ETV Bharat / entertainment

ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಟ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​

India's most successful actor Akshay Kumar: ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಭಾರತದ ಅತ್ಯಂತ ಯಶಸ್ವಿ ನಟನಾಗಿ ಹೊರಹೊಮ್ಮಿದ್ದಾರೆ.

India's most successful actor Akshay Kumar
ಅಕ್ಷಯ್​ ಕುಮಾರ್​
author img

By ETV Bharat Karnataka Team

Published : Sep 5, 2023, 7:54 PM IST

ಬಣ್ಣದ ಲೋಕವೇ ಹೀಗೆ ಅಲ್ಲವೇ! ನೂರು ಸಿನಿಮಾ ಮಾಡಿದ್ರೂ ಸಿಗದೇ ಇರೋ ಕ್ರೇಜ್​, ಸ್ಟಾರ್​ ಗಿರಿ ಪಟ್ಟ ಕೆಲವೊಬ್ಬರಿಗೆ ಒಂದೇ ಚಿತ್ರದಲ್ಲಿ ದಕ್ಕಿಬಿಡುತ್ತದೆ. ಇನ್ನು ಕೆಲವರಿಗೆ ಹೀಗಲ್ಲ. ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿದ್ದು, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಪ್ರತಿ ಬಾರಿಯೂ ಗೆಲ್ಲುತ್ತಾ ಸ್ಟಾರ್​ ಹೀರೋಗಳಾಗಿದ್ದಾರೆ. ಡಾ.ರಾಜ್​ಕುಮಾರ್​, ಎನ್​ಟಿಆರ್​, ಅಮಿತಾಭ್​ ಬಚ್ಚನ್​ರಿಂದ ಹಿಡಿದು ರಜನಿಕಾಂತ್​, ಶಾರುಖ್​ ಖಾನ್​, ಯಶ್​, ಪ್ರಭಾಸ್​ ಹೀಗೆ ಅನೇಕರು ತಮ್ಮ ಕಠಿಣ ಶ್ರಮ, ಛಲದಿಂದ ಸ್ಟಾರ್​ ಪಟ್ಟಕ್ಕೆ ಏರಿದ್ದಾರೆ.

ಇವರೆಲ್ಲರೂ ತಮ್ಮ ಅದ್ಭುತ ಸಿನಿಮಾಗಳ ಮೂಲಕ ಬಾಕ್ಸ್​ ಆಫೀಸ್​ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ಮಧ್ಯೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟನ ಪಟ್ಟವನ್ನು ಬಾಲಿವುಡ್​ ಸ್ಟಾರ್​ ನಟರೊಬ್ಬರು ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ 'ಓ ಮೈ ಗಾಡ್​ 2' ಸಿನಿಮಾ ಮೂಲಕ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ ಸ್ಟಾರ್​ ನಟ ಅಕ್ಷಯ್​ ಕುಮಾರ್​ ಭಾರತದ ಅತ್ಯಂತ ಯಶಸ್ವಿ ನಟನಾಗಿ ಹೊರಹೊಮ್ಮಿದ್ದಾರೆ.

ಅಕ್ಷಯ್​ ಕುಮಾರ್​ ಸಿನಿಮಾಗಳು: ಸುಮಾರು 32 ವರ್ಷಗಳಿಂದ ಅಕ್ಷಯ್​ ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಅವರ ಅನೇಕ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಭಾರೀ ಸದ್ದು ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ಹಣದ ಸುರಿಮಳೆಯನ್ನೇ ಹರಿಸಿವೆ. ಇವರ ಚಿತ್ರಗಳು ಭಾರತದಲ್ಲಿ 2023ರ ವೇಳೆಗೆ ಒಟ್ಟು 4,834 ಕೋಟಿ ರೂಪಾಯಿ ಸಂಗ್ರಹಿಸಿದೆ. ಆದರೆ, ಇದುವರೆಗೂ ಅವರ ಚಿತ್ರಗಳು ದೊಡ್ಡ ಮಟ್ಟದಲ್ಲಿ ಹಿಟ್​ ಕಾಣದೇ ಇದ್ದರೂ ಸಹ, ಅಕ್ಷಯ್​ ನಟನೆಯ 126 ಚಿತ್ರಗಳು ಸುಮಾರು 250 ಮಿಲಿಯನ್​ ಗಳಿಸಿದೆ. ಹಾಗಾಗಿ ಈ ಸ್ಟಾರ್ ಹೀರೋ ಸಿನಿಮಾಗಳು ವಿಶ್ವವ್ಯಾಪಿಯಾಗಿ 8000 ಕೋಟಿ ರೂಪಾಯಿ ಸಂಗ್ರಹಿಸಿವೆ.​

ಇದನ್ನೂ ಓದಿ: Akshay Kumar: 'ಮನಸ್ಸು, ಪೌರತ್ವ ಎರಡೂ ಹಿಂದೂಸ್ತಾನಿ'.. ಅಧಿಕೃತವಾಗಿ ಭಾರತೀಯ ಪ್ರಜೆಯಾದ ನಟ ಅಕ್ಷಯ್​ ಕುಮಾರ್

ಈ ಮೂಲಕ ಅಕ್ಷಯ್​ ಕುಮಾರ್​ ಅವರು ಸೂಪರ್​ಸ್ಟಾರ್​ ರಜನಿಕಾಂತ್​, ಕಮಲ್​ ಹಾಸನ್​, ಪ್ರಭಾಸ್​ರಂತಹ ಸ್ಟಾರ್​ ನಟರನ್ನು ಹಿಂದಕ್ಕೆ ತಳ್ಳಿದ್ದಾರೆ. ಇವರೆಲ್ಲರೂ ತಮ್ಮ ಸಿನಿಮಾಗಳ ಮೂಲಕ ಹಲವು ಬಾರಿ ಬಾಕ್ಸ್​ ಆಫೀಸ್​ನಲ್ಲಿ 400 ಕೋಟಿ ರೂಪಾಯಿಗಳ ಗಡಿ ದಾಟಿದ್ದಾರೆ. ಆದರೆ ಅಕ್ಷಯ್​ಗೆ ಈ ಅಂಕವನ್ನು ದಾಟಲು ಸಾಧ್ಯವಾಗಲಿಲ್ಲ. ಅವರ ಚಿತ್ರಗಳು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂಪಾಯಿಗಳ ಗಡಿ ದಾಟದೇ ಸುಮಾರು 15 ವರ್ಷಗಳೇ ಕಳೆದಿದೆ.

ಆದರೂ ಅಂದಿನಿಂದ ಇಂದಿನವರೆಗೂ ಅಕ್ಷಯ್​ ಕುಮಾರ್​ ಸುಮಾರು 52 ಚಿತ್ರಗಳಲ್ಲಿ ನಟಿಸಿದ್ದಾರೆ. ಅದೇ ಸಮಯದಲ್ಲಿ ಶಾರುಖ್​ ಖಾನ್​ ಕೇವಲ 15 ಚಿತ್ರಗಳಲ್ಲಿ ಮತ್ತು ಸಲ್ಮಾನ್​ ಖಾನ್​ 25 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಅಮೀರ್​ ಖಾನ್​ ಒಂಬತ್ತು ಚಿತ್ರಗಳನ್ನು ಮಾಡಿದ್ದಾರೆ. ಈ ಮೂಲಕ ಅಕ್ಷಯ್​ ಕುಮಾರ್​ ಅವರು ಎಲ್ಲಾ ನಟರಿಗಿಂತ ಹೆಚ್ಚು ಸಿನಿಮಾಗಳನ್ನು ಮಾಡಿರುವುದರಿಂದಾಗಿ, ಬಾಕ್ಸ್​ ಆಫೀಸ್​ನಲ್ಲಿ ಹೆಚ್ಚು ಹಿಟ್​ ಗಳಿಸಿದ್ದಾರೆ. ಇದರಲ್ಲಿ 2.0, ಸೂರ್ಯವಂಶಿ, ಮಿಷನ್​ ಮಂಗಲ್​, ಏರ್​ಲಿಫ್ಟ್​ನಂತಹ ಸಿನಿಮಾಗಳು ಸೇರಿವೆ.

ಇದನ್ನೂ ಓದಿ: 20 ವರ್ಷಗಳ ಬ್ರೇಕ್ ಬಳಿಕ ತೆರೆ ಹಂಚಿಕೊಳ್ಳಲಿದ್ದಾರೆ ಅಕ್ಷಯ್​ ಕುಮಾರ್​-ರವೀನಾ ಟಂಡನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.