ETV Bharat / entertainment

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ ಆರಂಭ: ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲಿರುವ ಭಾರತೀಯ ಸೆಲೆಬ್ರಿಟಿಗಳಿವರು - ವಿಜಯ್ ವರ್ಮಾ

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಾರಾ ಅಲಿ ಖಾನ್, ಮಾನುಷಿ ಚಿಲ್ಲರ್, ಐಶ್ವರ್ಯಾ ರೈ ಬಚ್ಚನ್, ಅನುಷ್ಕಾ ಶರ್ಮಾ ಸೇರಿದಂತೆ ಹಲವರು ಭಾಗಿ ಆಗಲಿದ್ದಾರೆ.

Cannes Film Festival
ಕೇನ್ಸ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಭಾರತೀಯ ಸೆಲೆಬ್ರಿಟಿಗಳು
author img

By

Published : May 16, 2023, 1:24 PM IST

Updated : May 16, 2023, 3:14 PM IST

ಇಂದು ಆರಂಭವಾಗಿರುವ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival) ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲಿರುವ ಭಾರತೀಯ ಸೆಲೆಬ್ರಿಟಿಗಳ ಪೈಕಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಮಾಜಿ ವಿಶ್ವ ಸುಂದರಿ, ಬಾಲಿವುಡ್​ ನಟಿ ಮಾನುಷಿ ಚಿಲ್ಲರ್ ಕೂಡ ಸೇರಿದ್ದಾರೆ. ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವದಲ್ಲಿ ಭಾಗಿ ಆಗುತ್ತಿದ್ದಾರೆ. ಇಬ್ಬರೂ ಚೆಲುವೆಯರು ಫ್ರಾನ್ಸ್‌ಗೆ ತೆರಳಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ.

ಜನಪ್ರಿಯ 76ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ ಇಂದು ಆರಂಭಗೊಂಡಿದ್ದು, ಮೇ 27ರವರೆಗೆ ನಡೆಯಲಿದೆ. ಸೆಲೆಬ್ರಿಟಿಗಳಾದ ವಿಜಯ್ ವರ್ಮಾ ಮತ್ತು ಊರ್ವಶಿ ರೌಟೇಲಾ ಈಗಾಗಲೇ ಫ್ರಾನ್ಸ್​ನ ಫ್ರೆಂಚ್ ರಿವೇರಿಯಾ ಪ್ರದೇಶಕ್ಕೆ ತಲುಪಿದ್ದಾರೆ. ಸಾರಾ ಮತ್ತು ಮಾನುಷಿ ಅವರು ಸೋಮವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಿಂದ ಹೊರಟರು. ಆ ವೇಳೆ, ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಕೇನ್ಸ್ ರೆಡ್ ಕಾರ್ಪೆಟ್ ನಡಿಗೆಯು ಸಿನಿಮಾ ವೃತ್ತಿಜೀವನದ ಮೈಲಿಗಲ್ಲು ಎಂದು ಪರಿಗಣಿಸಲಾಗಿದ್ದು, ಸಾಗರೋತ್ತರ ಪ್ರದೇಶಗಳಿಗೆ ಹಾರುವ ವೇಳೆ ಈ ಇಬ್ಬರೂ ಚೆಲುವೆಯರು ಸ್ಟೈಲಿಶ್ ಏರ್ ಪೋರ್ಟ್ ಲುಕ್ ಅನ್ನು ಆಯ್ಕೆ ಮಾಡಿಕೊಂಡರು.

ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್,​​ ಬ್ಲ್ಯಾಕ್​ ಜಾಕೆಟ್ ಮತ್ತು ಡೆನಿಮ್ ಧರಿಸಿದ್ದರು. ಬ್ಲ್ಯಾಕ್​​ ಬ್ಯಾಗ್‌ನೊಂದಿಗೆ ತಮ್ಮ ವಿಮಾನ ನಿಲ್ದಾಣದ ನೋಟವನ್ನು ಪೂರ್ಣಗೊಳಿಸಿಕೊಂಡಿದ್ದರು. ಮತ್ತೊಂದೆಡೆ ಮಾಜಿ ವಿಶ್ವ ಸುಂದರಿ ವೈಟ್ ಟಾಪ್‌, ಬ್ಲ್ಯೂ ಜೀನ್ಸ್‌ನೊಂದಿಗೆ ಕಾಣಿಸಿಕೊಂಡರು. ಈ ನಟಿಮಣಿಯರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: 'ದಿ ಕೇರಳ ಸ್ಟೋರಿ' ಚಿತ್ರದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ: ಐವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಗಾಯ

ಸಾರಾ ಮತ್ತು ಮಾನುಷಿ ಅಲ್ಲದೇ ಮತ್ತೋರ್ವ ಬಾಲಿವುಡ್​​ ನಟಿ ಅನುಷ್ಕಾ ಶರ್ಮಾ ಕೂಡ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಭಾರತೀಯ ಚಲನಚಿತ್ರ ನಿರ್ಮಾಪಕಿ ಗುನೀತ್​ ಮೊಂಗಾ, ನಟಿ ಇಶಾ ಗುಪ್ತಾ, ಕಂಗಬಮ್ ತೊಂಬಾ ಮತ್ತು ಸೋಷಿಯಲ್​ ಮೀಡಿಯಾ ಸ್ಟಾರ್ ಮತ್ತು ಕಂಟೆಂಟ್ ಕ್ರಿಯೇಟರ್ ಡಾಲಿ ಸಿಂಗ್ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿದ್ದಾರೆ. ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಈ ವರ್ಷವೂ ಚಲನಚಿತ್ರೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್​​ ಇಲ್ಲದೇ ಸೆಲೆಬ್ರಿಟಿಗಳ ಬೈಕ್​​ ರೈಡ್: ಅಮಿತಾಭ್​​ ಬಳಿಕ ಕೊಹ್ಲಿ ಪತ್ನಿ ಅನುಷ್ಕಾ ವಿರುದ್ಧ ಪೊಲೀಸ್​​ ಕ್ರಮ!

ಕೇನ್ಸ್​ ಫಿಲ್ಮ್​ ಫೆಸ್ಟಿವಲ್​: ಪ್ರಪಂಚದ ಪ್ರಸಿದ್ಧ ಚಲನಚಿತ್ರೋತ್ಸವಗಳ ಪೈಕಿ 'ಕೇನ್ಸ್​ ಫಿಲ್ಮ್​ ಫೆಸ್ಟಿವಲ್' ಕೂಡ ಒಂದು. 1946ರಿಂದ ಈ ಕಾರ್ಯಕ್ರಮ ಆರಂಭಗೊಂಡಿದೆ. ಈ ಚಲನಚಿತ್ರೋತ್ಸವದಲ್ಲಿ ಉತ್ತಮ ಸಿನಿಮಾಗಳನ್ನು ಪ್ರಸಾರ ಮಾಡಲಾಗುತ್ತದೆ. ರೆಡ್​ ಕಾರ್ಪೆಟ್​​ ಮೇಲೆ ಜನಪ್ರಿಯ ಸೆಲೆಬ್ರಿಟಿಗಳು ಹೆಜ್ಜೆ ಹಾಕುತ್ತಾರೆ. 76ನೇ ಕೇನ್ಸ್​ ಫಿಲ್ಮ್​ ಫೆಸ್ಟಿವಲ್​ ಇಂದು ಆರಂಭಗೊಂಡಿದ್ದು, ಮೇ. 27ರವರೆಗೆ ನಡೆಯಲಿದೆ.

Last Updated : May 16, 2023, 3:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.