ETV Bharat / entertainment

Independence day: ರಿಷಬ್​ ಶೆಟ್ಟಿ ಸೇರಿ ಸ್ಯಾಂಡಲ್​ವುಡ್​ ಗಣ್ಯರಿಂದ ನಾಡಿನ ಜನತೆಗೆ ಶುಭಾಶಯ - dolly dhananjay

Sandalwood stars wishes: ಸ್ವಾತಂತ್ರ್ಯ ದಿನದ ಅಂಗವಾಗಿ ಕನ್ನಡ ಚಿತ್ರರಂಗದ ಗಣ್ಯರು ನಾಡಿನ ಜನತೆಗೆ ಶುಭ ಕೋರಿದ್ದಾರೆ.

Independence day wishes from Sandalwood stars
ಸ್ಯಾಂಡಲ್​ವುಡ್​ ಗಣ್ಯರಿಂದ ಸ್ವಾತಂತ್ರ್ಯ ದಿನದ ಶುಭಾಶಯ
author img

By

Published : Aug 15, 2023, 3:54 PM IST

ಭಾರತಕ್ಕೆ ಇಂದು ಸ್ವಾತಂತ್ರ್ಯ ದಿನದ ಸಂಭ್ರಮ. ದೇಶಾದ್ಯಂತ 77 ನೇ ಸ್ವಾತಂತ್ರ್ಯ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗಿದೆ. ರಾಜಕೀಯದಿಂದ ಹಿಡಿದು ಸಿನಿಮಾ ರಂಗದವರೆಗಿನ ಗಣ್ಯರು ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದಾರೆ. ಚಿತ್ರರಂಗದವರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ: ಕಾಂತಾರ ಎಂಬ ಅದ್ಭುತ ಸಿನಿಮಾ ಮೂಲಕ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಛಾಪು ಮೂಡಿಸಿರುವ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ನಾಡಿನ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದಾರೆ. ತ್ರಿವರ್ಣ ಧ್ವಜ ಹಿಡಿದ ನಟ, ನಿರ್ದೇಶಕ ರಿಷಬ್​ ಶೆಟ್ಟಿ 'ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

ರಿಷಬ್​ ಶೆಟ್ಟಿ ಕುಟುಂಬ: ನಟ ತಮ್ಮ ಪೋಟೋ ಮಾತ್ರವಲ್ಲದೇ ಮುದ್ದು ಮಕ್ಕಳ ಸುಂದರ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ. ''ಈ 77ನೇ ಸ್ವಾತಂತ್ರ್ಯ ದಿನದಂದು, ರನ್ವಿತ್ ಮತ್ತು ರಾಧ್ಯ ನಿಮ್ಮೆಲರಿಗೂ ಶುಭಾಶಯಗಳನ್ನು ಕೋರುತ್ತಿದ್ದಾರೆ'' ಎಂದು ಬರೆದುಕೊಂಡಿದ್ದಾರೆ. ರಿಷಬ್​ ಪತ್ನಿ ಪ್ರಗತಿ ಶೆಟ್ಟಿ ಸಹ ಮಕ್ಕಳ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಶಿವರಾಜ್​​ಕುಮಾರ್ ದಂಪತಿ: ಮೈಸೂರು ನಗರದ ಶಕ್ತಿ ಧಾಮದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಿವರಾಜ್​​ಕುಮಾರ್ ದಂಪತಿ ಭಾಗಿಯಾಗಿದ್ದರು. ನಗರದ ಊಟಿ ರಸ್ತೆಯಲ್ಲಿರುವ ಶಕ್ತಿ ಧಾಮದಲ್ಲಿ ಆಯೋಜನೆಗೊಂಡಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಶಿವಣ್ಣ ಭಾಗವಹಿಸಿ, ಧ್ವಜಾರೋಹಣ ಮಾಡಿದರು.

Independence day wishes from Sandalwood stars
ಮೈಸೂರಿನಲ್ಲಿ ಶಿವ ರಾಜ್​​ಕುಮಾರ್ ದಂಪತಿ

ಅಭಿನಯ ಚಕ್ರವರ್ತಿ ಸುದೀಪ್​​: ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್​ ತ್ರಿವರ್ಣ ಧ್ವಜದ ಸುಂದರ ವಿಡಿಯೋ ಶೇರ್ ಮಾಡಿ ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. 'ಜಗತ್ತಿನಾದ್ಯಂತ ಇರುವ ಪ್ರತಿಯೊಬ್ಬ ಭಾರತೀಯರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು, 77 ನೇ ಸ್ವಾತಂತ್ರ್ಯ ಮಹೋತ್ಸವ ಮಹೋನ್ನತವಾಗಲಿ' ಎಂದು ಟ್ವೀಟ್​ ಮಾಡಿದ್ದಾರೆ.

  • ಜಗತ್ತಿನಾದ್ಯಂತ ಇರುವ ಪ್ರತಿಯೊಬ್ಬ ಭಾರತೀಯರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು
    77 ನೆ ಸ್ವಾತಂತ್ರ್ಯ ಮಹೋತ್ಸವ ಮಹೋನ್ನತ ವಾಗಲಿ
    Happy independence day to every proud INDIAN ♥️ pic.twitter.com/qKRl6gzboR

    — Kichcha Sudeepa (@KicchaSudeep) August 15, 2023 " class="align-text-top noRightClick twitterSection" data=" ">

ಡಾಲಿ ಧನಂಜಯ್​: ಸ್ಯಾಂಡಲ್​ವುಡ್​ನ ಬಹುಬೇಡಿಕೆ ನಟ ಡಾಲಿ ಧನಂಜಯ್​ ಸದ್ಯ ಟಗರು ಪಲ್ಯ ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಡಾಲಿ ಪಿಕ್ಚರ್ಸ್ ಚಲನಚಿತ್ರ ನಿರ್ಮಾಣ ಸಂಸ್ಥೆ ಮೂಲಕ ಟಗರು ಪಲ್ಯ ನಿರ್ಮಾಣ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಚಿತ್ರದ ಟೈಟಲ್​ ಟ್ರ್ಯಾಕ್​ ಅನಾವರಣಗೊಳ್ಳಲಿದೆ. ಈ ಹಿನ್ನೆಲೆ ಸಿನಿಮಾಗೆ ಸಂಬಂಧಿಸಿದ ವಿಡಿಯೋ ಶೇರ್ ಮಾಡಿ, 'ಇಂದು ಲೋಕದಾ ತುಂಬೆಲ್ಲಾ ನಮ್ಮದೇ ಟ್ರೈಕಲರು, ಇನ್ನೆರಡು ದಿನದಲ್ಲಿ ಟಗರುಪಲ್ಯ ಹಾಡಿನದೇ ಕಾರುಬಾರು, ಟ ಟ ಟ ಟ ಟ ಟ ಟಗರು ಟಗರು ಟಗರುಪಲ್ಯ, ಆಗಸ್ಟ್ 17ಕ್ಕೆ ಟೈಟಲ್​ ಟ್ರ್ಯಾಕ್​ ಅನಾವರಣ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Akshay Kumar: 'ಮನಸ್ಸು, ಪೌರತ್ವ ಎರಡೂ ಹಿಂದೂಸ್ತಾನಿ'.. ಅಧಿಕೃತವಾಗಿ ಭಾರತೀಯ ಪ್ರಜೆಯಾದ ನಟ ಅಕ್ಷಯ್​ ಕುಮಾರ್

ಸುಮಲತಾ ಅಂಬರೀಶ್​​: ಹಿರಿಯ ನಟಿ, ಸಂಸದೆ ಸುಮಲತಾ ಅವರು ಇಂಡಿಯಾ ಮ್ಯಾಪ್​​ನ ಸುಂದರ ಫೋಟೋ ಶೇರ್ ಮಾಡಿದ್ದಾರೆ. ಅದರಲ್ಲಿ ಪತಿ, ದಿ. ನಟ ಅಂಬರೀಶ್ ಅವರ ಚಿತ್ರವೂ ಇದೆ. ಸಂಸದೆ ತ್ರಿವರ್ಣ ಧ್ವಜ ಹಿಡಿದು ನಿಂತಿದ್ದು, ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Roopesh Shetty: ಕರಾವಳಿ ಪ್ರತಿಭೆ ರೂಪೇಶ್​ ಶೆಟ್ಟಿ ಕನ್ನಡ ಸಿನಿಮಾ ಟೈಟಲ್​ ರಿವೀಲ್​​ - ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ನೆನಪಿರಲಿ ಪ್ರೇಮ್​: ಬಹಳ ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ನೆನಪಿರಲಿ ಖ್ಯಾತಿಯ ಪ್ರೇಮ್​​, ಕೆನ್ನೆ ಮೇಲೆ ತ್ರಿವರ್ಣ ಬಳಿದಿರುವ ತಮ್ಮ ಫೊಟೋ ಹಂಚಿಕೊಂಡಿದ್ದಾರೆ. 'ಸ್ವಾತಂತ್ರೋತ್ಸವದ ಶುಭಾಶಯಗಳು, ವಂದೇ ಮಾತರಂ, ಜೈ ಹಿಂದ್'ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.