'ಅವತಾರ್' ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರು, ವೇಗವಾಗಿ ವಿಸ್ತರಿಸುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಅಪಾಯಗಳನ್ನು ತರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 1984 ರಲ್ಲಿ ಕೃತಕ ಬುದ್ಧಿಮತ್ತೆಯ ಬೆಳವಣಿಗೆಗಳ ಹಿನ್ನೆಲೆಯಾಗಿ 'ದಿ ಟರ್ಮಿನೇಟರ್' ವೈಜ್ಞಾನಿಕ ಕಾದಂಬರಿಯನ್ನು ಅವರು ರಚಿಸಿದ್ದಾರೆ. ಚಿತ್ರ ಒಂದು ಎಚ್ಚರಿಕೆ ಎಂದಿದ್ದಾರೆ. ಮಾಧ್ಯಮ ಕಂಪನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜೇಮ್ಸ್, ಕೃತಕ ಬುದ್ಧಿಮತ್ತೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬಹಿರಂಗಪಡಿಸಿದರು.
ಕೃತಕ ಬುದ್ಧಿಮತ್ತೆಯ 'ಆಯುಧೀಕರಣ' ದುರಂತ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಅವರು ನಂಬುತ್ತಿರುವುದಾಗಿ ಹೇಳಿದರು. ಇತ್ತೀಚೆಗೆ, ಕೆಲವು ಉದ್ಯಮಿಗಳು ಕೃತಕ ಬುದ್ಧಿಮತ್ತೆ ಮಾನವ ಜನಾಂಗದ ಉಳಿವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ, "ನಾನು ಅವರ ಕಾಳಜಿಯನ್ನು ಒಪ್ಪುತ್ತೇನೆ. ನಾನು 1984 ರಲ್ಲಿ ನಿಮಗೆ ಎಚ್ಚರಿಕೆ ನೀಡಿದ್ದೆ. ಆದರೆ ನೀವು ಗಮನ ಹರಿಸಲಿಲ್ಲ. 'ದಿ ಟರ್ಮಿನೇಟರ್' ಕಥೆಯು ಸೂಪರ್ ಕಂಪ್ಯೂಟರ್ನಿಂದ ರಚಿಸಲ್ಪಟ್ಟ ಸೈಬರ್ನೆಟಿಕ್ ಹಂತಕ ಸ್ಕೈನೆಟ್ ಸುತ್ತ ಸುತ್ತುತ್ತದೆ" ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆಯ ಆಯುಧೀಕರಣವು ಅದನ್ನು ಹೆಚ್ಚು ಅಪಾಯಕಾರಿಯಾಗಿಸುತ್ತದೆ ಎಂದು ಜೇಮ್ಸ್ ಕ್ಯಾಮರೂನ್ ನಂಬಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಪರ್ಧೆಯು ಪರಮಾಣು ಶಸ್ತ್ರಾಸ್ತ್ರಗಳಲ್ಲಿನ ಪ್ರಸ್ತುತ ಸ್ಪರ್ಧೆಯಂತೆಯೇ ಅದೇ ಮಟ್ಟವನ್ನು ತಲುಪುತ್ತದೆ ಎಂದು ನೀವು ಭಾವಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಜೇಮ್ಸ್, ನಾವು ಅವುಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸದಿದ್ದರೆ, ಬೇರೆಯವರು ಮಾಡುತ್ತಾರೆ. ಹಾಗಾಗಿ ಪೈಪೋಟಿ ಹೆಚ್ಚಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: 100 ಕೋಟಿ ಗಳಿಸಿದ 'ಕ್ಯಾರಿ ಆನ್ ಜಟ್ಟಾ 3': ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಪಂಜಾಬಿ ಚಿತ್ರವಿದು..
ದಿನನಿತ್ಯದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಬಗ್ಗೆ ಮಾತನಾಡಿದ ಜೇಮ್ಸ್ ಕ್ಯಾಮರೂನ್, ಕಂಪ್ಯೂಟರ್ಗಳು ಎಷ್ಟು ವೇಗವಾಗಿ ಕೆಲಸ ಮಾಡುತ್ತವೆ ಎಂದರೆ ಮನುಷ್ಯರು ಅವುಗಳ ವಿರುದ್ಧ ಗೆಲ್ಲಲು ಸಾಧ್ಯವಾಗದಷ್ಟು. ಆಗ ಶಾಂತಿ ಮಾತುಕತೆ ಮತ್ತು ಕದನ ವಿರಾಮಕ್ಕೆ ಅವಕಾಶವೇ ಇರುವುದಿಲ್ಲ. ಅಂತಹ AI ಗಳನ್ನು ನಿಯಂತ್ರಿಸಲು, 'ಡಿ-ಎಸ್ಕಲೇಶನ್' ಮೇಲೆ ಕೇಂದ್ರೀಕರಿಸಬೇಕು. ಆದಾಗ್ಯೂ, ಕೃತಕ ಬುದ್ಧಿಮತ್ತೆ ವ್ಯವಸ್ಥೆಯು ಅಂತಹ ತತ್ವಗಳಿಗೆ ಬದ್ಧವಾಗಿದೆಯೇ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ ಎಂದು ಹೇಳಿದರು.
ಜೇಮ್ಸ್ ಕ್ಯಾಮರೂನ್ ಈ ಹಿಂದೆಯೂ ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದರು. AI ನೊಂದಿಗೆ ವ್ಯಾಪಕವಾದ ಪ್ರಯೋಜನಗಳಿದ್ದರೂ, ಇದು ಹಾನಿಕಾರಕ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದರು. ಜಗತ್ತು ಕೊನೆಗೊಳ್ಳಬಹುದು ಎಂದು ಒಪ್ಪಿಕೊಂಡಿದ್ದರು. ಕೆಲವು ದಿನಗಳ ಹಿಂದೆ, ಸುಧಾರಿತ AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ವ್ಯವಸ್ಥೆಗಳ ಅಭಿವೃದ್ಧಿಯನ್ನು ನಿಲ್ಲಿಸಬೇಕು ಎಂದು ಅನೇಕ ಟೆಕ್ ತಜ್ಞರು ಮುಕ್ತ ಪತ್ರವನ್ನು ಬರೆದಿದ್ದಾರೆ. ಇದಕ್ಕೆ ಟ್ವಿಟರ್ ಸಿಇಒ ಎಲೋನ್ ಮಸ್ಕ್ ಮತ್ತು ಆಪಲ್ ಸಹ-ಸಂಸ್ಥಾಪಕ ಸ್ಟೀವ್ ವೋಜ್ನಿಯಾಕ್ ಸೇರಿದಂತೆ 1,000 ಕ್ಕೂ ಹೆಚ್ಚು ತಜ್ಞರು ಸಹಿ ಹಾಕಿದ್ದಾರೆ. 'ಪಾಸ್ ಜೈಂಟ್ ಎಐ ಎಕ್ಸ್‌ಪರಿಮೆಂಟ್ಸ್' ಹೆಸರಿನಲ್ಲಿ ಪತ್ರವನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ರಾಮ್ಚರಣ್ ಜೊತೆ ಪ್ರಭಾಸ್ ಸಿನಿಮಾ ಮಾಡುವುದಾಗಿ ಘೋಷಣೆ: ಸಂಭ್ರಮಿಸಿದ ಚೆರ್ರಿ - ಡಾರ್ಲಿಂಗ್ ಅಭಿಮಾನಿಗಳು