಫೋಟೋಗಳು ಅವರಿಗೆ ತುಂಬಾ ಅಹಿತಕರ ಭಾವನೆಯನ್ನು ತಂದಿಕೊಟ್ಟಿತಂತೆ. ಸಹಪಾಠಿಗಳ ಮುಂದೆ ಅವರನ್ನು ಜನಪ್ರಿಯವಾಗಿಸುವ ಬದಲು ಮುಜುಗರಕ್ಕೀಡಾಗುವಂತೆ ಮಾಡಿತ್ತು. ಜೊತೆಗೆ ಈ ಫೋಟೋಗಳು ಅವರ ಫ್ರೆಂಡ್ಸ್​ ಮತ್ತು ಶಿಕ್ಷಕರು ಜಾಹ್ನವಿ ಅವರನ್ನು ಪರಕೀಯಳಂತೆ ಕಾಣುವಂತೆ ಮಾಡಿತ್ತು ಎಂದು ಹಳೆಯ ದಿನಗಳ ಕಹಿ ಘಟನೆಗಳನ್ನು ಹಂಚಿಕೊಂಡರು.

ಇದನ್ನೂ ಓದಿ: 'ಬವಾಲ್​' ಸಿನಿಮಾದ ವಿರುದ್ಧ ಯಹೂದಿ ಸಂಘಟನೆ ಚಾಟಿ.. ಒಟಿಟಿಯಿಂದ ಸಿನಿಮಾ ತೆಗೆದುಹಾಕುವಂತೆ ಪ್ರೈಮ್​ ವಿಡಿಯೋಗೆ ಬಹಿರಂಗ ಪತ್ರ

ಜಾಹ್ನವಿ ಹೇಳುವಂತೆ, ಯಾರೂ ಅವರನ್ನು ಅರ್ಥಮಾಡಿಕೊಂಡಿರಲಿಲ್ಲವಂತೆ. ಹೀಗಾಗಿ ಅವರನ್ನು ಯಾರೂ ಇಷ್ಟ ಪಡುತ್ತಿರಲಿಲ್ಲ. ಆದರೆ ಆ ವಯಸ್ಸಿನಲ್ಲಿ ಅವರಿಗೆ ಅದ್ಯಾವುದೂ ಅರ್ಥವಾಗಿರಲಿಲ್ಲ. ಅವರ ಸ್ನೇಹಿತರು ಅವರನ್ನು ವಿಭಿನ್ನವಾಗಿ ನೋಡಲು ಪ್ರಾರಂಭಿಸಿದ್ದರಂತೆ. ತಮಾಷೆ ಮಾಡಿ ನಗುತ್ತಿದ್ದರಂತೆ. ಜಾಹ್ನವಿ ಆಗಲೇ ಪ್ರಸಿದ್ಧ ಆಗಿದ್ದರಿಂದ ಅಂತಹ ಕೆಲಸಗಳನ್ನು ಮಾಡಬೇಕಾಗಿಲ್ಲ ಎಂಬೆಲ್ಲಾ ಮಾತುಗಳನ್ನು ಅವರು ಕೇಳಿಸಿಕೊಂಡಿದ್ದರಂತೆ. ಹೀಗೆ ತೀರಾ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಕಹಿ ಘಟನೆಗಳು ನಡೆದಿತ್ತು ಎಂದು ಅವರು ನೆನಪಿಸಿಕೊಂಡರು.

ಜಾಹ್ನವಿ ಕಪೂರ್​ ತಮ್ಮ ಹದಿಹರೆಯಕ್ಕೆ ಕಾಲಿಟ್ಟಾಗ ಇನ್ನಷ್ಟು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿದ್ದರಂತೆ. ಅನೇಕ ಅಶ್ಲೀಲ ಪೇಜ್​ಗಳಲ್ಲಿ ಅವರದ್ದೇ ಫೋಟೋಗಳು ಕಂಡುಬಂದಿತ್ತಂತೆ. AI ತಂತ್ರಜ್ಞಾನದಲ್ಲಿನ ಪ್ರಗತಿಯಿಂದಾಗಿ ಇಂತಹ ಫೋಟೋಗಳು ಸಿದ್ಧವಾಗುತ್ತಿದ್ದವು. ಜನರು ಈ ಫೋಟೋಗಳನ್ನು ನೋಡಿ ನಿಜವೆಂದು ತಪ್ಪು ತಿಳಿಯುತ್ತಾರೆ. ಇದು ಅವರ ಕಳವಳಕ್ಕೆ ಕಾರಣವಾಗಿತ್ತು ಎಂದು ಒತ್ತಿ ಹೇಳಿದರು.

ಕೆಲಸದ ವಿಚಾರವಾಗಿ ನೋಡುವುದಾದರೆ, ನಿತೇಶ್ ತಿವಾರಿಯವರ 'ಬವಾಲ್' ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಜಾಹ್ನವಿ ಇತ್ತೀಚೆಗೆ ಸುಧಾಂಶು ಸರಿಯಾ ಅವರ 'ಉಲಾಜ್' ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ನಟ ಶರಣ್ ಶರ್ಮಾ ನಿರ್ದೇಶನದ ಮಿಸ್ಟರ್ ಅಂಡ್ ಮಿಸಸ್ ಮಹಿ ಬಿಡುಗಡೆಗೆ ಸಿದ್ಧವಾಗಿದೆ. ಹಿಂದಿಯ ಹೊರತಾಗಿ, ಕೊರಟಾಲ ಶಿವ ನಿರ್ದೇಶನದ ಜೂನಿಯರ್ ಎನ್‌ಟಿಆರ್ ಅಭಿನಯದ ದೇವರಾ ಮೂಲಕ ತೆಲುಗು ಚಿತ್ರರಂಗದಲ್ಲಿ ಮಿಂಚಲು ಜಾಹ್ನವಿ ಸಜ್ಜಾಗಿದ್ದಾರೆ.

ಇದನ್ನೂ ಓದಿ: ಸಿದ್ದಾರ್ಥ್​ ಆನಂದ್​ರ ಸಿನಿಮಾಗೆ ಜೊತೆಯಾಗಲಿದ್ದಾರೆ ಟೈಗರ್​ ಶ್ರಾಫ್ -​ ಜಾಹ್ನವಿ ಕಪೂರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.