ETV Bharat / entertainment

ಮಲಯಾಳಂ ಚಿತ್ರರಂಗದ ಪ್ರಮುಖರ ಮೇಲೆ ಐಟಿ ದಾಳಿ - ಚಿತ್ರರಂಗದ ಪ್ರಮುಖರ ಮೇಲೆ ಐಟಿ ದಾಳಿ

ಮಲಯಾಳಂ ಚಿತ್ರರಂಗದ ನಟ - ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಸೇರಿ ಹಲವರ ನಿವಾಸಗಳು ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

it-raid-on-these-film-personalities-including-prithviraj-sukumaran
ನಟ ಪೃಥ್ವಿರಾಜ್ ಸುಕುಮಾರನ್ ಸೇರಿ ಮಲಯಾಳಂ ಚಿತ್ರರಂಗದ ಪ್ರಮುಖರ ಮೇಲೆ ಐಟಿ ದಾಳಿ
author img

By

Published : Dec 16, 2022, 3:19 PM IST

Updated : Dec 16, 2022, 3:51 PM IST

ಕೊಚ್ಚಿ (ಕೇರಳ): ಮಲಯಾಳಂ ಚಿತ್ರರಂಗಕ್ಕೆ ಆದಾಯ ತೆರಿಗೆ ಇಲಾಖೆ ಶಾಕ್​ ನೀಡಿದೆ. ಖ್ಯಾತ ನಟ - ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಚಿತ್ರರಂಗದ ಪ್ರಮುಖರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗುರುವಾರ ಬೆಳಗ್ಗೆ 7.45ರ ಸುಮಾರಿಗೆ ದಾಳಿ ನಡೆಸಿ, ಶುಕ್ರವಾರದ ಬೆಳಗಿನ ಜಾವದವರೆಗೂ ದಾಳಿ ಮುಂದುವರೆದಿತ್ತು ಎಂದು ವರದಿಯಾಗಿದೆ.

ನಟ ಪೃಥ್ವಿರಾಜ್ ಅವರೊಂದಿಗೆ ಪ್ರಮುಖ ನಿರ್ಮಾಪಕ ಆಂಟೋನಿ ಪೆರುಂಬವೂರ್, ಆಂಟೊ ಜೋಸೆಫ್ ಮತ್ತು ಲಿಸ್ಟಿನ್ ಸ್ಟೀಫನ್ ಅವರ ಮನೆಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎರ್ನಾಕುಲ ಸೇರಿ ಇತರೆಡೆಗಳಲ್ಲಿ ಕೇರಳ ಮತ್ತು ತಮಿಳುನಾಡಿನ ಐಟಿ ಅಧಿಕಾರಿಗಳು ಜಂಟಿಯಾಗಿ ಈ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಚಿತ್ರದ ನಿರ್ಮಾಪಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಚಿತ್ರ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವೀ ಮೇಕರ್ಸ್ ಕಚೇರಿಯಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸಿದ್ದರು.

ಇದನ್ನೂ ಓದಿ: ಮಲಯಾಳಂ ಸ್ಟಾರ್​ ಜೊತೆ ಹೊಂಬಾಳೆ ಸಂಸ್ಥೆ ಹೊಸ ಸಿನಿಮಾ; ಕುತೂಹಲಕಾರಿ ಪೋಸ್ಟರ್​ ರಿಲೀಸ್​!

Last Updated : Dec 16, 2022, 3:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.