ETV Bharat / entertainment

ಮಹಾಭಾರತ ಖ್ಯಾತಿಯ ಹಿರಿಯ ನಟ ರಸಿಕ್ ದೇವ್​​ ವಿಧಿವಶ - ನಟ ರಸಿಕ್ ಡೇವ್

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಮಹಾಭಾರತ ಖ್ಯಾತಿಯ ನಟ ರಸಿಕ್ ದೇವ್​​ ನಿಧನ-ಹಿಂದಿ, ಗುಜರಾತಿ ಸಿನಿಮಾ ಹಾಗೂ ಅನೇಕ ಟಿವಿ ಶೋಗಳಲ್ಲಿ ನಟನೆ- ನೆಚ್ಚಿನ ನಟನ ಅಗಲಿಕೆಗೆ ಕಂಬನಿ ಮಿಡಿದ ಬಾಲಿವುಡ್ ಮಂದಿ

Indian film and TV actor Rasik Dave dies

author img

By

Published : Jul 30, 2022, 7:27 PM IST

ಮುಂಬೈ(ಮಹಾರಾಷ್ಟ್ರ): ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ 65 ವರ್ಷದ ಖ್ಯಾತ ಹಿರಿಯ ನಟ ರಸಿಕ್ ದೇವ್ ಶುಕ್ರವಾರ ಸಂಜೆ​ ನಿಧನರಾಗಿದ್ದಾರೆ. ಮಹಾಭಾರತದಲ್ಲಿ ನಟನೆ ಮಾಡುವ ಮೂಲಕ ಎಲ್ಲರ ಮನಗೆದ್ದಿದ್ದ ಈ ನಟ ಹಿಂದಿ, ಗುಜರಾತಿ ಸಿನಿಮಾ ಹಾಗೂ ಅನೇಕ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಕಳೆದ ನಾಲ್ಕು ವರ್ಷಗಳಿಂದ ಮೂತ್ರ ಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ರಸಿಕ್ ಕೊನೆಯುಸಿರೆಳೆದಿದ್ದಾರೆಂದು ಹಿರಿಯ ನಟಿ ಸರಿತಾ ಜೋಶಿ ತಿಳಿಸಿದ್ದಾರೆ.

ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆ: ಅನಾರೋಗ್ಯದಿಂದ ಬಳಲುತ್ತಿದ್ದ ರಸಿಕ್ ದೇವ್​​ ಅವರು ಕಳೆದ 20 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಶುಕ್ರವಾರ ಸಂಜೆ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ಕುಟುಂಬದ ಸದಸ್ಯರು, ಆಪ್ತ ವಲಯದ ಸಮ್ಮುಖದಲ್ಲಿ ಅಂತ್ಯಕ್ರಿಯೆ ಸಹ ನಡೆದಿದೆ.

1982ರಲ್ಲಿ ಪುತ್ರ ವಧು ಎಂಬ ಗುಜರಾತಿ ಸಿನಿಮಾದೊಂದಿಗೆ ತಮ್ಮ ಸಿನಿಮಾ ಬಣ್ಣದ ಬದುಕು ಆರಂಭಿಸಿದ್ದ ಇವರು, ಅನೇಕ ಹಿಂದಿ ಚಿತ್ರಗಳಲ್ಲೂ ನಟನೆ ಮಾಡಿದ್ದು, ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ನಟ ಹೃಷಿಕೇಶ್ ಮುಖರ್ಜಿ ನಿರ್ದೇಶನದ ಚಲನಚಿತ್ರ ಜೂಥಿ, ಏಕ್ ಮಹಲ್ ಹೋ ಸಪ್ನೋ ಕಾ, ಮಹಾಭಾರತ, ಸಂಸ್ಕಾರ್ - ಧರೋಹರ್ ಅಪ್ನೋನ್ ಕಿದಲ್ಲಿ ಕಾಣಿಸಿಕೊಂಡಿದ್ದರು.

ಬಾಲಿವುಡ್ ಮಂದಿ ಸಂತಾಪ: ರಸಿಕ್ ದೇವ್​ ನಿಧನಕ್ಕೆ ನಟ ಹಾಗೂ ನಿರ್ಮಾಪಕ ಜೆಡಿ ಮಜೇಥಿಯಾ ಟ್ವಿಟರ್​​ನಲ್ಲಿ ಸಂತಾಪ ಸೂಚಿಸಿದ್ದು, ರಸಿಕ್ ದೇವ್​ ಅವರ ಮರಣದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ ಎಂದಿದ್ದಾರೆ. ದೇವರು ನಿಮ್ಮ ಕುಟುಂಬಕ್ಕೆ ನಿಮ್ಮ ಅಗಲಿಕೆಯ ಕಷ್ಟವನ್ನು ಭರಿಸುವ ಶಕ್ತಿ ನೀಡಲಿ ಓಂ ಶಾಂತಿ ಎಂದು ಜೆಡಿ ಮಜೇಥಿಯಾ ಬರೆದುಕೊಂಡಿದ್ದಾರೆ. ಪೌರಾಣಿಕ ಟಿವಿ ಧಾರವಾಹಿ ಮಹಾಭಾರತದಲ್ಲಿ ನಂದಾ (ನಕುಲ)ನ ಪಾತ್ರವನ್ನು ನಿರ್ವಹಿಸಿದ್ದ ಇವರು ಜನಪ್ರಿಯರಾಗಿದ್ದರು.

ಇದನ್ನೂ ಓದಿರಿ: ನನಗೆ ಏನಾದರೂ ಆದಲ್ಲಿ ಇವರೇ ಕಾರಣ; ಸೆನ್ಸೇಷನಲ್​​ ಪೋಸ್ಟ್​ ಹಾಕಿದ ಬಾಲಿವುಡ್​ ನಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.