ETV Bharat / entertainment

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಓಡಿದ್ದೇನೆ: ಅಮೀರ್ ಖಾನ್ - ಲಾಲ್ ಸಿಂಗ್ ಚಡ್ಡಾ ಅಮೀರ್ ಖಾನ್ ಸಿನೆಮಾ

ಇದು ನನ್ನ 35 ವರ್ಷಗಳ ವೃತ್ತಿ ಜೀವನದಲ್ಲಿ ದೊಡ್ಡ ಸವಾಲಾಗಿತ್ತು. ಈ ಚಿತ್ರಕ್ಕಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಶ್ರಮಿಸಿದ್ದೇನೆ. ಇದರಲ್ಲಿ ಸಾಕಷ್ಟು ಓಡುವ ದೃಶ್ಯಗಳಿವೆ. ನಾನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದಾದ್ಯಂತ ಓಡಿದ್ದೇನೆ ಎಂದು ಲಾಲ್ ಸಿಂಗ್ ಚಡ್ಡಾ ಸಿನೆಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಬಾಲಿವುಡ್ ಅಮೀರ್ ಖಾನ್ ಹೇಳಿದ್ದಾರೆ.

i-ran-across-the-country-aamir-khan
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಓಡಿದ್ದೇನೆ : ಅಮೀರ್ ಖಾನ್
author img

By

Published : Jul 25, 2022, 9:36 PM IST

ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಬಹುನಿರೀಕ್ಷಿತ ಸಿನೆಮಾ ಲಾಲ್ ಸಿಂಗ್ ಚಡ್ಡಾ. ಈ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಅಮೀರ್ ಖಾನ್ ಸಿನೆಮಾಗಾಗಿ ತುಂಬಾ ಕಸರತ್ತು ಮಾಡಿದ್ದಾರೆ. ಈ ಸಿನೆಮಾದಲ್ಲಿ ಕರೀನಾ ಕಪೂರ್ ,ನಾಗಚೈತನ್ಯ ಮುಂತಾದ ಸ್ಟಾರ್ ನಟರು ನಟಿಸಿದ್ದು, ಇದೇ ಬರುವ ಆಗಸ್ಟ್ 11 ರಂದು ತೆರೆಮೇಲೆ ಬರಲು ಸಿದ್ಧವಾಗಿದೆ. ಲಾಲ್ ಸಿಂಗ್ ಚಡ್ಡಾದ ತೆಲುಗು ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇಂದು ಹೈದರಾಬಾದ್ ನಲ್ಲಿ ನಡೆಯಿತು. ಈ ಟ್ರೈಲರ್​ ಅನ್ನು ತೆಲುಗು ನಟ ಚಿರಂಜೀವಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಅಮೀರ್ ಖಾನ್ ನನ್ನ ಹಳೆಯ ಸ್ನೇಹಿತ. ದೇಶವೇ ಹೆಮ್ಮೆ ಪಡುವ ಮಹಾನ್ ನಟ. ಕಳೆದ 2019 ರಿಂದ ಅಮೀರ್ ಈ ಚಿತ್ರದ ಬಗ್ಗೆ ಹೇಳುತ್ತಿದ್ದಾರೆ. ಮೊನ್ನೆ 'ಲಾಲ್​​​ಸಿಂಗ್​ ಚಡ್ಡಾ' ನೋಡಿದ ನಂತರ ನಮಗೆ ಮಾತುಗಳೇ ಹೊರಡಲಿಲ್ಲ. ನಾನು ಅಮೀರ್ ಖಾನ್ ಅವರನ್ನು ಪ್ರೀತಿಸುತ್ತೇನೆ. ಅವರು ಚಿತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯದಲ್ಲೂ ಬಹುವಾಗಿ ತೊಡಗಿಸಿಕೊಳ್ಳುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ. ಯಾವುದೇ ಭಾರತೀಯ ನಟ ಇದನ್ನು ಮಾಡಲು ಸಾಧ್ಯವಿಲ್ಲ. ಈ ಚಿತ್ರವನ್ನು ಪ್ರಸ್ತುತಪಡಿಸಲು ನಾನು ಹೆಮ್ಮೆಪಡುತ್ತೇನೆ ಎಂದು ಹೇಳಿದರು.

ಇದುವರೆಗೂ ದಕ್ಷಿಣದ ಸಿನೆಮಾ ಇಂಡಸ್ಟ್ರಿಗಳಿಗೆ ಅಷ್ಟೊಂದು ಮನ್ನಣೆ ಇರಲಿಲ್ಲ. ಈ ಬಗ್ಗೆ ಅಮೀರ್ ಖಾನ್ ಬಳಿ ಚರ್ಚಿಸಿದ್ದೆ. ಆದರೆ ಕೆಲವೇ ಸಮಯದಲ್ಲಿ ರಾಜಮೌಳಿ ಮತ್ತು ಶಂಕರ್ ಅವರ ಸಿನಿಮಾಗಳು ಭಾಷೆಗಳ ನಡುವಿನ ಗಡಿಯನ್ನು ಅಳಿಸಿ ಹಾಕಿದವು. ಇವೆಲ್ಲವೂ ಈಗ ಭಾಷೆಯ ಅಡೆತಡೆಗಳನ್ನು ಮೀರಿದ ಭಾರತೀಯ ಸಿನಿಮಾಗಳು.ಅದಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಚಿರಂಜೀವಿ ಹೇಳಿದರು.

ಬಳಿಕ ಮಾತನಾಡಿದ ನಟ ನಾಗಚೈತನ್ಯ, ನಾನು ಅಮೀರ್ ಖಾನ್ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಈಗ ಅವರ ಜತೆ ನಟಿಸುತ್ತಿರುವುದು ಇನ್ನೊಂದು ವಿಶೇಷ. ಇದರಲ್ಲಿ ನನ್ನ ಪಾತ್ರದ ಅವಧಿ 20 ರಿಂದ 30 ನಿಮಿಷಗಳು. ಇವರ ಜೊತೆ ನಟಸಿರುವುದು ನನ್ನ ಹೂಡಿಕೆ ಎಂದು ಅಭಿಪ್ರಾಯಪಟ್ಟರು.

ಸಿನೆಮಾದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ: ಅಮೀರ್ ಖಾನ್ : ಈ ಸಿನಿಮಾದ ಸ್ಕ್ರಿಪ್ಟ್ ಬರೆಯಲು 8 ರಿಂದ 10 ವರ್ಷ ತೆಗೆದುಕೊಂಡಿದ್ದೇವೆ. 'ಫಾರೆಸ್ಟ್ ಗಂಪ್'ಗೆ ಹೋಲಿಸಿದರೆ ನಾವು ಅನೇಕ ಬದಲಾವಣೆಗಳನ್ನು ಮಾಡಿದ್ದೇವೆ. ನಾಯಕನ ಪಾತ್ರ ಶುದ್ಧ ಮತ್ತು ಮುಗ್ಧ. ನಾನು ಮತ್ತು ನಾಗ ಚೈತನ್ಯ ಕಾರ್ಗಿಲ್‌ನಲ್ಲಿ ಒಂದು ತಿಂಗಳು ಒಟ್ಟಿಗೆ ಶೂಟ್ ಮಾಡಿದ್ದೇವೆ. ಪ್ರತಿದಿನ ನಾವು ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು ಮತ್ತು ಎರಡು ಗಂಟೆಗಳ ಕಾಲ ಮಾತನಾಡುತ್ತಿದ್ದೆವು. ಅವರು ನನ್ನ ಆತ್ಮೀಯ ಸ್ನೇಹಿತರಾದರು. ಅವರ ಸರಳತೆ ನನಗೆ ತುಂಬಾ ಇಷ್ಟವಾಯಿತು ಎಂದು ನಟ ಅಮೀರ್ ಖಾನ್ ಹೇಳಿದರು.

ಇದು ನನ್ನ 35 ವರ್ಷಗಳ ವೃತ್ತಿ ಜೀವನದಲ್ಲಿ ದೊಡ್ಡ ಸವಾಲಾಗಿತ್ತು. ಈ ಚಿತ್ರಕ್ಕಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಶ್ರಮಿಸಿದ್ದೇನೆ. ಇದರಲ್ಲಿ ಸಾಕಷ್ಟು ಓಡುವ ದೃಶ್ಯಗಳಿವೆ. ನಾನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದಾದ್ಯಂತ ಓಡಿರುವುದಾಗಿ ಅಮೀರ್ ಖಾನ್ ಹೇಳಿದರು. ಇನ್ನು ಈ ಚಿತ್ರವನ್ನು ಅಮೀರ್​ಖಾನ್ ಪ್ರೊಡಕ್ಷನ್ಸ್ ಮತ್ತು ವಯಕಾಂ 18 ಜಂಟಿಯಾಗಿ ನಿರ್ಮಾಣ ಮಾಡಿದ್ದು, ಆಗಸ್ಟ್ 11ರಂದು ತೆರೆಗೆ ಬರಲಿದೆ.

ಓದಿ : IT ಇಲಾಖೆಯಿಂದ ನಟ ರಜಿನಿಕಾಂತ್‌ಗೆ ಸನ್ಮಾನ: ತ್ವರಿತ ತೆರಿಗೆದಾರರ ಮಗಳಾಗಿರುವುದು ಹೆಮ್ಮೆ ಎಂದ ಐಶ್ವರ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.