ETV Bharat / entertainment

'ಖಂಡಿತ ನನಗೂ ಮೀ ಟೂ ಅನುಭವ ಆಗಿದೆ' - ನಟಿ ಆಶಿತಾ

ಕನ್ನಡ ಚಿತ್ರರಂಗದಲ್ಲಿ ಮೀ ಟೂ ಪರಿಸ್ಥಿತಿ ಇದೆ ಎಂದು ನಟಿ ಆಶಿತಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

actress ashitha
ನಟಿ ಆಶಿತಾ ಮೀ ಟೂ ಅನುಭವ
author img

By

Published : Sep 16, 2022, 7:16 PM IST

2018ರಲ್ಲಿ ಕನ್ನಡ ಚಿತ್ರರಂಗ ಅಲ್ಲದೇ ಬಾಲಿವುಡ್, ಕಾಲಿವುಡ್, ಟಾಲಿವುಡ್ ನಟಿಮಣಿಯರು ಚಿತ್ರರಂಗದಲ್ಲಿ ತಮಗಾದ 'ಮೀ ಟೂ' ಅನುಭವದ ಬಗ್ಗೆ ಹಂಚಿಕೊಳ್ಳುವ ಮೂಲಕ ದೇಶಾದ್ಯಂತ ದೊಡ್ಡ ಬಿರುಗಾಳಿ ಎಬ್ಬಿಸಿದ್ದರು. ಇದೀಗ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಟಿ ಆಶಿತಾ ಕೂಡ ಚಿತ್ರರಂಗದ ಕರಾಳ ಮುಖದ ಬಗ್ಗೆ ಮಾತನಾಡಿದ್ದಾರೆ. ಹೌದು ಕನ್ನಡ ಚಿತ್ರರಂಗದಲ್ಲಿ ಮೀ ಟೂ ಪರಿಸ್ಥಿತಿ ಇದೆ ಎಂಬ ಮಾತನ್ನು ಒಪ್ಪಿಕೊಳ್ಳುವ ಮೂಲಕ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

actress ashitha
ನಟಿ ಆಶಿತಾ

ಬಾ ಬಾರೋ ರಸಿಕ, ಗ್ರೀನ್ ಸಿಗ್ನಲ್, ರೋಡ್‌ ರೋಮಿಯೋ, ತವರಿನ ಸಿರಿ, ಆಕಾಶ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಶಿತಾ ನಟಿಸುವ ಮೂಲಕ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದರು. ಅಭಿಮಾನಿಗಳು ಸಾಕಷ್ಟು ಬಾರಿ ನೀವು ಯಾಕೆ ಇತ್ತಿಚೆಗೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ನಿಮ್ಮನ್ನು ಮತ್ತೆ ತೆರೆ ಮೇಲೆ ನೋಡಲು ಇಷ್ಟಪಡುತ್ತೇವೆ ಎಂದು ಹೇಳುತ್ತಿದ್ದರು. ಆದರೆ, ಚಿತ್ರರಂಗದಿಂದ ದೂರ ಆದ ಬಗ್ಗೆ ಇದೀಗ ನಟಿ ಆಶಿತಾ ಬಿಚ್ಚಿಟ್ಟಿದ್ದಾರೆ.

ಸದ್ಯ ಚಿತ್ರರಂಗದಿಂದ ದೂರು ಉಳಿದಿರುವ ಆಶಿತಾ ಯೂ ಟ್ಯೂಬ್​ ಚಾನೆಲ್​ನ ಸಂದರ್ಶನವೊಂದರಲ್ಲಿ ಚಿತ್ರರಂಗದಲ್ಲಿ ಕೆಟ್ಟ ಸಂಸ್ಕೃತಿ ಇದೆ ಅನ್ನೋದನ್ನು ಬಾಯಿ ಬಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರೋ ಆಶಿತಾ, ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲ. ಆದರೆ ನಿಧಾನವಾಗಿ ಕೆಲವರು ಕೆಟ್ಟದಾಗಿ ನಡೆದುಕೊಳ್ಳಲು ಆರಂಭಿಸಿದರು. ಏನೇನೋ ಬೇಡಿಕೆ ಇಟ್ಟರು. ಅದು ಇಷ್ಟವಿಲ್ಲದೇ ನಾನು ಸಿನಿಮಾ ಇಂಡಸ್ಟ್ರಿ ಬಿಟ್ಟೆ ಎಂದು ಆಶಿತಾ ಹೇಳಿಕೊಂಡಿದ್ದಾರೆ.

1998 ರಲ್ಲಿ ಚಿತ್ರರಂಗಕ್ಕೆ ಬಂದಾಗ ಸಮಸ್ಯೆ ಆಗಿರಲಿಲ್ಲ: 1998ರಲ್ಲಿ ಚಿತ್ರರಂಗಕ್ಕೆ ಬಂದಾಗ ಸಮಸ್ಯೆ ಬರಲಿಲ್ಲ. ಆ ನಂತರ ಸಿನಿಮಾ ಸ್ವಲ್ಪ ಕಮರ್ಷಿಯಲ್ ಆಗಲು ಶುರುವಾಯಿತು. 2006-07ರ ಸಮಯದಲ್ಲಿ ಯಾರ್ಯಾರೋ ಚಿತ್ರರಂಗಕ್ಕೆ ಬಂದರು. ಚಿತ್ರರಂಗದವರು ಬಿಟ್ಟು ರಿಯಲ್‌ ಎಸ್ಟೇಟ್‌ನವರೆಲ್ಲಾ ಬರಲು ಶುರು ಮಾಡಿದ್ದರು.

ಆ ಸಮಯದಲ್ಲಿ ಬೇರೆ ತರಹದ ಬೇಡಿಕೆಗಳು ಶುರುವಾಯಿತು. ಈ ಬಗ್ಗೆ ನಾನು ಬಹಿರಂಗವಾಗಿಯೇ ಹೇಳುತ್ತೇನೆ. ಏನೇನೋ ಬೇಡಿಕೆ ಶುರು ಆಯಿತು. ಸಾಮಾನ್ಯವಾಗಿ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಇಂತಹ ಸಮಸ್ಯೆ ಎದುರಾಗುತ್ತದೆ. ಆದರೆ ನನಗೆ ಆರಂಭದಲ್ಲಿ ಸಮಸ್ಯೆ ಎದುರಾಗಿರಲಿಲ್ಲ ಎಂದರು.

ಆ ನಿರ್ದೆಶಕರ ಹೆಸರು ಹೇಳಲ್ಲ: ಇನ್ನು ಇವತ್ತಿಗೂ ಜನ ನನ್ನನ್ನು ಅಶಿತಾ ಎಂದು ಗುರ್ತಿಸುತ್ತಾರೆ. ಅಷ್ಟು ಸಾಧನೆ ಸಾಕು ನನಗೆ. ನಾನು ಸಿನಿಮಾದಿಂದ ದೂರ ಹೋಗಲು ಇದೇ ಕಾರಣ ಅಂತ ಹೇಳಲು ಇಷ್ಪಪಡುತ್ತೇನೆ. ಯಾಕಂದರೆ ದೊಡ್ಡ ದೊಡ್ಡ ಸಿನಿಮಾ ಅವಕಾಶಗಳು ನನಗೆ ಬಂದರೂ ಈ ಕಾರಣಕ್ಕೆ ನಾನು ಸಿನಿಮಾ ಮಾಡಲಿಲ್ಲ. ಖಂಡಿತ ನನಗೂ ಮೀ ಟು ಅನುಭವ ಆಗಿದೆ.

ಆ ನಿರ್ದೇಶಕರ ಹೆಸರು ಹೇಳಲ್ಲ. ಆ ನಿರ್ದೇಶಕ ನನ್ನ ಜೊತೆ ಅದೇ ರೀತಿ ನಡೆದುಕೊಂಡರು. ಅವರು ಬಯಸಿದಷ್ಟು ನಾನು ಸಲುಗೆಯಿಂದ ಅವರ ಜೊತೆ ಇರಲಿಲ್ಲ. ಚಿತ್ರರಂಗದಲ್ಲಿ ನಗು ನಗುತ್ತಾ ಮಾತನಾಡಬೇಕು, ತುಂಬಾ ಸಲುಗೆ ಇಂದ ಇರಬೇಕಿತ್ತು. ಆದರೆ ನಾನು ಆ ರೀತಿ ಇರುತ್ತಿರಲಿಲ್ಲ. ಯಾಕೆಂದರೆ ಅದರ ಅವಶ್ಯಕತೆ ಇರಲಿಲ್ಲ. ಕಾರಣ ನನಗೆ ನಟಿಸುವ ಪ್ರತಿಭೆ ಇತ್ತು. ನಾನು ಆ ರೀತಿ ಇರುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಸೆಟ್‌ನಲ್ಲಿ ಸಾಕಷ್ಟು ಕಷ್ಟ ಕೊಟ್ಟಿದ್ದಾರೆ.

ಇದನ್ನೂ ಓದಿ: 300 ಕೋಟಿ ಗಳಿಸಿದ ಬ್ರಹ್ಮಾಸ್ತ್ರ ಸಿನಿಮಾ.. ಸುಳ್ಳಿನ ಹರಡುವಿಕೆಗೂ ಮಿತಿ ಇದೆ ಎಂದ ನೆಟಿಜನ್​ಗಳು

ಒಳ್ಳೆ ನಟನೆ ಮಾಡಿದ್ದರೂ ಇದು ಸರಿ ಇಲ್ಲ ಎಂದು ಕಟ್ ಮಾಡಿದ್ದಾರೆ. ಸರಿಯಿಲ್ಲ ಎಂದು 10 ಸಲ ಮಾಡಿಸಿದ್ದಾರೆ. ನಾನು ಸಂಪೂರ್ಣವಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡ ಮೇಲೆ ಈ ಅನುಭವ ಆಗಿದೆ. ಹೊಸಬರಿಗೆ ಆರಂಭದಲ್ಲಿ ಕಷ್ಟ ಆಗುತ್ತೆ ಎನ್ನುತ್ತಾರೆ. ಆದರೆ ನನಗೆ ಆ ನಂತರ ಕಷ್ಟ ಆಯ್ತು. ಚಿತ್ರರಂಗದಲ್ಲಿ ಎಲ್ಲರೂ ಹೀಗಲ್ಲ. ಕೆಲವರು ಮಾತ್ರ ಈ ರೀತಿ ಇಂಡಸ್ಟ್ರಿಯಲ್ಲಿ ಇದ್ದಾರೆ.

ಮೀಟೂ ವಿಚಾರದಿಂದಾಗಿ ಸಿನಿಮಾ ಅವಕಾಶಗಳು ಕಡಿಮೆಯಾಯಿತು. ಹೀಗಾಗಿ ನಾನು ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಸರಿದೆ ಅಂತಾ ಆಶಿತಾ ಹೇಳಿಕೊಂಡಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.