ETV Bharat / entertainment

'ಒಂದೊಳ್ಳೆ ಸಂಗೀತದ ಹೂರಣ ಬಡಿಸುವುದಷ್ಟೇ ನಮ್ಮ ಉದ್ದೇಶ': ಶಂಕರ್​ ಮಹಾದೇವನ್ - ಶಂಕರ್ ಮಹಾದೇವನ್ ಲೈವ್ ಇನ್ ಕನ್ಸರ್ಟ್

ಮುಂಬೈಯ ಷಣ್ಮುಖಾನಂದ ಸಭಾಂಗಣದಲ್ಲಿ ಡಿ 3ರಂದು ನಡೆಯುವ 'ಶಂಕರ್ ಮಹಾದೇವನ್ ಲೈವ್ ಇನ್ ಕನ್ಸರ್ಟ್' ಕಾರ್ಯಕ್ರಮದಲ್ಲಿ ಸಂಗೀತದ ರಸದೌತಣ ನೀಡಲು ಶಂಕರ್​ ಮಹಾದೇವನ್​ ತಯಾರಿಯಲ್ಲಿದ್ದಾರೆ.

Singer Shankar Mahadevan
ಗಾಯಕ ಶಂಕರ್​ ಮಹಾದೇವನ್​
author img

By

Published : Dec 1, 2022, 2:13 PM IST

ಮುಂಬೈ: ಸಾಂಪ್ರದಾಯಿಕ ಸಾರ್ವಜನಿಕ ಪ್ರದರ್ಶನದ ಮೂಲಕ ಒಂದು ಉತ್ತಮ ಸಂಗೀತವನ್ನು ಕೇಳುಗರಿಗೆ ಉಣಬಡಿಸುವುದೇ ನಮ್ಮ ಉದ್ದೇಶ ಎಂದು ಲೈವ್​ ಸಂಗೀತ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿರುವ ಗಾಯಕ, ಸಂಯೋಜಕ ಶಂಕರ್ ಮಹಾದೇವನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಡಿ. 3 ರಂದು ಮುಂಬೈಯ ಷಣ್ಮುಖಾನಂದ ಸಭಾಂಗಣದಲ್ಲಿ ರಾಹುಲ್ ರಾನಡೆ ಮತ್ತು ಡ್ಯೂಕ್ಸ್ ಫಾರ್ಮಿಂಗ್ ಫಿಲಂಸ್ ಆಯೋಜನೆ ಮಾಡಿರುವ 'ಶಂಕರ್ ಮಹಾದೇವನ್ ಲೈವ್ ಇನ್ ಕನ್ಸರ್ಟ್' ಕಾರ್ಯಕ್ರಮದಲ್ಲಿ ಒಂದು ಸ್ವಲ್ಪ ಸಮಕಾಲೀನ ಜೊತೆಗೆ ಒಂದಷ್ಟು ಶಾಸ್ತ್ರೀಯ ಸಂಗೀತದ ಹೂರಣವನ್ನು ನೀಡಲು ಸಜ್ಜಾಗಿರುವ ಶಂಕರ್​ ಮಹಾದೇವನ್​ ಸಜ್ಜಾಗಿದ್ದಾರೆ.

'ಹಿಂದಿನ ದಿನಗಳಲ್ಲಿ ಕಲಾವಿದರೊಬ್ಬರು ಸಭಾಂಗಣದಲ್ಲಿ ಪ್ರದರ್ಶನ ನೀಡುತ್ತಾರೆಂದರೆ ಆ ಸಂಗೀತವನ್ನು ಆಸ್ವಾದಿಸಲು ಜನರು ಟಿಕೆಟ್ ಖರೀದಿಸುತ್ತಿದ್ದರು. ಆದರೆ ನಾವು ಸಾಂಪ್ರದಾಯಿಕ, ಸಾಮಾನ್ಯ ಸಾರ್ವಜನಿಕ ಪ್ರದರ್ಶನಗಳನ್ನು ನೀಡಲು ಬಯಸಿದ್ದೇವೆ. ಇಲ್ಲಿ ಸಂಗೀತಪ್ರೇಮಿಗಳಿಗೆ ಉತ್ತಮ ಸಂಗೀತ ನೀಡುವುದಷ್ಟೇ ನಮ್ಮ ಉದ್ದೇಶ' ಎಂದಿದ್ದಾರೆ ಶಂಕರ್​ ಮಹಾದೇವನ್​.

ಇನ್ನೆರಡು ದಿನಗಳಷ್ಟೇ ಬಾಕಿಯಿರುವ ಸಂಗೀತ ಕಾರ್ಯಕ್ರಮದಲ್ಲಿ ಮಹದೇವನ್ ಅವರು ಬಾಲಿವುಡ್, ಮರಾಠಿ, ಜಾನಪದ, ಫ್ಯೂಷನ್ ಮತ್ತು ಭಕ್ತಿ ಪ್ರಕಾರಗಳು ಸೇರಿದಂತೆ ಜನಪ್ರಿಯ ಹಾಡುಗಳನ್ನು ಜನರಿಗಾಗಿ ಪ್ರಸ್ತುತಪಡಿಸಲಿದ್ದಾರೆ. ಈ ಸಂಗೀತಗೋಷ್ಠಿಯ 'ಲೈವ್ ಸ್ಟ್ರಿಂಗ್ಸ್' ವಿಭಾಗದಲ್ಲಿ 32 ಹಿಮ್ಮೇಳ ಸಂಗೀತಗಾರರು ಭಾಗವಹಿಸಲಿದ್ದಾರೆ. ಶ್ರೀನಿಧಿ ಘಾಟಾಟೆ ಮತ್ತು ರಮಣ್ ಮಹಾದೇವನ್ ಸೇರಿದಂತೆ ಎಂಟು ಕೋರಸ್ ಗಾಯಕರು ಮಹದೇವನ್​ ಅವರಿಗೆ ಜೊತೆಯಾಗಲಿದ್ದಾರೆ.

ಇಷ್ಟು ದೊಡ್ಡ ಲೈವ್​ ಆರ್ಕೆಸ್ಟ್ರಾಗಾಗಿ ಹಿಮ್ಮೇಳ ವಾದಕರೊಂದಿಗೆ ರಿಹರ್ಸಲ್​ ಮಾಡುವುದು, ಸಂಗೀತ ಸಂಗತಿಗಳನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿಕೊಳ್ಳುವ ಈ ಪಯಣವೇ ತುಂಬಾ ಅದ್ಭುತವಾಗಿದೆ ಎಂದು ತಮ್ಮ ರಿಹರ್ಸಲ್​ ಅನುಭವ ಹಂಚಿಕೊಂಡಿದ್ದಾರೆ.

ರೆಟ್ರೋ ಟ್ರಿಬ್ಯೂಟ್ ವಿಭಾಗದಲ್ಲಿ ಎಸ್ ಡಿ ಬರ್ಮನ್, ಸಲೀಲ್ ಚೌಧರಿ, ಲತಾ ಮಂಗೇಶ್ಕರ್, ಮದನ್ ಮೋಹನ್, ಶಂಕರ್-ಜೈಕಿಶನ್, ಮುಖೇಶ್, ಆಶಾ ಭೋಂಸ್ಲೆ, ಕಿಶೋರ್ ಕುಮಾರ್, ಸಾಹಿರ್ ಲುಧಿಯಾನ್ವಿ ಮತ್ತು ಮಜ್ರೂಹ್ ಸುಲ್ತಾನ್‌ಪುರಿ ಮುಂತಾದ ಸಂಗೀತ ಕ್ಷೇತ್ರದ ಅದ್ಭುತ ದಿಗ್ಗಜರಿಗೆ ಗೌರವ ಸಲ್ಲಿಸುತ್ತೇವೆ. ಇದೊಂದು ಸುಂದರ ಸಂಗೀತದ ಅನುಭವವಾಗಲಿದ್ದು, ಜನ ಇದನ್ನು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಇದು ರಾನಡೆ ಮತ್ತು ಮಹದೇವನ್ ಅವರ ಕಾಂಬಿನೇಷನ್​ನಲ್ಲಿ ನಡೆಯುತ್ತಿರುವ ಮೂರನೇ ಕಾರ್ಯಕ್ರಮ. ಮೂರು ದಶಕಗಳಿಂದ ಸ್ನೇಹಿತರಾಗಿರುವ ಇವರು 2014 ರಲ್ಲಿ 'ಮೈ ಕಂಟ್ರಿ ಮೈ ಮ್ಯೂಸಿಕ್' 2018ರಲ್ಲಿ ಮತ್ತು ಮಹದೇವನ್ ಮತ್ತು ಉಸ್ತಾದ್ ರಶೀದ್ ಖಾನ್ ಜುಗಲ್ಬಂದಿ 'ದಿ ಮಾಸ್ಟರ್ಸ್'ನಲ್ಲಿ ಜೊತೆಗೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಮಲೇಷ್ಯಾ ಜನರಿಗೆ ರೆಹಮಾನ್​ ಸಂಗೀತದೌತಣ.. 10 ಸಾವಿರ ಅಡಿ ಎತ್ತರದಿಂದ ಸ್ಕೈಡೈವ್​ ಮೂಲಕ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.