ಮುಂಬೈ: ಬಾಲಿವುಡ್ ನಟರಾದ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಹೊರಟಿರುವುದು ಗೊತ್ತೇ ಇದೆ. ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸದ ಈ ಜೋಡಿ ಮದುವೆ ಕೆಲಸದಲ್ಲಿ ತೊಡಗಿದ್ದಾರೆ ಎಂಬ ಸುದ್ದಿಗಳು ಸದ್ಯ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಸಂಗೀತ ಮತ್ತು ಅರಿಶಿಣ ಸಮಾರಂಭವು ದುಬೈನಲ್ಲಿ ಫೆಬ್ರವರಿ 4 ಮತ್ತು 5 ರಂದು ನಡೆಯಲಿದೆ ಮತ್ತು ಮದುವೆಯು 6 ರಂದು ನಡೆಯಲಿದೆ ಎಂದು ಹಲವು ಮಾಧ್ಯಮಗಳು ಹೇಳಿಕೊಂಡಿವೆ. ಕಿಯಾರಾ ಮತ್ತು ಸಿದ್ಧಾರ್ಥ್ ತಮ್ಮ ಮದುವೆಯ ಸ್ಥಳವಾಗಿ ಜೈಸಲ್ಮೇರ್ (ರಾಜಸ್ಥಾನ) ನಲ್ಲಿರುವ ಪಂಚತಾರಾ ಹೋಟೆಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎರಡೂ ಕುಟುಂಬದವರು ಸೇರಿದಂತೆ ಅವರ ಆಪ್ತರು ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಸಿನಿಮಾ ತಾರೆಯರಿಗಾಗಿ ಮುಂಬೈನಲ್ಲಿ ಆರತಕ್ಷತೆ ಏರ್ಪಡಿಸಲು ಮುಂದಾಗಿದ್ದು, ಮದುವೆ ಸಮಾರಂಭದ ಸಂಪೂರ್ಣ ಸಾಕ್ಷ್ಯಚಿತ್ರ ನಿರ್ಮಿಸಲು ಮುಂದಾಗಿದ್ದಾರೆ ಎನ್ನುತ್ತವೆ ಬಾಲಿವುಡ್ ಮೂಲಗಳು. ಇದು ನಿಜವಲ್ಲ ಎಂದು ದಂಪತಿ ಪ್ರತಿಕ್ರಿಯಿಸುತ್ತಾರೆಯೇ? ಮದುವೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಿಮ್ಮ ಅಭಿಮಾನಿಗಳನ್ನು ಅಚ್ಚರಿಗೊಳಿಸುತ್ತೀರಾ? ಎಂಬುದನ್ನು ಕಾದು ನೋಡಬೇಕಾಗಿದೆ.
2021 ರಲ್ಲಿ ಈ ಇಬ್ಬರೂ ನಟರು 'ಶೇರ್ ಷಾ' ಚಿತ್ರದೊಂದಿಗೆ ಸಂಪರ್ಕಕ್ಕೆ ಬಂದರು. ಆ ಚಿತ್ರದ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದ ಈ ಆನ್-ಸ್ಕ್ರೀನ್ ಜೋಡಿ, ಹೊರಗೆ ಹತ್ತಿರದಿಂದ ನೋಡುತ್ತಿದ್ದಂತೆ ಪ್ರೀತಿಯಲ್ಲಿ ಸಿಲುಕಿದೆ ಎಂದು ಹಲವರು ಭಾವಿಸಿದ್ದರು. ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಆ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಅವರು ಉತ್ತರ ನೀಡದೇ ಸುಮ್ಮನಾಗುತ್ತಿದ್ದರು. ಕಿಯಾರಾ 'ಭರತ್ ಅನೆ ನೇನು' ಮತ್ತು 'ವಿನಯ ವಿಧೇಯ ರಾಮ' ಮೂಲಕ ತೆಲುಗು ಪ್ರೇಕ್ಷಕರ ಗಮನ ಸೆಳೆದಿದ್ದರು.
ಓದಿ: ನ್ಯೂ ಲುಕ್ನಲ್ಲಿ ಬಿಟೌನ್ ಬೆಡಗಿ ಕಿಯಾರಾ ಅಡ್ವಾಣಿ: ಫ್ಯಾಷನ್ ಲೋಕದ ಗೊಂಬೆಗೆ ಫ್ಯಾನ್ಸ್ ಫಿದಾ
ನಟ-ನಟಿ ವಿವಾಹದ ಬಗ್ಗೆ ಚರ್ಚೆ: ಬಾಲಿವುಡ್‌ನ 'ಶೇರ್ ಷಾ' ಖ್ಯಾತಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ವಿವಾಹದ ಬಗ್ಗೆ ಕಳೆದ ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಕರಣ್ ಜೋಹರ್ ಅವರ ಕಾರ್ಯಕ್ರಮ ಕಾಫಿ ವಿತ್ ಕರಣ್ ಸೀಸನ್ 7 ನಲ್ಲಿಯೂ ಈ ಜೋಡಿ ತಮ್ಮ ಪ್ರೇಮ ಸಂಬಂಧದ ಹಲವಾರು ಸುಳಿವುಗಳನ್ನು ಕೊಟ್ಟಿದ್ದರು. ಅಂದಿನಿಂದ ಬಿ - ಟೌನ್‌ನಲ್ಲಿ ಇವರಿಬ್ಬರ ಮದುವೆ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೆ, ಈವರೆಗೂ ಈ ಜೋಡಿಯಿಂದ ಅಧಿಕೃತ ಘೋಷಣೆ ಆಗಿಲ್ಲ. ಇದೀಗ ಇವರಿಬ್ಬರ ಮದುವೆಯ ದಿನಾಂಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದೆ.
ಮದುವೆಗೆ ಜೈಸಲ್ಮೇರ್ನ ಪಂಚತಾರ ಹೋಟೆಲ್ ಆಯ್ಕೆ: ಪ್ರವಾಸೋದ್ಯಮ, ಸಿನಿಮಾ ಚಿತ್ರೀಕರಣದೊಂದಿಗೆ ಇದೀಗ ಸ್ವರ್ಣನಗರಿ ಜೈಸಲ್ಮೇರ್ ದೇಶ-ವಿದೇಶದಲ್ಲಿಯೇ ಬೆಸ್ಟ್ ವೆಡ್ಡಿಂಗ್ ಡೆಸ್ಟಿನೇಷನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಜೈಸಲ್ಮೇರ್ ಸೆಲೆಬ್ರಿಟಿಗಳ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದೆ. ವಿಕ್ಕಿ ಕೌಶಲ್-ಕತ್ರಿನಾ ಕೈಫ್ ಮತ್ತು ಆಲಿಯಾ-ರಣವೀರ್ ನಂತರ ಇದೀಗ ಮತ್ತೊಂದು ಖ್ಯಾತ ಬಾಲಿವುಡ್ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಅಲ್ಲದೇ, ಈ ಇಬ್ಬರೂ ಚಲನಚಿತ್ರ ತಾರೆಯರು ತಮ್ಮ ಮದುವೆಯನ್ನು ವಿಶೇಷವಾಗಿ ಮತ್ತು ಸ್ಮರಣೀಯವಾಗಿಸಲು ಜೈಸಲ್ಮೇರ್ ಅನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗ್ತಿದೆ.