ETV Bharat / entertainment

ಪ್ರತಿಯೊಬ್ಬರಿಗೂ ಇಷ್ಟವಾಗುವ ಕಥೆ 'ತೋತಾಪುರಿ 2': ನಟ ಜಗ್ಗೇಶ್​ ಮಾತು - ಈಟಿವಿ ಭಾರತ ಕನ್ನಡ

'ತೋತಾಪುರಿ 2' ಚಿತ್ರದ ಬಗ್ಗೆ ನವರಸನಾಯಕ ಜಗ್ಗೇಶ್ ಕೆಲವು ಇಂಟ್ರಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Jaggesh Starrer totapuri movie release on september 28
ನಟ ಜಗ್ಗೇಶ್
author img

By ETV Bharat Karnataka Team

Published : Sep 25, 2023, 3:40 PM IST

ನಟ ಜಗ್ಗೇಶ್​ ಮಾತನಾಡುತ್ತಿರುವುದು

ನವರಸನಾಯಕ ಜಗ್ಗೇಶ್​ ಹಾಗೂ ಡಾಲಿ ಧನಂಜಯ್​ ಮುಖ್ಯಭೂಮಿಕೆಯಲ್ಲಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ತೋತಾಪುರಿ 2'. ಸದ್ಯ ಪೋಸ್ಟರ್​ ಹಾಗೂ ಟ್ರೇಲರ್​ನಿಂದಲೇ ಕುತೂಹಲ ಹುಟ್ಟಿಸಿರುವ ಚಿತ್ರ ಇದೇ ಸೆಪ್ಟೆಂಬರ್​ 28ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಗೌರಿ ಗಣೇಶ ಹಬ್ಬಕ್ಕೆ ಅನಾವರಣಗೊಂಡ ಟ್ರೇಲರ್​ ಹಾಸ್ಯ ಪ್ರಿಯರಿಗೆ ಸಖತ್​ ಕಿಕ್​ ಕೊಡುತ್ತಿದೆ.

ಜಗ್ಗೇಶ್​ ಹಾಗೂ ಅದಿತಿ ಪ್ರಭುದೇವ ಉರ್ದು ಲವ್​ ಟ್ರ್ಯಾಕ್​ ಒಂದು ಕಡೆಯಾದ್ರೆ, ಡಾಲಿ ಮತ್ತು ಸುಮನ್ ರಂಗನಾಥ್​ ಲವ್​ ಸ್ಟೋರಿ ತುಂಬಾ ಚೆನ್ನಾಗಿದೆ. ವಿಜಯ್ ಪ್ರಸಾದ್ ನಿರ್ದೇಶನ ಹಾಗೂ ಕೆ ಎ ಸುರೇಶ್ ಅದ್ಧೂರಿ ನಿರ್ಮಾಣದ 'ತೋತಾಪುರಿ 2' ಚಿತ್ರದ ಬಗ್ಗೆ ನವರಸನಾಯಕ ಜಗ್ಗೇಶ್ ಕೆಲವು ಇಂಟ್ರಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

'ತೋತಾಪುರಿ 2' ಚಿತ್ರದ ಟ್ರೇಲರ್​ ಮಿಲಿಯನ್ ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಇದು ಸಿನಿಮಾಗೆ ಸಿಕ್ಕ ಮೊದಲ ಸಕ್ಸಸ್ ಎನ್ನುತ್ತಾ ಮಾತು ಪ್ರಾರಂಭಿಸಿದ ಜಗ್ಗೇಶ್​, "ತೋತಾಪುರಿ ಮೊದಲ ಭಾಗವನ್ನು ನೋಡಿದ ಸಿನಿ ಪ್ರೇಮಿಗಳಿಗೆ ತೋತಾಪುರಿ 2ನಲ್ಲೂ ಅಷ್ಟೇ ಕಾಮಿಡಿ ಇದೆ. ಆದರೆ ಕೆಲ ಗಂಭೀರವಾದ ವಿಚಾರಗಳನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಧನಂಜಯ್ ಹಾಗು ಸುಮನ್​ ರಂಗನಾಥ್ ನಟನೆ ಅದ್ಭುತವಾಗಿದೆ. ಎರಡು ಗಂಟೆಯ ಸಿನಿಮಾ ಸಂದೇಶದ ಜೊತೆಗೆ ಎಂಟರ್​ಟೈನ್​ಮೆಂಟ್​ ಪಕ್ಕಾ. ಇನ್ನು ಮೇಕಿಂಗ್ ಕೂಡ ಬಹಳ ಅದ್ದೂರಿಯಾಗಿ ಮೂಡಿಬಂದಿದೆ" ಎಂದರು.

"ತೋತಾಪುರಿ ಮೊದಲ ಭಾಗದಲ್ಲಿ ಎಲ್ಲರ ಪಾತ್ರ ಪರಿಚಯ ಆಗಿತ್ತು. ತೋತಾಪುರಿ 2ನಲ್ಲಿ ನೀವು ನಗುವುದು ಮಾತ್ರವಲ್ಲ, ಸಿನಿಮಾ ನೋಡಿ ಅಳುತ್ತೀರಿ. ಈ ಚಿತ್ರಕಥೆ ಬಂದಾಗ ಯಾಕೆ ಎರಡು ಭಾಗಗಳಾಗಿ ಮಾಡಬೇಕು, ಒಂದೇ ಭಾಗದಲ್ಲಿ ತೋರಿಸಬಹುದು ಅಲ್ವಾ? ಅಂತಾ ನಿರ್ದೇಶಕರಿಗೆ ಕೇಳಿದ್ದೆ. ಆಗ ಅವರು, ಒಂದು ಗಂಭೀರ ವಿಚಾರವನ್ನು ಹೇಳುವುದಕ್ಕೆ ಸ್ವಲ್ಪ ಸಮಯ ಬೇಕು ಎಂದಿದ್ದರು. ಹೀಗಾಗಿ 'ತೋತಾಪುರಿ 2' ಮಾಡಿರೋದು. ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರಗಳು ನೋಡುಗರಿಗೆ ಇಷ್ಟ ಆಗುತ್ತೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಚಿತ್ರದಲ್ಲಿ ನಾನು ಈರೇಗೌಡನ ಪಾತ್ರ ಮಾಡಿದ್ದೇನೆ. ಅದಿತಿ ಪ್ರಭುದೇವ ಮುಸ್ಲಿಂ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸಿನಿಮಾದಲ್ಲಿ ನಂಜಮ್ಮನ ಪಾತ್ರಕ್ಕೊಂದು ಅರ್ಥ ಕೊಡಲಾಗಿದೆ. ಒಟ್ಟಾರೆ ಮನುಷ್ಯರು ಮನುಷ್ಯರಾಗಿ ಬಾಳಿ ಅನ್ನೋದೆ ನಮ್ಮ ಸಂದೇಶ. ಸಂವಿಧಾನದಲ್ಲೂ ಅದನ್ನೇ ಹೇಳಿದ್ದಾರೆ. ತೋತಾಪುರಿ 2 ಚಿತ್ರದ ಕಥೆಯೇ ಇದು.." ಎಂದು ತಿಳಿಸಿದರು.

"ಚಿತ್ರದ ಮೊದಲ ಭಾಗ ನೋಡಿದ ಎಷ್ಟೋ ಮಂದಿ ಖುಷಿಯಾಗಿದ್ದಾರೆ. ಅದರಲ್ಲಿ ನನ್ನ ಐಎಎಸ್​ ಆಫೀಸರ್​ ಗೆಳೆಯರು ಸಿನಿಮಾ ನೋಡಿ ಮೆಚ್ಚಿದ್ದಾರೆ.‌ ಈಗ ತೋತಾಪುರಿ 2 ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ನಾನು ಯುಎಸ್​ನಲ್ಲಿ ಸುಮಾರು ಒಂದು ತಿಂಗಳು ವಾಸವಿದ್ದೆ. ಅಲ್ಲಿನ ನಾಲ್ಕು ಸ್ಟೇಟ್ ಸುತ್ತಿ ಬಂದಿದ್ದೇನೆ. ಅಲ್ಲಿನ ಕನ್ನಡಿಗರು ಕೂಡ ತೋತಾಪುರಿ 2 ಸಿನಿಮಾಗೆ ಕಾಯುತ್ತಿದ್ದಾರೆ" ಎಂದರು.

"ನಾನು ಜಾತಿ ಧರ್ಮವನ್ನು ಮೀರಿ ಜೀವನ ಮಾಡುತ್ತಿದ್ದೇನೆ. ಅದಕ್ಕೆ ಸಾಕ್ಷಿ ನನ್ನ ಪತ್ನಿ ಪರಿಮಳ ಜೊತೆಗಿನ ಮದುವೆ. ಆ ಕಾಲದಲ್ಲಿ ನಾನು ಜಾತಿ‌ ಮೀರಿ ಮದುವೆಯಾದೆ. ಆಗ ನನ್ನ ಸಂಬಂಧಿಕರು ನಮ್ಮನ್ನು ದೂರ ಮಾಡಿದರು‌. ಈಗ ನನ್ನ ಬೆಳವಣಿಗೆ ಹಾಗೂ ನನ್ನ‌ ಪತ್ನಿಯ ಸಾಧನೆ ನೋಡಿ ಎಲ್ಲರು ಸಂತೋಷಪಡುತ್ತಿದ್ದಾರೆ. ಆ ರೀತಿಯ ಕಥೆ ತೋತಾಪುರಿ 2 ಸಿನಿಮಾದಲ್ಲಿ ಇದೆ" ಎನ್ನುತ್ತಾರೆ ಜಗ್ಗೇಶ್​.

"ಇನ್ನು ಬ್ಯುಸಿನೆಸ್ ವಿಷಯದಲ್ಲೂ ತೋತಾಪುರಿ 2 ಸಿನಿಮಾ ಟಿವಿ ರೈಟ್ಸ್ ಹಾಗೂ ಓಟಿಟಿ ಒಳ್ಳೆ ರೇಟ್​ಗೆ ಮಾರಾಟ ಆಗಿದೆ. ಅದು ಖುಷಿ ವಿಚಾರ. ಈ ಚಿತ್ರಕ್ಕೆ ಅರುಣ್ ಆಂಡ್ರ್ಯೂ ಸಂಗೀತ ಕೊಟ್ಟಿದ್ದಾರೆ. ಡೈರೆಕ್ಟರ್ ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ಕೆ.ಎ ಸುರೇಶ್ ಅದ್ದೂರಿ ಖರ್ಚು ಮಾಡಿ ಈ ಸಿನಿಮಾ ಮಾಡಿದ್ದಾರೆ. ಇದೇ 28ಕ್ಕೆ ತೋತಾಪುರಿ 2 ಸಿನಿಮಾ ಬಿಡುಗಡೆ ಆಗುತ್ತಿದೆ. ಎಲ್ಲಾ ಕನ್ನಡಾಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ" ಎಂದು ಅವರು ಜನತೆಯಲ್ಲಿ ಮನವಿ ಮಾಡಿಕೊಂಡರು.

ಇದನ್ನೂ ಓದಿ: ನಿವೇದಿತಾ ಶಿವ ರಾಜ್‌ಕುಮಾರ್ ನಿರ್ಮಾಣದ 'ಫೈರ್ ಫ್ಲೈ' ಮೊದಲ‌ ಹಂತದ ಶೂಟಿಂಗ್ ಪೂರ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.