ಬೆಂಗಳೂರು: ಚಿತ್ತಾರ ಸಹಯೋಗದೊಂದಿಗೆ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಇಂಡಿಯನ್ ಹಾತ್ ಫೆಸ್ಟಿವಲ್ ಅನ್ನು ಆಯೋಜಿಸಿದ್ದಾರೆ. ನಿನ್ನೆ ಆರಂಭವಾಗಿದ್ದು 10 ದಿನಗಳ ಕಾಲ ನಡೆಯುವ ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಟಿ ಹಾಗೂ ರೂಪದರ್ಶಿಯರಾದ ಲಾಸ್ಯ ನಾಗರಾಜ್ ಹಾಗೂ ಸುಮನಾ ಗೌಡ ಉದ್ಘಾಟಿಸಿದರು.
ನಟಿ ಸುಮನಾ ಗೌಡ ಮಾತನಾಡಿ, ಚಿತ್ರಕಲಾ ಪರಿಷತ್ ಯಾವಾಗಲೂ ಕಲೆ, ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ. ಇಲ್ಲಿ ಆಯೋಜಿಸುವ ಈ ಇಂಡಿಯನ್ ಹಾತ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ದೇಶಾದ್ಯಂತ ಕಲಾವಿದರು ಬಂದಿದ್ದಾರೆ. ಅವರಲ್ಲಿನ ಕಲೆಯನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಬಟ್ಟೆಯಿಂದ ಹಿಡಿದು ಮನೆಗೆ ಬೇಕಾಗುವ ಎಲ್ಲಾ ಅಲಂಕಾರಿಕ ಹಾಗೂ ಇತರೆ ವಸ್ತುಗಳು ಇಲ್ಲಿ ಸಿಗಲಿವೆ. ನೋಡುವುದಕ್ಕೂ ಕೂಡ ಒಂದಕ್ಕಿಂತ ಒಂದು ಸುಂದರವಾಗಿದೆ. ಹಾಗೇ ಕೈಗೆಟಕುವ ದರದಲ್ಲಿ ಇದು ಲಭ್ಯವಿರುವುದರಿಂದ ಎಲ್ಲರೂ ಕೂಡ ಇದನ್ನು ಖರೀದಿಸಬಹುದು ಎಂದರು.
![Indian Hath Festival](https://etvbharatimages.akamaized.net/etvbharat/prod-images/16270477_newsss.jpg)
ನಟಿ ಲಾಸ್ಯ ನಾಗರಾಜ್ ಮಾತನಾಡಿ, ಸಾಮಾನ್ಯವಾಗಿ ಆನ್ಲೈನ್ನಲ್ಲಿ ಖರೀದಿಸುವಾಗ ನಮಗೆ ವಸ್ತುಗಳ ಗುಣಮಟ್ಟದ ಬಗ್ಗೆ ಅಷ್ಟಾಗಿ ತಿಳಿಯುವುದಿಲ್ಲ. ಆದರೆ ಇಲ್ಲಿ ಉತ್ತಮ ಗುಣಮಟ್ಟದ ಜೊತೆಗೆ ವೈವಿಧ್ಯಮಯ ಸಂಗ್ರಹ ಕೂಡ ಸಿಗಲಿದೆ. ಎಲ್ಲಾ ಬಗೆಯ ಅಲಂಕಾರಿಕ ವಸ್ತುಗಳು ಇಲ್ಲಿವೆ. ನೋಡುವುದಕ್ಕೂ ಕೂಡ ತುಂಬಾನೇ ಚೆನ್ನಾಗಿದೆ. ಸೀರೆ, ಕುರ್ತಿ, ಆಭರಣಗಳು ನೋಡುಗರ ಕಣ್ಮನ ಸೆಳೆಯುವಷ್ಟು ಸುಂದರವಾಗಿದೆ ಎಂದು ತಿಳಿಸಿದರು.
![Indian Hath Festival](https://etvbharatimages.akamaized.net/etvbharat/prod-images/16270477_news.jpg)
ಇದನ್ನೂ ಓದಿ: 'K ಕರಟಕ D ದಮನಕ' - ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ಯೋಗರಾಜ್ ಭಟ್
10 ದಿನಗಳ ಕಾಲ ನಡೆಯುವ ಕರಕುಶಲ ಪ್ರದರ್ಶನ: ನಿನ್ನೆಯಿಂದ 10 ದಿನಗಳ ಕಾಲ ನಡೆಯುವ ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ನಾನಾ ಕಡೆಯಿಂದ ಬಂದ ಕಲಾವಿದರು ತಮ್ಮ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ. ಅಲಂಕಾರಿಕ ವಸ್ತು, ವೈವಿಧ್ಯಮಯ ಉಡುಪು, ಆಭರಣಗಳು ಇಲ್ಲಿ ಲಭ್ಯವಿದೆ. ಕಲಾ ಪ್ರಿಯರಿಗೆ ವಿವಿಧ ಬಗೆಯ ವಸ್ತುಗಳನ್ನು ಕಣ್ತುಂಬಿಕೊಳ್ಳಲು ಹಾಗೇ ಖರೀದಿಸಲು ಇದೊಂದು ಅತ್ಯುತ್ತಮ ಅವಕಾಶ. ಕರಕುಶಲ ಕಲಾವಿದರು ತಯಾರಿಸಿದ ನಾನಾ ಬಗೆಯ ಉತ್ಪನ್ನಗಳು ಕಣ್ಣಿಗೆ ಮುದ ನೀಡುವುದರ ಜೊತೆಗೆ ಒಂದೇ ಸೂರಿನಡಿ ನಿಮಗೆ ಸಿಗಲಿವೆ.