ETV Bharat / entertainment

ಕನ್ನಡದ ಸ್ಟಾರ್ ಹೀರೋಗೆ ವಿಲನ್ ಆಗಬೇಕು ಅನ್ನೋದು ಬಹಳ ದಿನಗಳ ಕನಸು: ದುನಿಯಾ ವಿಜಯ್ - ದುನಿಯಾ ವಿಜಯ್

ಕನ್ನಡ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡ್ತಾ ಹೀರೊ ಆದ ನಟ ದುನಿಯಾ ವಿಜಯ್​ - ನಟನಾಗಿ, ನಿರ್ದೇಶಕನಾಗಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ದುನಿಯಾ ವಿಜಯ್​ಗೆ ಕನ್ನಡದ ಸ್ಟಾರ್ ಹೀರೋಗೆ ಪೂರ್ಣ ಪ್ರಮಾಣದ ವಿಲನ್ ಆಗುವ ಕನಸು - ನಂದಮೂರಿ ಬಾಲಕೃಷ್ಣ ಅವರ 107ನೇ ವೀರ ಸಿಂಹ ರೆಡ್ಡಿ ತೆಲುಗು ಚಿತ್ರದಲ್ಲಿ ದುನಿಯಾ ವಿಜಯ್​ ವಿಲನ್ ಆಗಿ ನಟನೆ

Dunia Vijay and hat-trick hero Shivraj Kumar
ದುನಿಯಾ ವಿಜಯ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
author img

By

Published : Jan 9, 2023, 6:17 PM IST

ಫೈಟರ್ ಆಗಿ, ಸಣ್ಣ ಪುಟ್ಟ ವಿಲನ್ ಪಾತ್ರಗಳ ಮಾಡ್ತಾ ಕನ್ನಡ ಚಿತ್ರರಂಗದಲ್ಲಿ ಹೀರೊ ಆದ ನಟರಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು. ಸದ್ಯ ನಟನಾಗಿ, ನಿರ್ದೇಶಕನಾಗಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ದುನಿಯಾ ವಿಜಯ್​ಗೆ ಕನ್ನಡದ ಸ್ಟಾರ್ ಹೀರೋಗೆ ನಾನು ಪೂರ್ಣ ಪ್ರಮಾಣದ ವಿಲನ್ ಆಗಿ ಅವರ ಸಿನಿಮಾಗಳಲ್ಲಿ ಅಭಿನಯಿಸಬೇಕು ಅನ್ನೋದು ಬಹಳ ದಿನಗಳ ಕನಸು ಅಂತೆ. ಹಾಗಾದರೆ ಯಾರು ಆ ಕನ್ನಡದ ನಟ ಅಂತಾ ತೀಳ್ಕೋಕ್ಕಿಂತ ಮುಂಚೆ ದುನಿಯಾ ವಿಜಯ್ ಸಿನಿಮಾ ಟ್ರಾಕ್ ಕಾರ್ಡ್ ಹೀಗಿದೆ ನೋಡಿ.

ಈ ಸಿನಿಮಾ ಎಂಬ ಮಾಯಾ ಲೋಕದಲ್ಲಿ ಯಾವುದೇ ಗಾಡ್ ಫಾದರ್ ಇಲ್ಲದೇ , ಫೈಟರ್ ಆಗಿ, ಸಣ್ಣ ಪುಟ್ಟ ವಿಲನ್ ಪಾತ್ರಗಳನ್ನ ಮಾಡ್ತಾ ದುನಿಯಾ ಎಂಬ ಸಿನಿಮಾ ಮೂಲಕ ಹೀರೋ ಆಗಿ ಕನ್ನಡದ ಬ್ಲ್ಯಾಕ್ ಕೋಬ್ರಾ ಅಂತಾ ಕರೆಯಸಿಕೊಂಡಿರೋದು ಈಗ ಸ್ಯಾಂಡಲ್​ವುಡ್​ನಲ್ಲಿ ಇತಿಹಾಸ. ವಿಭಿನ್ನ ಸಿನಿಮಾಗಳ ಮೂಲಕ ಎರಡು ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿರುವ ದುನಿಯಾ ವಿಜಯ್​ಗೆ ಒಂದು ಬ್ಯಾಡ್ ಟೈಮ್ ಶುರುವಾಗಿತ್ತು.

ಇನ್ನೇನು ಕನ್ನಡ ಚಿತ್ರರಂಗದಲ್ಲಿ ವಿಜಯ್ ಕೆಲಸ ಮುಗಿಯಿತು ಎನ್ನುವಷ್ಠರಲ್ಲಿ ದೊಡ್ಡ ಮಟ್ಟದ ಸ್ಟಾರ್ ಡಮ್ ತಂದು ಕೊಟ್ಟ ಸಿನಿಮಾ ಸಲಗ. ಫಸ್ಟ್ ಟೈಮ್ ವಿಜಯ್ ನಿರ್ದೇಶನದ ಜೊತೆಗೆ ಅಭಿನಯಿಸಿದ ಸಲಗ ಸಿನಿಮಾ ಸೂಪರ್ ಹಿಟ್ ಆಗಿತ್ತು. 4 ರಿಂದ 5 ಕೋಟಿ ಬಜೆಟ್ ನಿರ್ಮಾಣ ಆದ ಸಲಗ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ದುನಿಯಾ ವಿಜಯ್ ಸಿನಿಮಾ ಕೆರಿಯರ್​ಗೆ ದೊಡ್ಡ ಬ್ರೇಕ್ ನೀಡಿತ್ತು. ಈ ಸಿನಿಮಾ ಸಕ್ಸಸ್ ಬಳಿಕ ದುನಿಯಾ ವಿಜಯ್​ಗೆ ಮತ್ತೊಂದು ಬಂಪರ್ ಲಾಟರಿ ಹೊಡೆದಿತ್ತು.

ವೀರ ಸಿಂಹ ರೆಡ್ಡಿ ಚಿತ್ರದಲ್ಲಿ ವಿಜಯ್​ ವಿಲನ್​: ಹೌದು ತೆಲುಗಿನ ಸೂಪರ್​ ಸ್ಟಾರ್ ನಟರಾದ ನಂದಮೂರಿ ಬಾಲಕೃಷ್ಣ ಅವರ 107ನೇ ವೀರ ಸಿಂಹ ರೆಡ್ಡಿ ಚಿತ್ರದಲ್ಲಿ ದುನಿಯಾ ವಿಜಯ್​ ವಿಲನ್ ಆಗಿ ನಟಿಸಲು ಆಫರ್ ಹುಡುಕಿಕೊಂಡು ಬಂತು. ಈ ಚಿತ್ರಕ್ಕೆ ಕ್ರ್ಯಾಕ್ ಡೈರೆಕ್ಟರ್ ಗೋಪಿ ಚಂದ್ ಮಾಲಿನೇನಿ ನಿರ್ದೇಶನ ಮಾಡಿದ್ದು, ಈಗಾಗಲೇ ಈ ಸಿನಿಮಾ ಬಿಡುಗಡೆ ಆಗೋದಿಕ್ಕೆ ಸಜ್ಜಾಗಿದೆ.

ಸದ್ಯಕ್ಕೆ ವೀರ ಸಿಂಹ ರೆಡ್ಡಿ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಟಾಲಿವುಡ್ ಸ್ಟಾರ್ ಬಾಲಯ್ಯ ಎದುರು ದುನಿಯಾ ವಿಜಯ್ ತೊಡೆ ತೊಟ್ಟಿದ್ದಾರೆ. ಈ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಈ ಸುಂದರ ವೇದಿಕೆಯಲ್ಲಿ ನಟ ಬಾಲಯ್ಯ ಕೂಡ ದುನಿಯಾ ವಿಜಯ್​ ನಟನೆ ಹಾಗೂ ಅವರ ಸಿನಿಮಾ ಡೆಡಿಕೇಷನ್ ಬಗ್ಗೆ ಕೊಂಡಾಡಿದ್ದಾರೆ. ಇದು ದುನಿಯಾ ವಿಜಯ್​ಗೆ ಮತ್ತಷ್ಟು ತೆಲುಗು ಸಿನಿಮಾಗಳನ್ನು ಮಾಡುವ ಹುಮ್ಮಸ್ಸು ನೀಡಿದೆ.

ಶಿವರಾಜಕುಮಾರ್ ಚಿತ್ರದಲ್ಲಿ ವಿಲನ್ ಪಾತ್ರ ಮಾಡುವ ಆಸೆ: ಸದ್ಯ ಭೀಮ ಸಿನಿಮಾದಲ್ಲಿ ಅಭಿನಯಿಸುವುದರ ಜೊತೆಗೆ ನಿರ್ದೇಶನ ಮಾಡುತ್ತಿರುವ ದುನಿಯಾ ವಿಜಯ್​ಗೆ ಒಂದು ಆಸೆ ಇದೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಹೀರೋ ಆಗಿ ಮಿಂಚುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ಖಳ ನಾಯಕನಾಗಿ ಅಭಿನಯಿಸಬೇಕು ಅನ್ನೋದು ದುನಿಯಾ ವಿಜಯ್​ಗೆ ಬಹಳ ದಿನಗಳ ಕನಸು ಅಂತೆ.

ಯಾಕೆಂದರೇ ತಾನೊಬ್ಬ ಸ್ಟಾರ್ ಎಂಬ ಅಹಂ ಬಿಟ್ಟು ಹೊಸ ಪ್ರತಿಭೆಗಳಿಗೆ ಹಾಗೂ ತಮ್ಮ ಜೊತೆಗೆ ಬೆಳೆಯುವ ನಟರಿಗೆ ಸಪೋರ್ಟ್ ಮಾಡುವ ಗುಣ ಹೊಂದಿರುವ ಶಿವರಾಜ್ ಕುಮಾರ್, ಸಲಗ ಸಿನಿಮಾ ಸ್ಟಾರ್ಟ್ ಆದಗಿಂದ ಹಿಡಿದು ಸಿನಿಮಾ ಬಿಡುಗಡೆ ಆಗೋವರೆಗೂ ವಿಜಯ್​ಗೆ ಶಿವರಾಜ್ ಕುಮಾರ್ ಸಪೋರ್ಟ್ ಮಾಡಿದ್ದು, ಅವರ ಸರಳತೆಗೆ ಬಗ್ಗೆ ದುನಿಯಾ ವಿಜಯ್​ಗೆ ಎಲ್ಲಿಲ್ಲದ ಒಂದು ಪ್ರೀತಿ ಹಾಗೂ ಗೌರವ.

ಜೋಗಿಯಲ್ಲಿ ಸಣ್ಣ ವಿಲನ್​ ಪಾತ್ರ ಮಾಡಿದ್ದ ದುನಿಯಾ ವಿಜಯ್​: ಇನ್ನು ಶಿವರಾಜ್ ಕುಮಾರ್ ಸಿನಿಮಾ ಕೆರಿಯರ್​ನ ಸೂಪರ್ ಹಿಟ್ ಸಿನಿಮಾ ಜೋಗಿಯಲ್ಲಿ ದುನಿಯಾ ವಿಜಯ್ ಸಣ್ಣ ವಿಲನ್ ಪಾತ್ರ ಮಾಡಿದ್ದರು. ಅದನ್ನ ಬಿಟ್ಟರೆ ಶಿವರಾಜ್ ಕುಮಾರ್ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ವಿಲನ್ ಆಗಿ ಕಾಣಿಸಿಕೊಂಡಿಲ್ಲ. ಈ ವಿಚಾರವಾಗಿ ವಿಜಯ್ ಕೂಡ ಶಿವಣ್ಣನ ಜೊತೆ ಮಾತನಾಡಿದ್ದಾರೆ. ಒಳ್ಳೆ ಕಥೆ ಮಾಡಿಕೊಂಡು ಯಾರಾದರು ನಿರ್ದೇಶಕರು ಬಂದರೆ ನಿಜವಾಗ್ಲೂ ನಾನು ಶಿವರಾಜ್ ಕುಮಾರ್ ಸಿನಿಮಾದಲ್ಲಿ ವಿಲನ್ ಆಗಿ ಅಭಿನಯಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ವಿಜಯ್​.

ಆದರೆ, ಶಿವಣ್ಣ ಹಾಗೂ ನನ್ನ ಪಾತ್ರಕ್ಕೆ ತುಂಬಾ ಮಹತ್ವ ಇರಬೇಕು ಅಂತಾ ದುನಿಯಾ ವಿಜಯ್ ತಮ್ಮ ಬಹು ದಿನ ಕನಸನ್ನ ಹೇಳಿಕೊಂಡಿದ್ದಾರೆ. ಸದ್ಯ ದುನಿಯಾ ವಿಜಯ್ ಮಾತಿನಂತೆ ಒಳ್ಳೆ ಕಥೆ ಮಾಡಿಕೊಂಡು ಯಾರಾದರು ನಿರ್ದೇಶಕರು ಶಿವರಾಜ್ ಕುಮಾರ್ ಹಾಗೂ ದುನಿಯಾ ವಿಜಯ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ವಿಜಯ್ ಆಸೆಯನ್ನ ಪೂರೈಯಿಸುತ್ತಾರೆ ಎಂದು ಕಾದು ನೋಡಬೇಕು.

ಇದನ್ನೂ ಓದಿ :ವೀರ ಸಿಂಹ ರೆಡ್ಡಿ ಚಿತ್ರ ತಂಡಕ್ಕೆ ಧನ್ಯವಾದ ಅರ್ಪಿಸಿದ ದುನಿಯಾ ವಿಜಯ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.