ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಗರ್ಭಿಣಿಯಾಗಿರುವಂತೆ ಕಾಣುತ್ತಿದ್ದು ನೆಟಿಜನ್‌ಗಳು ಈ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಇತ್ತೀಚೆಗೆ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಅವರ ಹೊಸ ಫೋಟೋ ಮತ್ತು ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿವೆ. ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯ ಅವರೊಂದಿಗೆ ಆಗಮಿಸುತ್ತಿರುವ ವಿಡಿಯೋ ಇದಾಗಿದೆ.
ಮುಂಬೈ ವಿಮಾನ ನಿಲ್ದಾಣದಿಂದ ಹೊರಗಡೆ ಬರುತ್ತಿದ್ದಂತೆ ತಮ್ಮ ಹೊಟ್ಟೆ ಮೇಲೆ ಕೈ ಇಟ್ಟುಕೊಂಡು ಬರುತ್ತಿದ್ದ ದೃಶ್ಯ ಇದೀಗ ಜಾಲತಾಣದಲ್ಲಿ ಜಾಗ ಪಡೆದಿದೆ. ಅಲ್ಲದೇ ನಟಿಯ ಹೊಟ್ಟೆ ಸ್ವಲ್ಪ ಉಬ್ಬಿದ್ದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಹೊಟ್ಟೆ ಭಾಗ ಕಾಣದ ರೀತಿಯಲ್ಲಿ ಕೈ ಅಡ್ಡ ಇಟ್ಟುಕೊಂಡು ಬರುತ್ತಿದ್ದ ವಿಡಿಯೋ ನೋಡಿದ ನೆಟಿಜನ್ಸ್ ಐಶ್ವರ್ಯಾ ಮತ್ತೆ ಗರ್ಭಿಣಿಯಾಗಿರಬಹುದು ಎನ್ನುತ್ತಿದ್ದಾರೆ.
ಐಶ್ವರ್ಯಾ ರೈ ಉದ್ದನೆಯ ಗೌನ್ ರೀತಿಯ ಕಾಸ್ಟ್ಯೂಮ್ ಜೊತೆಗೆ ಅದರ ಮೇಲೆ ಕಪ್ಪು ಬಣ್ಣದ ಕೋಟ್ ತೊಟ್ಟಿದ್ದಾರೆ. ಪತಿ ಅಭಿಷೇಕ್ ಬಚ್ಚನ್ ನಟ ಉದ್ದನೆಯ ಕಪ್ಪು ಉಡುಪನ್ನು ಧರಿಸಿದ್ದರೆ, ಪುತ್ರಿ ಆರಾಧ್ಯ ಕೂಡ ಸಂಪೂರ್ಣ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರು. ಅಭಿಷೇಕ್ ಬಚ್ಚನ್ ಅವರು ಪುತ್ರಿ ಮತ್ತು ಪತ್ನಿಯ ಹಿಂದೆ ನಡೆದುಕೊಂಡು ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
-
Is Aishwarya Rai Bachchan pregnant? Viral videos, pictures spark speculations
— ANI Digital (@ani_digital) July 20, 2022 " class="align-text-top noRightClick twitterSection" data="
Read @ANI Story | https://t.co/jeCE6Ilkqi#AishwaryaRai #AishwaryaRaiBachachanPregnant #AbhishekBachchan #Bollywood pic.twitter.com/Lzf58ir3qE
">Is Aishwarya Rai Bachchan pregnant? Viral videos, pictures spark speculations
— ANI Digital (@ani_digital) July 20, 2022
Read @ANI Story | https://t.co/jeCE6Ilkqi#AishwaryaRai #AishwaryaRaiBachachanPregnant #AbhishekBachchan #Bollywood pic.twitter.com/Lzf58ir3qEIs Aishwarya Rai Bachchan pregnant? Viral videos, pictures spark speculations
— ANI Digital (@ani_digital) July 20, 2022
Read @ANI Story | https://t.co/jeCE6Ilkqi#AishwaryaRai #AishwaryaRaiBachachanPregnant #AbhishekBachchan #Bollywood pic.twitter.com/Lzf58ir3qE
ಐಶ್ವರ್ಯಾ ಪ್ರೆಗ್ನೆಂಟ್ ಆಗಿರುವುದರಿಂದಲೇ, ಬೇಬಿ ಬಂಪ್ ಕಾಣಬಾರದು ಎಂದು ಈ ರೀತಿ ನಡೆದುಕೊಂಡಿದ್ದಾರೆ ಎಂದು ಮಾತನಾಡಿಕೊಳ್ಳಲಾಂಭಿಸಿದ್ದಾರೆ. ಹೊಟ್ಟೆ ಕಾಣದಂತೆ ಕಪ್ಪು ಕೋಟ್ ಧರಿಸಿದ್ದು ಕೂಡ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಅವರಾಗಲಿ ಅಥವಾ ಬಚ್ಚನ್ ಫ್ಯಾಮಿಲಿ ಆಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಪೊನ್ನಿಯಿನ್ ಸೆಲ್ವನ್-1' (PS-I) ಚಿತ್ರದಲ್ಲಿ ಐಶ್ವರ್ಯಾ ನಟಿಸಿದ್ದು ಚಿತ್ರದ ಫಸ್ಟ್ ಲುಕ್ ಇತ್ತೀಚೆಗಷ್ಟೇ ರಿವೀಲ್ ಆಗಿದೆ. ಚಿತ್ರದಲ್ಲಿ ಐಶ್ವರ್ಯಾ ಪಜುವೂರಿನ ರಾಜಕುಮಾರಿ ರಾಣಿ ನಂದಿನಿ ಮತ್ತು ಮಂದಾಕಿನಿ ದೇವಿಯ ಎಂಬ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಪೋಸ್ಟರ್ ಬಿಡುಗಡೆಯಾದಾಗಿನಿಂದ ಅಭಿಮಾನಿಗಳು ಅವರ ಲುಕ್‌ಗೆ ಫಿದಾ ಆಗಿದ್ದಾರೆ.
ಫಸ್ಟ್ ಲುಕ್ ಪೋಸ್ಟರ್‌ಗಳಲ್ಲಿ ನಂದಿನಿಯಾಗಿ ಐಶ್ವರ್ಯಾ ರೈ ಬಚ್ಚನ್, ಆದಿತ್ಯ ಕರಿಕಾಳನ್ ಆಗಿ ವಿಕ್ರಮ್, ಅರುಲ್ಮೋಳಿ ವರ್ಮನ್ ಆಗಿ ಜಯಂ ರವಿ, ವಂಧಿಯತೇವನ್ ಆಗಿ ಕಾರ್ತಿ ಮತ್ತು ಕುಂದವೈ ಆಗಿ ತ್ರಿಶಾ ಕಾಣಿಸಿಕೊಂಡಿದ್ದಾರೆ. ಮತ್ತೋರ್ವ ಸೌತ್ ಸ್ಟಾರ್ ಕೆನಡಿ ಜಾನ್ ವಿಕ್ಟರ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: 'ಗಾಯ್ಸ್, ನಾನು ಗರ್ಭಿಣಿಯಲ್ಲ, ದೇಶದ ಜನಸಂಖ್ಯೆಗೆ ಸೈಫ್ ಈಗಾಗಲೇ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ'
ಕಲ್ಕಿ ಕೃಷ್ಣಮೂರ್ತಿಯವರ ಜನಪ್ರಿಯ ಐತಿಹಾಸಿಕ ಕಾದಂಬರಿ 'ಪೊನ್ನಿಯಿನ್ ಸೆಲ್ವನ್' ಆಧರಿಸಿದ ಚಿತ್ರ ಇದಾಗಿದ್ದು, ಮಣಿರತ್ನಂ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದು, ರವಿವರ್ಮನ್ ಛಾಯಾಗ್ರಹಣ ಮಾಡಿದ್ದಾರೆ. ಈ ವರ್ಷ ಸೆಪ್ಟೆಂಬರ್ 30 ರಂದು ಈ ಚಿತ್ರ ತೆರೆ ಮೇಲೆ ಬರಲಿದೆ.