ಕೆಲ ದಿನಗಳ ಹಿಂದೆ ರೋಹಿತ್ ಶೆಟ್ಟಿ ನಿರ್ದೇಶನದ 'ಇಂಡಿಯನ್ ಪೊಲೀಸ್ ಫೋರ್ಸ್' ವೆಬ್ ಸೀರಿಸ್ ಚಿತ್ರೀಕರಣ ವೇಳೆ ನಟಿ ಶಿಲ್ಪಾ ಶೆಟ್ಟಿ ಕಾಲು ಮುರಿದುಕೊಂಡ ಹಿನ್ನೆಲೆ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಆದರೂ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದು, ಈ ಕುರಿತ ಪೋಸ್ಟ್ ಮಾಡುತ್ತಿರುತ್ತಾರೆ. ಇದು ಅಭಿಮಾನಿಗಳಿಗೆ ಸ್ಫೂರ್ತಿಯಾಗಿದೆ.
ಕೆಲ ದಿನಗಳ ಹಿಂದೆ ವೀಲ್ಚೇರ್ನಲ್ಲಿ ಕುಳಿತು ಕೆಲ ಯೋಗ ಸ್ಟ್ರೆಚ್‌ಗಳನ್ನು ಮಾಡಿದ್ದ ವಿಡಿಯೋ ಕ್ಲಿಪ್ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. "ಸಮಸ್ಯೆಯು ನಿಜವಾಗಿಯೂ ಸಮಸ್ಯೆಯೇ ಅಥವಾ ಸಮಸ್ಯೆಯ ಬಗೆಗಿನ ನಮ್ಮ ಮನೋಭಾವವೇ ನಿಜವಾದ ಸಮಸ್ಯೆಯೇ?" ಎಂದು ಪ್ರಶ್ನಿಸಿದ್ದರು. ಅತ್ಯಂತ ಸರಳ ಮತ್ತು ಸುಲಭ ಯೋಗಾಭ್ಯಾಸ ಮಾಡಿ ಕಠಿಣ ಸಮಯದಲ್ಲೂ ಮಾದರಿಯಾಗಿದ್ದರು.
ಇದೀಗ ಮತ್ತೊಮ್ಮೆ ವ್ಯಾಯಾಮದ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಹುರಿದುಂಬಿಸಿದ್ದಾರೆ. ಈ ವಿಡಿಯೋದಲ್ಲಿ ಅವರು ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದು. ವಿಶ್ರಾಂತಿ ಸಮಯದಲ್ಲಿ ಇದ್ದರೂ, ನಟಿ ವ್ಯಾಯಾಮಗಳಿಂದ ತಪ್ಪಿಸಿಕೊಳ್ಳುತ್ತಿಲ್ಲ.
- " class="align-text-top noRightClick twitterSection" data="
">
ತಮ್ಮ ಹೊಸ ವ್ಯಾಯಾಮದ ವಿಡಿಯೋವನ್ನು ಹಂಚಿಕೊಂಡ ಶಿಲ್ಪಾ ಶೆಟ್ಟಿ, 'ಕುಳಿತುಕೊಂಡು ಏನು ಮಾಡಬೇಕು, ಸ್ವಲ್ಪ ಕೆಲಸ ಮಾಡಿ, ಸೋಮವಾರವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ವ್ಯಾಯಾಮ ಮಾಡುತ್ತೇನೆ' ಎಂದು ಬರೆದಿದ್ದಾರೆ.
![injured actress Shilpa Shetty shares exercise video](https://etvbharatimages.akamaized.net/etvbharat/prod-images/16423463_news.jpg)
ಇದನ್ನೂ ಓದಿ: ಇಮ್ರಾನ್ ಹಶ್ಮಿ ಮೇಲೆ ಕಲ್ಲು ತೂರಾಟ ಪ್ರಕರಣ: ನಟ ಹೇಳಿದ್ದೇನು?
ಈ ಹಿಂದೆ ಶೇರ್ ಮಾಡಿದ್ದ ವ್ಯಾಯಾಮದ ವಿಡಿಯೋದಲ್ಲಿ ಶಿಲ್ಪಾ ಕೈಯಲ್ಲಿ ಡಂಬಲ್ಸ್ ಹಿಡಿದು ಬೆಂಚ್ ಮೇಲೆ ಕಾಲು ಚಾಚಿ ಕುಳಿತಿರುವುದು ಕಂಡುಬಂದಿತ್ತು. 'ಏನೇ ಆಗಲಿ ಪರವಾಗಿಲ್ಲ.. ಮುಂದೆ ಸಾಗುತ್ತಿರಿ. ಕೈ ಅಲ್ಲ ಕಾಲು ಮುರಿದಿದೆ' ಎಂದು ನಟಿ ಹೇಳಿದ್ದರು. ಇದಾದ ಬಳಿಕ ಶಿಲ್ಪಾ ಸರಳ ವರ್ಕೌಟ್ ಆರಂಭಿಸಿದ್ದಾರೆ.