ETV Bharat / entertainment

'ಭಯದ ಜೊತೆಗೆ ತುಂಬಾ ನೋವಾಯಿತು': ಫೇಕ್​ ವಿಡಿಯೋ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ - ಈಟಿವಿ ಭಾರತ ಕನ್ನಡ

Rashmika Mandanna reacts to deepfake video: ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ನಕಲಿ ವಿಡಿಯೋ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ.

'I feel really hurt...extremely scary': Rashmika Mandanna reacts to deepfake video
'ಭಯದ ಜೊತೆಗೆ ತುಂಬಾ ನೋವಾಯಿತು': ಫೇಕ್​ ವಿಡಿಯೋ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ
author img

By ETV Bharat Karnataka Team

Published : Nov 6, 2023, 4:57 PM IST

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಆಗ್ರಹಿಸಿದ್ದಾರೆ. ಲಕ್ಷಾಂತರ ವೀಕ್ಷಣೆ ಪಡೆದಿರುವ ಈ ಫೇಕ್​ ವಿಡಿಯೋ ಕುರಿತು ಇದೀಗ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ. 'ನನಗೆ ಈ ವಿಚಾರ ನಿಜಕ್ಕೂ ನೋವುಂಟು ಮಾಡಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • I feel really hurt to share this and have to talk about the deepfake video of me being spread online.

    Something like this is honestly, extremely scary not only for me, but also for each one of us who today is vulnerable to so much harm because of how technology is being misused.…

    — Rashmika Mandanna (@iamRashmika) November 6, 2023 " class="align-text-top noRightClick twitterSection" data=" ">

ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ, "ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ. ಆನ್​ಲೈನ್​ನಲ್ಲಿ ವೈರಲ್​ ಆಗುತ್ತಿರುವ ನನ್ನ ಡೀಪ್​ಫೇಕ್​ ವಿಡಿಯೋ ಬಗ್ಗೆ ಮಾತನಾಡಬೇಕಿದೆ. ನಿಜವಾಗಿಯೂ ಇದನ್ನು ನೋಡಿ ಭಯವಾಯಿತು. ನನಗೊಬ್ಬಳಿಗೆ ಮಾತ್ರವಲ್ಲ, ತಂತ್ರಜ್ಞಾನವನ್ನು ಈ ರೀತಿ ದುರುಪಯೋಗಪಡಿಸಿ ಕೊಳ್ಳುತ್ತಿರುವುದರಿಂದ ನನ್ನಂತೆಯೇ ಅನೇಕ ಜನರಿಗೆ ನೋವಾಗಿರಬಹುದು" ಎಂದಿದ್ದಾರೆ.

" ಇಂದು ನಾನೊಬ್ಬಳು ಮಹಿಳೆಯಾಗಿ ಮತ್ತು ನಟಿಯಾಗಿ, ನನ್ನ ರಕ್ಷಣೆಗೆ ಮತ್ತು ಬೆಂಬಲಕ್ಕೆ ನಿಂತಿರುವ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಆದರೆ, ಒಂದು ವೇಳೆ ನಾನು ಶಾಲೆ ಅಥವಾ ಕಾಲೇಜಿನಲ್ಲಿರುವಾಗ ಈ ರೀತಿ ಸಂಭವಿಸಿದ್ದರೆ, ನಾನು ಹೇಗೆ ನಿಭಾಯಿಸುತ್ತಿದ್ದೆ ಎಂದು ನಿಜವಾಗಿಯೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿ ಹೆಚ್ಚಿನವರು ಇಂತಹ ಸಮಸ್ಯೆಯನ್ನು ಎದುರಿಸುವುಕ್ಕೂ ಮುನ್ನ ಇದಕ್ಕೆ ತುರ್ತು ಪರಿಹಾರ ಕಂಡುಕೊಳ್ಳಬೇಕಿದೆ" ಎಂದು ರಶ್ಮಿಕಾ ಹೇಳಿದ್ದಾರೆ.

ಇದನ್ನೂ ಓದಿ: ಸ್ಟೈಲಿಶ್ ಡ್ರೆಸ್​ನಲ್ಲಿ ರಶ್ಮಿಕಾ ಮಂದಣ್ಣ ಬೊಂಬಾಟ್​ ಲುಕ್.. ಕಿರಿಕ್​ ಬೆಡಗಿಯ​​ ಹೊಸ ಫೋಟೋ

ರಶ್ಮಿಕಾ ಫೇಕ್​ ವಿಡಿಯೋ ವೈರಲ್: ಫಿಟ್ ಡ್ರೆಸ್​ ಹಾಕಿ ಲಿಫ್ಟ್​ ಏರುತ್ತಿರುವ ದೃಶ್ಯವೊಂದರಲ್ಲಿ ರಶ್ಮಿಕಾ ಮಂದಣ್ಣ ಅವರ ಮುಖವಿದೆ. ಆದರೆ ಈ ವಿಡಿಯೋ ಅಸಲಿಗೆ ಇದು ಮತ್ತೊಬ್ಬ ಯುವತಿಯದ್ದು​. ಅಕ್ಟೋಬರ್​ 8ರಂದು ಆ ಯುವತಿ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ವಿಡಿಯೋ ಹಂಚಿಕೊಂಡಿದ್ದರು. ಅದೇ ವಿಡಿಯೋಗೆ ಎಐ ತಂತ್ರಜ್ಞಾನ ಬಳಸಿ ಯಾರೋ ಕಿಡಿಗೇಡಿಗಳು ಆಕೆಯ ಮುಖಕ್ಕೆ ರಶ್ಮಿಕಾ ಮುಖವನ್ನು ಜೋಡಿಸಿ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಆದರೆ, ಭಾರತೀಯ ಪತ್ರಕರ್ತ ಅಭಿಷೇಕ್ ಕುಮಾರ್ ಎಂಬವರು ವಿಡಿಯೋದ ಫ್ಯಾಕ್ಟ್​ ಚೆಕ್​ ಮಾಡಿದ್ದಾರೆ. ಮೂಲ ವಿಡಿಯೋವನ್ನು ಪತ್ತೆ ಹಚ್ಚಿ ಎಡಿಟೆಡ್​ ಹಾಗೂ ಒರಿಜಿನಲ್​ ಎರಡೂ ವಿಡಿಯೋಗಳನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾರದ್ದೇ ಎನ್ನಲಾದ ವೈರಲ್​ ವಿಡಿಯೋ ನಿಜವಾಗಿಯೂ ಅವರದ್ದಲ್ಲ. ಬೇರೊಬ್ಬ​ ಯುವತಿಯ ವಿಡಿಯೋ ಇದು ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಇಂತಹ ವಿಡಿಯೋ ವೈರಲ್​ ಆಗುತ್ತಿರುವ ಹಿಂದಿನ ಜಾಡು ಪತ್ತೆ ಹಚ್ಚಿ, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದೂ ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್​ ಅನ್ನು ಮರು ಹಂಚಿಕೊಂಡಿರುವ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನಟಿ ರಶ್ಮಿಕಾ ಮಂದಣ್ಣ ಫೇಕ್​ ವಿಡಿಯೋ ವೈರಲ್; 'ಕ್ರಮ ಕೈಗೊಳ್ಳಿ' ಎಂದ ಅಮಿತಾಭ್​ ಬಚ್ಚನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.