ETV Bharat / entertainment

ಕಣ್ಣಪ್ಪ ಸಿನಿಮಾದಲ್ಲಿ ಶಿವನ ಪಾತ್ರ ವಹಿಸಲಿರುವ ಪ್ರಭಾಸ್​.. ಆದಿಪುರುಷ್​ ನಟಿ ಕೃತಿ ಸಹೋದರಿ ಜೊತೆ ಸ್ಕ್ರೀನ್​ ಶೇರ್ - ಕೃತಿ ಸನೋನ್​​

Kannappa film: ಪ್ರಭಾಸ್​ ಮುಂದಿನ ಸಿನಿಮಾ ಕಣ್ಣಪ್ಪ. ಚಿತ್ರದಲ್ಲಿ ನಟಿ ಕೃತಿ ಸನೋನ್​​ ಸಹೋದರಿ ನೂಪುರ್​ ಸನೋನ್ ಪ್ರಮುಖ ಪಾತ್ರ ವಹಿಸಲಿದ್ದಾರೆ.

Prabhas shares screen with Kriti's sister Nupur in Kannappa movie
ಕಣ್ಣಪ್ಪ ಸಿನಿಮಾದಲ್ಲಿ ಕೃತಿ ಸಹೋದರಿ ನೂಪುರ್ ಜೊತೆ ಪ್ರಭಾಸ್​​ ಸ್ಕ್ರೀನ್​ ಶೇರ್
author img

By ETV Bharat Karnataka Team

Published : Sep 10, 2023, 6:42 PM IST

ಇತ್ತೀಚೆಗೆ ತೆರೆಕಂಡಿರುವ ಆದಿಪುರುಷ್​ ಸಿನಿಮಾದಲ್ಲಿ ಭಗವಾನ್​ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​​ ಮತ್ತೊಂದು ಪೌರಾಣಿಕ ಪಾತ್ರವನ್ನು ನಿರ್ವಹಿಸಲು ಸಜ್ಜಾಗಿದ್ದಾರೆ. ಈ ಬಾರಿ ಕಣ್ಣಪ್ಪ ಶೀರ್ಷಿಕೆಯ ಚಿತ್ರದಲ್ಲಿ ಶಿವನ ಪಾತ್ರ ನಿರ್ವಹಿಸಲಿದ್ದಾರೆ. ಈ ಸುದ್ದಿಯನ್ನು ನಟ, ನಿರ್ಮಾಪಕ ವಿಷ್ಣು ಮಂಚು ಪರೋಕ್ಷವಾಗಿ ದೃಢಪಡಿಸಿದ್ದಾರೆ. ಈ ಇಬ್ಬರ ಕಾಂಬೋದಲ್ಲಿ ಕಣ್ಣಪ್ಪ ಸಿನಿಮಾ ಬರಲಿದೆ. ವಿಷಯ ತಿಳಿದ ಅಭಿಮಾನಿಗಳಲ್ಲಿ ಸಿನಿಮಾ ಕುರಿತ ಕುತೂಹಲ ಹೆಚ್ಚಾಗಿದೆ.

ಕಣ್ಣಪ್ಪ ಶೀರ್ಷಿಕೆಯ ಚಿತ್ರದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​​ ಪಾತ್ರದ ಕುರಿತು ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸದಿದ್ದರೂ, ನಿರ್ಮಾಪಕ, ನಟ ವಿಷ್ಣು ಮಂಚು ಅವರ ರಹಸ್ಯಕರ ಪೋಸ್ಟ್ ಇದನ್ನೇ ಹೇಳಿದೆ. ಕಣ್ಣಪ್ಪ ಸಿನಿಮಾದಲ್ಲಿ ಟಾಲಿವುಡ್​ ಸೂಪರ್​ ಸ್ಟಾರ್ ಪ್ರಭಾಸ್​ ಬಹುಮುಖ್ಯ ಪಾತ್ರ ವಹಿಸಲಿದ್ದಾರೆ ಎಂದು ಸಿನಿಮಾ ವಿಶ್ಲೇಷಕರೋರ್ವರು ಶೇರ್ ಮಾಡಿರುವ ಪೋಸ್ಟ್​ ಅನ್ನು ತಮ್ಮ ಅಧಿಕೃತ X ಖಾತೆಯಲ್ಲಿ ಶೇರ್ ಮಾಡಿರುವ ವಿಷ್ಣು ಮಂಚು, ''ಹರ್​ ಹರ್​ ಮಹಾದೇವ್​​'' ಎಂದು ಬರೆದುಕೊಂಡಿದ್ದಾರೆ. ಹಾಗಾಗಿ ಆದಿಪುರುಷ್​ ಚಿತ್ರದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ನಟ ಪ್ರಭಾಸ್​​ ಮುಂದಿನ ಕಣ್ಣಪ್ಪ ಸಿನಿಮಾದಲ್ಲಿ ಶಿವನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ಬಲವಾಗಿ ನಂಬಲಾಗಿದೆ. ಇತ್ತೀಚೆಗಷ್ಟೇ ಚಿತ್ರಕ್ಕೆ ಸಂಬಂಧಿಸಿದ ಪೂಜಾ ಕಾರ್ಯಕ್ರಮ ನೆರವೇರಿದ್ದು, ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ ಎಂಬ ಮಾಹಿತಿ ಇದೆ.

ಬಿಗ್​ ಪ್ರೊಜೆಕ್ಟ್​ 'ಕಣ್ಣಪ್ಪ' ಚಿತ್ರವನ್ನು ಮುಖೇಶ್​ ಸಿಂಗ್​​ ನಿರ್ದೇಶಿಸಲಿದ್ದಾರೆ. ಚಿತ್ರಕಥೆಯನ್ನು ಪರುಚುರಿ ಗೋಪಾಲಕೃಷ್ಣ, ಬುರಾ ಸಾಯಿ ಮಾಧವ್​, ತೋಟ ಪ್ರಸಾದ್​ ಬರೆದಿದ್ದಾರೆ. ಸಿನಿಮಾದಲ್ಲಿ ಆದಿಪುರುಷ್​ ನಟಿ ಕೃತಿ ಸನೋನ್​ ಅವರ ಸಹೋದರಿ ನೂಪುರ್​ ಸನೋನ್​​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅವಾ ಎಂಟರ್​ಟೈನ್​ಮೆಂಟ್​​ ಮತ್ತು 24 ಫ್ರೇಮ್ಸ್​ ಫ್ಯಾಕ್ಟರಿ ನಿರ್ಮಾಣದ 'ಕಣ್ಣಪ್ಪ' ಚಿತ್ರಕ್ಕೆ ಮಣಿ ಶರ್ಮಾ ಮತ್ತು ಸ್ಟೀಫನ್​​ ದೇವಸಿ ಸಂಗೀತ ಸಂಯೋಜಿಸಲಿದ್ದಾರೆ.

ಇದನ್ನೂ ಓದಿ: UI: ನಾಳೆ ಬಹುನಿರೀಕ್ಷಿತ ಯುಐ ಟೀಸರ್​ ಅನಾವರಣ - ಉಪ್ಪಿ ಅಭಿಮಾನಿಗಳಲ್ಲಿ ಕುತೂಹಲ

ಕಣ್ಣಪ್ಪ ಸಿನಿಮಾಗೂ ಮೊದಲು ಪ್ರಭಾಸ್​ ಸಲಾರ್ ಸಿನಿಮಾದೊಂದಿಗೆ ಚಿತ್ರಮಂದಿರಕ್ಕೆ ಬರಲಿದ್ದಾರೆ. ಆ್ಯಕ್ಷನ್​​ ಪ್ಯಾಕ್ಡ್​ ಸಿನಿಮಾದಲ್ಲಿ ಶೃತಿ ಹಾಸನ್​​ ಪ್ರಮುಖ ಪಾತ್ರ ವಹಿಸಿದ್ದು, ನವೆಂಬರ್​ಗೆ ಬಿಡುಗಡೆ ಆಗಲಿದೆ. ಈ ಮೊದಲು ಇದೇ ತಿಂಗಳ ಕೊನೆಯಲ್ಲಿ ಸಿನಿಮಾ ಬಿಡುಗಡೆ ಆಗಲು ನಿರ್ಧಾರವಾಗಿತ್ತು. ಕಾರಣಾಂತರಗಳಿಂದ ಸಿನಿಮಾವನ್ನು ಮುಂದೂಡಲಾಗಿದೆ. ಸಲಾರ್​ ಅಲ್ಲದೇ ಕಲ್ಕಿ 2898ಎಡಿ ಸಿನಿಮಾದಲ್ಲಿ ಪ್ರಭಾಸ್​ ಬ್ಯುಸಿಯಾಗಿದ್ದಾರೆ. ಎರಡು ಬಹು ನಿರೀಕ್ಷಿತ ಸಿನಿಮಾಗಳು ಪ್ರಭಾಸ್​ ಕೈಯಲ್ಲಿದ್ದು, ಈ ಚಿತ್ರದ ಕೆಲಸಗಳು ಮುಗಿದ ಬಳಿಕ ಕಣ್ಣಪ್ಪ ಸಿನಿಮಾ ಕೆಲಸ ಶುರುವಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: 59ನೇ ವಯಸ್ಸಿನಲ್ಲೂ ಫಿಟ್‌ & ಫೈನ್, ಯುವಕರನ್ನು ನಾಚಿಸುವ ಚಾರ್ಮ್! ಬರ್ತ್‌ಡೇ ದಿನ ಹೊಸ ಸಿನಿಮಾ ಘೋಷಿಸಿದ ರಮೇಶ್‌ ಅರವಿಂದ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.