ETV Bharat / entertainment

ಸಿಂಧೂ ನಾಗರೀಕತೆ ಕುರಿತು ಸಿನಿಮಾ ಮಾಡುವಂತೆ ರಾಜಮೌಳಿಗೆ ಆನಂದ್​ ಮಹೀಂದ್ರಾ ಮನವಿ

ಸಿಂಧೂ ಕಣಿವೆ ನಾಗರೀಕತೆಯ ಕುರಿತು ಸಿನಿಮಾ ಮಾಡುವಂತೆ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಅವರಲ್ಲಿ ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಮನವಿ ಮಾಡಿದ್ದಾರೆ.

Industrialist Anand Mahindra
ರಾಜಮೌಳಿಗೆ ಆನಂದ್​ ಮಹೀಂದ್ರಾ ಮನವಿ
author img

By

Published : May 1, 2023, 1:47 PM IST

ಟಾಲಿವುಡ್​ ಖ್ಯಾತ ನಿರ್ದೇಶಕ ಎಸ್.​ಎಸ್.ರಾಜಮೌಳಿ ಅವರು 'ಬಾಹುಬಲಿ' ಮತ್ತು 'ಆರ್​ಆರ್​ಆರ್​'ನಂತಹ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ 'ಆರ್​ಆರ್​ಆರ್​' ಚಿತ್ರದ ನಾಟು ನಾಟು ಹಾಡು ಆಸ್ಕರ್​ ಪ್ರಶಸ್ತಿ ಪಡೆಯುವ ಮೂಲಕ ಕೇವಲ ಟಾಲಿವುಡ್​ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ಗೌರವ ತಂದುಕೊಟ್ಟಿದೆ. ಪ್ರತಿಷ್ಠಿತ ಪ್ರಶಸ್ತಿಯನ್ನು ಗಳಿಸಿದ್ದಕ್ಕಾಗಿ ಸಮಾಜದ ಎಲ್ಲಾ ವರ್ಗದ ಜನರು ಅವರನ್ನು ಶ್ಲಾಘಿಸಿದ್ದಾರೆ.

ಇತ್ತೀಚೆಗೆ ಪ್ರಮುಖ ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಮತ್ತು ಎಸ್​.ಎಸ್.ರಾಜಮೌಳಿ ನಡುವಿನ ಸಂಭಾಷಣೆ ಟ್ವಿಟರ್​ನಲ್ಲಿ ಟ್ರೆಂಡಿಂಗ್​ ಆಗಿದೆ. ಮಹೀಂದ್ರಾ ಸಂಸ್ಥೆಯ ಚೇರ್​ಮನ್​ ಆಗಿರುವ ಆನಂದ್​ ಮಹೀಂದ್ರಾ ಅವರು ಟ್ವಿಟರ್​ನಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಹೊಸ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಾ ಗಮನ ಸೆಳೆಯುತ್ತಿರುತ್ತಾರೆ. ಅವರು ಚಲನಚಿತ್ರ ಪ್ರೇಮಿಯೂ ಆಗಿರುವುದರಿಂದ ಈ ಬಾರಿ ಸಿಂಧೂ ಕಣಿವೆ ನಾಗರೀಕತೆಯ ಕುರಿತು ಸಿನಿಮಾ ಮಾಡುವಂತೆ ರಾಜಮೌಳಿ ಅವರಲ್ಲಿ ವಿನಂತಿ ಮಾಡಿದ್ದಾರೆ. ಇದಕ್ಕೆ ರಾಜಮೌಳಿಯೂ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದಾರೆ.

  • These are amazing illustrations that bring history alive & spark our imagination. Shoutout to @ssrajamouli to consider a film project based on that era that will create global awareness of that ancient civilisation…😊 https://t.co/ApKxOTA7TI

    — anand mahindra (@anandmahindra) April 29, 2023 " class="align-text-top noRightClick twitterSection" data=" ">

ಸಿಂಧೂ ಕಣಿವೆ ನಾಗರೀಕತೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಆನಂದ್​ ಮಹೀಂದ್ರಾ ಅವರು, "ಇವು ಇತಿಹಾಸವನ್ನು ಜೀವಂತಗೊಳಿಸುವ ಮತ್ತು ನಮ್ಮ ಕಲ್ಪನೆಗಳನ್ನು ಪ್ರಚೋದಿಸುವ ಅದ್ಭುತ ಚಿತ್ರಗಳಾಗಿವೆ. ಈ ಪುರಾತನ ನಾಗರೀಕತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕಿದೆ. ಇಂತಹ ಸಮಯದಲ್ಲಿ ಜಗತ್ತಿಗೆ ಸಿಂಧು ನಾಗರೀಕತೆಯ ಕುರಿತಾದ ಸಿನಿಮಾವನ್ನು ನೀವು ಮಾಡಬಹುದೇ" ಎಂದು ಬರೆದು ರಾಜಮೌಳಿ ಅವರನ್ನು ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ನನ್ನ ಪ್ರೇಮಕಥೆಗಳು ನನ್ನ ಜೊತೆಯೇ ಸಮಾಧಿ ಆಗುತ್ತವೆ, ನನ್ನ ಸುತ್ತಲೂ ಅನೇಕ ಬಂದೂಕುಗಳಿವೆ: ನಟ ಸಲ್ಮಾನ್​

ಇದಕ್ಕೆ ಪ್ರತಿಯಾಗಿ ರಾಜಮೌಳಿ ಪ್ರತ್ಯುತ್ತರ ನೀಡಿದ್ದು, 'ಮಗಧೀರ' ಚಿತ್ರದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಸಿಂಧೂ ನಾಗರೀಕತೆಯನ್ನು ಆಧರಿಸಿ ಚಿತ್ರ ಮಾಡಲು ಆಸಕ್ತಿ ಇದೆ ಎಂಬುದಾಗಿ ಹೇಳಿದ್ದಾರೆ. "ಧೋಲವೀರದಲ್ಲಿ 'ಮಗಧೀರ' ಚಿತ್ರೀಕರಣದ ವೇಳೆ ನಾನು ತುಂಬಾ ಪುರಾತನವಾದ ಮರಗಳನ್ನು ನೋಡಿದ್ದೆ. ಅದು ಪಳೆಯುಳಿಕೆಯಾಗಿ ಮಾರ್ಪಟ್ಟಿದೆ. ಸಿಂಧೂ ನಾಗರೀಕತೆಯ ಉಗಮ ಮತ್ತು ಪತನದ ಚಿತ್ರದ ಚಿಂತನೆ ಆ ಮರದಿಂದ ನಿರೂಪಿಸಲ್ಪಟ್ಟಿದೆ. ಕೆಲವು ವರ್ಷಗಳ ನಂತರ ಪಾಕಿಸ್ತಾನಕ್ಕೆ ಹೋಗಿದ್ದೆ. ಆದರೆ ಮೊಹೆಂಜೊದಾರೊಗೆ ಭೇಟಿ ನೀಡಲು ತುಂಬಾ ಪ್ರಯತ್ನಿಸಿದೆ. ಆದರೆ ದುರಾದೃಷ್ಟವಾತ್​ ನನಗೆ ಅನುಮತಿ ಸಿಕ್ಕಿಲ್ಲ" ಎಂದು ಬೇಸರದ ಎಮೋಜಿ ಜೊತೆ ಉತ್ತರಿಸಿದ್ದಾರೆ.

ಸದ್ಯ ಇವರಿಬ್ಬರ ಈ ಟ್ವೀಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿವೆ. ನಿರ್ದೇಶಕ ರಾಜಮೌಳಿ ಅವರು ಇತಿಹಾಸ, ಪೌರಾಣಿಕ ಸಿನಿಮಾಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಹೀಗಾಗಿ ಆನಂದ್ ಮಹೀಂದ್ರಾ ಅವರು ನೇರವಾಗಿ ರಾಜಮೌಳಿ ಅವರಲ್ಲೇ ಸಿಂಧೂ ಕಣಿವೆ ನಾಗರೀಕತೆಯ ಸಿನಿಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ನೆಟ್ಟಿಗರು ಕೂಡ ಈ ಕುರಿತು ಸಿನಿಮಾ ಮಾಡುವಂತೆ ರಾಜಮೌಳಿ ಅವರಲ್ಲಿ ಮನವಿ ಮಾಡುತ್ತಿದ್ದಾರೆ. ಸದ್ಯ ಈ ನಿರ್ದೇಶಕ ಟಾಲಿವುಡ್​ ಸ್ಟಾರ್​ ಮಹೇಶ್​ ಬಾಬು ಅವರ ಸಿನಿಮಾಗೆ ಸಂಬಂಧಿಸಿದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಟಾಲಿವುಡ್​ ಗಾಸಿಪ್: ದುಬೈನಲ್ಲಿ ದುಬಾರಿ ವಿಲ್ಲಾ ಖರೀದಿಸಿದ್ರಂತೆ ಮಹೇಶ್​ ಬಾಬು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.