ETV Bharat / entertainment

ಥಿಯೇಟರ್​ಗಳಲ್ಲಿ ರಜನಿ ನಟನೆಯ 'ಜೈಲರ್​' ಹವಾ: 2ನೇ ದಿನದ ಕಲೆಕ್ಷನ್​ ಎಷ್ಟು ಗೊತ್ತಾ? - ಜೈಲರ್​ ಕಲೆಕ್ಷನ್​

'ಜೈಲರ್​' ಸಿನಿಮಾ ಬಿಡುಗಡೆಯಾದ ಎರಡನೇ ದಿನ 27 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ.

Jailer
ಜೈಲರ್
author img

By

Published : Aug 12, 2023, 11:32 AM IST

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಜೈಲರ್​' ಥಿಯೇಟರ್​ಗಳಲ್ಲಿ ಧೂಳೆಬ್ಬಿಸುತ್ತಿದೆ. ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ನಟನೆಯ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ. ನೆಲ್ಸನ್​​ ದಿಲೀಪ್​ ಕುಮಾರ್ ನಿರ್ದೇಶನದ ಈ ಸಿನಿಮಾವನ್ನು ನಿರೀಕ್ಷೆಗೂ ಮೀರಿ ಜನರು ವೀಕ್ಷಿಸುತ್ತಿದ್ದಾರೆ. ಕಲೆಕ್ಷನ್ ವಿಚಾರದಲ್ಲೂ ದಾಖಲೆಯ ಓಟ ಮುಂದುವರೆಸಿದೆ. ವಿಶ್ವಾದ್ಯಂತ 7000 ಸ್ಕ್ರೀನ್​ಗಳಲ್ಲಿ ಆಗಸ್ಟ್​ 10, ಗುರುವಾರದಂದು ಚಿತ್ರ ತೆರೆಗೆ ಅಪ್ಪಳಿಸಿತು. ​

  • " class="align-text-top noRightClick twitterSection" data="">

ಎರಡನೇ ದಿನದ ಕಲೆಕ್ಷನ್​: 200 ಕೋಟಿ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾವು ಮೊದಲ ದಿನ ಭಾರತದಲ್ಲಿ 48.35 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಸ್ಯಾಕ್ನಿಲ್ಕ್​ನ ವರದಿ ಪ್ರಕಾರ, ಚಿತ್ರವು 2ನೇ ದಿನ 27 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಈ ಮೂಲಕ ಬಿಡುಗಡೆಯಾದ ಎರಡು ದಿನಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 'ಜೈಲರ್​' ಚಿತ್ರವು ಒಟ್ಟು 75.35 ಕೋಟಿ ರೂಪಾಯಿ ಗಳಿಸಿದೆ. ಮೂರನೇ ದಿನವಾದ ಇಂದು 100 ಕೋಟಿ ದಾಟುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

'ಜೈಲರ್​'ಗೆ 3 ಸಿನಿಮಾಗಳು ಪೈಪೋಟಿ: ಜೈಲರ್​ ಚಿತ್ರವು ಆಗಸ್ಟ್​ 10 ರಂದು ತೆರೆ ಕಂಡಿತ್ತು. ಆ ದಿನ ಬೇರೆ ಯಾವುದೇ ಸಿನಿಮಾಗಳು ರಿಲೀಸ್​ ಆಗದ ಕಾರಣ ಉತ್ತಮ ಕಲೆಕ್ಷನ್​ ಮಾಡಿತು. ಆದರೆ, ಈ ಚಿತ್ರಕ್ಕೆ ಪೈಪೋಟಿ ನೀಡಲು ನಿನ್ನೆಯಷ್ಟೇ ಮೂರು ಸಿನಿಮಾಗಳು ಬಿಡುಗಡೆಯಾಗಿದೆ. ಸನ್ನಿ ಡಿಯೋಲ್​ ಮತ್ತು ಅಮಿಷಾ ಪಟೇಲ್​ ನಟನೆಯ ಗದರ್ 2, ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ನಟನೆಯ OMG 2 ಮತ್ತು ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ನಟನೆಯ ಭೋಲಾ ಶಂಕರ್​ ಒಂದೇ ದಿನ ತೆರೆ ಕಂಡಿವೆ.

ಹೀಗಾಗಿ ಇಡೀ ಭಾರತೀಯ ಚಿತ್ರರಂಗದ ಹಿರಿಯ ಮತ್ತು ಸ್ಟಾರ್​ ನಟರ ಸಿನಿಮಾಗಳೇ ಥಿಯೇಟರ್​ಗಳಲ್ಲಿ ರಾರಾಜಿಸುತ್ತಿದೆ. ಜೈಲರ್​ ಸಿನಿಮಾದಲ್ಲಿ ರಜನಿಕಾಂತ್​ ಜೊತೆ ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್​ ಮತ್ತು ಮಾಲಿವುಡ್​ ಸೂಪರ್​ಸ್ಟಾರ್​ ಮೋಹನ್​ಲಾಲ್​ ನಟಿಸಿರುವುದು ಕನ್ನಡ ಮತ್ತು ಮಲಯಾಳಂ ಸಿನಿ ಪ್ರೇಮಿಗಳಿಗೂ ಹಬ್ಬದಂತಾಗಿದೆ. ರಜನಿ, ಶಿವಣ್ಣ, ಲಾಲೇಟ, ಚಿರಂಜೀವಿ, ಅಕ್ಷಯ್​, ಸನ್ನಿ ಡಿಯೋಲ್ ಈ ಸ್ಟಾರ್​ ತಾರೆಯರ ಸಿನಿಮಾಗಳು ಒಮ್ಮೆಲೇ ತೆರೆ ಮೇಲೆ ಅಪ್ಪಳಿಸಿದ್ದು, ಫ್ಯಾನ್ಸ್​ಗೆ ಸಖತ್​ ಖುಷಿ ತಂದುಕೊಟ್ಟಿದೆ.​

ಚಿತ್ರತಂಡ ಹೀಗಿದೆ..: ನೆಲ್ಸನ್​​ ದಿಲೀಪ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳಿರುವ ಜೈಲರ್​ ಸಿನಿಮಾದಲ್ಲಿ ರಜನಿಕಾಂತ್​, ಶಿವ ರಾಜ್​ಕುಮಾರ್,​ ಮೋಹನ್​ ಲಾಲ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್​​, ಯೋಗಿ ಬಾಬು, ವಸಂತ್​ ರವಿ​ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. 'ಜೈಲರ್​' ಒಂದು ಆ್ಯಕ್ಷನ್ - ಪ್ಯಾಕ್ಡ್ ಎಂಟರ್‌ಟೈನರ್ ಚಿತ್ರ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ಕಲಾನಿಧಿ ಮಾರನ್ ಅವರು 200 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ: ಇಂದು ರಜನಿಕಾಂತ್​ ನಟನೆಯ 'ಜೈಲರ್'​ ಸಿನಿಮಾ ಬಿಡುಗಡೆ: ಪ್ರೀಮಿಯರ್​ ಶೋ ನೋಡಿದ ಪ್ರೇಕ್ಷಕರು ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.