ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಬಂಧನ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿದೆ. ಪ್ರತಿಭಟನಾಕಾರರು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ಸಂದರ್ಭದಲ್ಲಿ ಇಮ್ರಾನ್ ಖಾನ್ ಕುರಿತಾದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಾಕ್ ವಿಡಿಯೋಗೆ 'ದಿ ಕಾಶ್ಮೀರ್ ಫೈಲ್ಸ್' ಹಾಡು ಬಳಕೆ: ಪಾಕಿಸ್ತಾನ್ ರಾಜಕೀಯ ಅವ್ಯವಸ್ಥೆಯ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರ ವಿಡಿಯೋವೊಂದು ಗಮನ ಸೆಳೆದಿದೆ. ಇಮ್ರಾನ್ ಖಾನ್ ನೇತೃತ್ವದ ರಾಜಕೀಯ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ)ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಹಾಡನ್ನು ಬಳಸಿಕೊಂಡಿದ್ದಾರೆ. ಈ ಹಾಡು ಇರುವ ವಿಡಿಯೋಗಳು ವೈರಲ್ ಆಗುತ್ತಿದೆ. ತೆಹ್ರೀಕ್-ಎ-ಇನ್ಸಾಫ್ ಪಕ್ಷವನ್ನು ಗುಣಗಾನ ಮಾಡಲು, ಇಮ್ರಾನ್ ಖಾನ್ ಇರುವ ವಿಡಿಯೋದ ಹಿನ್ನೆಲೆಗೆ 'ದಿ ಕಾಶ್ಮೀರ್ ಫೈಲ್ಸ್' ಸಾಂಗ್ ಬಳಕೆ ಮಾಡಲಾಗಿದೆ.
-
IRONY OF PAKISTAN:
— Vivek Ranjan Agnihotri (@vivekagnihotri) May 11, 2023 " class="align-text-top noRightClick twitterSection" data="
See the power of Indic cinema. The official account of @ImranKhanPTI is using the official song of #TheKashmirFiles illegally in his official video on Instagram. pic.twitter.com/ZyJPpKTXNa
">IRONY OF PAKISTAN:
— Vivek Ranjan Agnihotri (@vivekagnihotri) May 11, 2023
See the power of Indic cinema. The official account of @ImranKhanPTI is using the official song of #TheKashmirFiles illegally in his official video on Instagram. pic.twitter.com/ZyJPpKTXNaIRONY OF PAKISTAN:
— Vivek Ranjan Agnihotri (@vivekagnihotri) May 11, 2023
See the power of Indic cinema. The official account of @ImranKhanPTI is using the official song of #TheKashmirFiles illegally in his official video on Instagram. pic.twitter.com/ZyJPpKTXNa
ವಿವೇಕ್ ಅಗ್ನಿಹೋತ್ರಿಯವರ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಭಯೋತ್ಪಾದನೆ ಮತ್ತು ಕಣಿವೆ ಪ್ರದೇಶದಿಂದ ಕಾಶ್ಮೀರಿ ಪಂಡಿತರ ನಿರ್ಗಮನದ ಕುರಿತಾಗಿತ್ತು. ಇಂದು ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ಪರೋಕ್ಷವಾಗಿ ತೆಹ್ರೀಕ್-ಇ-ಇನ್ಸಾಫ್ ಅನ್ನು ವ್ಯಂಗ್ಯವಾಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಟ್ವೀಟ್: "ಇಂಡಿಯನ್ ಸಿನಿಮಾದ ಶಕ್ತಿಯನ್ನು ನೋಡಿ. @ImranKhanPTI ಅಧಿಕೃತ ಖಾತೆಯು ದಿ ಕಾಶ್ಮೀರ್ ಫೈಲ್ಸ್ನ ಅಧಿಕೃತ ಹಾಡನ್ನು ಕಾನೂನುಬಾಹಿರವಾಗಿ ಬಳಸಿಕೊಂಡಿದೆ. ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ತನ್ನ ಅಧಿಕೃತ ವಿಡಿಯೋದಲ್ಲಿ ನಮ್ಮ ಹಾಡನ್ನು ಬಳಸಿಕೊಳ್ಳಲಾಗಿದೆ" ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
-
For the ill informed, this is written by Faiz Ahmad Faiz. We bought the rights from Faiz House. There are many versions. This is our legal copyright version. pic.twitter.com/bGOFjNksNb
— Vivek Ranjan Agnihotri (@vivekagnihotri) May 11, 2023 " class="align-text-top noRightClick twitterSection" data="
">For the ill informed, this is written by Faiz Ahmad Faiz. We bought the rights from Faiz House. There are many versions. This is our legal copyright version. pic.twitter.com/bGOFjNksNb
— Vivek Ranjan Agnihotri (@vivekagnihotri) May 11, 2023For the ill informed, this is written by Faiz Ahmad Faiz. We bought the rights from Faiz House. There are many versions. This is our legal copyright version. pic.twitter.com/bGOFjNksNb
— Vivek Ranjan Agnihotri (@vivekagnihotri) May 11, 2023
"ಹಮ್ ದೇಖೆಂಗೆ ಹಾಡನ್ನು ಫೈಜ್ ಅಹ್ಮದ್ ಫೈಜ್ ಬರೆದಿದ್ದಾರೆ. ನಾವು ಫೈಜ್ ಹೌಸ್‌ನಿಂದ ಹಕ್ಕುಗಳನ್ನು ಖರೀದಿಸಿದ್ದೇವೆ. ಅದರಲ್ಲಿ ಹಲವು ಆವೃತ್ತಿಗಳಿವೆ. ಇದು ನಮ್ಮ ಕಾನೂನು ಹಕ್ಕುಸ್ವಾಮ್ಯ ಆವೃತ್ತಿಯಾಗಿದೆ" ಎಂದು ಮತ್ತೊಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಕನ್ನಡತಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್ನಲ್ಲಿ ಆಫರ್ ಮೇಲೆ ಆಫರ್: ಮುಂದಿನ ಹಿಂದಿ ಚಿತ್ರ ಯಾವುದು?
ಮಂಗಳವಾರದಂದು ಭ್ರಷ್ಟಾಚಾರ ಪ್ರಕರಣದಲ್ಲಿ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ. ಈ ಹಿನ್ನೆಲೆ ಆಕ್ರೋಶಗೊಂಡ ಪಿಟಿಐ ಬೆಂಬಲಿಗರು ಸೇನೆಯ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿದರು. ಲಾಹೋರ್ ಕಾರ್ಪ್ಸ್ ಕಮಾಂಡರ್ ಅವರ ನಿವಾಸಕ್ಕೆ ಬೆಂಕಿ ಹಚ್ಚುವ ಸಂದರ್ಭದಲ್ಲಿ ಬೆಂಬಲಿಗರು ಸೇನಾ ವಾಹನಗಳ ಮೇಲೆಯೂ ದಾಳಿ ಮಾಡಿದರು.
ಇದನ್ನೂ ಓದಿ: ಭಾರಿ ಭದ್ರತೆಯೊಂದಿಗೆ ಮುಂಬೈನ ದ್ವೀಪದಲ್ಲಿ ಸಲ್ಮಾನ್ ಶಾರುಖ್ ಸಿನಿಮಾ ಶೂಟಿಂಗ್
'ದಿ ಕಾಶ್ಮೀರ್ ಫೈಲ್ಸ್' 2022ರ ಮಾರ್ಚ್ನಲ್ಲಿ ತೆರೆಕಂಡಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಈ ಸಿನಿಮಾ ಎಲ್ಲೆಡೆ ಸಖತ್ ಸದ್ದು ಮಾಡಿತ್ತು. ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿತ್ತು. ನಟ ಅನುಪಮ್ ಖೇರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಕಾಶ್ಮೀರಿ ಪಂಡಿತರ ವಲಸೆ ಮೇಲೆ ಕಥೆ ಹೆಣೆಯಲಾಗಿದೆ.