ETV Bharat / entertainment

ಹೊಸ ಪ್ರತಿಭೆಯ 'ಲಕ್' ಸಿನಿಮಾದಲ್ಲಿ ನಾನು ನಟಿಸುತ್ತಿಲ್ಲ: ಡಾಲಿ ಧನಂಜಯ್ - kannada films

ಕ್ಯಾರಾವ್ಯಾನ್ ಸ್ಟಾರ್ ಮಂಜು ಅಭಿನಯದ 'ಲಕ್' ಚಿತ್ರದಲ್ಲಿ ಡಾಲಿ ಧನಂಜಯ್ ಅವರು ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಿದ್ದಾರೆ.

i-am-not-acting-in-the-movie-luck-dolly-dhananjay
ಹೊಸ ಪ್ರತಿಭೆಯ 'ಲಕ್' ಸಿನಿಮಾದಲ್ಲಿ ನಾನು ನಟಿಸುತ್ತಿಲ್ಲ ಡಾಲಿ ಧನಂಜಯ್
author img

By

Published : May 4, 2023, 10:20 PM IST

ಸ್ಯಾಂಡಲ್​​ವುಡ್​ನಲ್ಲಿ ಕೆಲ ದಿನಗಳ ಹಿಂದೆ ಡಾಲಿ ಧನಂಜಯ್ ಹಾಗು ಗೋಲ್ಡನ್ ಸ್ಟಾರ್ ಗಣೇಶ್ ಅವರ ಕ್ಯಾರಾವ್ಯಾನ್​​ಗೆ ಡ್ರೈವರ್ ಆಗಿರುವ ಮಂಜು, ಲಕ್ ಅಂತಾ ಸಿನಿಮಾ ಮಾಡ್ತಾ ಇದ್ದಾರೆ ಎಂದು ಸುದ್ದಿಯಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಒಂಬತ್ತು ವರ್ಷಗಳಿಂದ ಕ್ಯಾರಾವ್ಯಾನ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಸ್ಮೈಲ್ ಮಂಜು ಅವರು ಲಕ್ ಎಂಬ ಚಿತ್ರದಲ್ಲಿ ಹೀರೋ ಆಗಿ ಅಭಿನಯಿಸುವುದಲ್ಲದೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ.

ಕ್ಯಾರಾವ್ಯಾನ್ ಸ್ಟಾರ್ ಮಂಜು ಅಭಿನಯದ 'ಲಕ್' ಚಿತ್ರದಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಚಿತ್ರದಲ್ಲಿ ಧನಂಜಯ್ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ಸ್ವತಃ ಚಿತ್ರತಂಡದವರು ಘೋಷಿಸಿದ್ದರು. ಆದರೆ, ಆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಧನಂಜಯ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಧನಂಜಯ್ ಲಕ್ ಚಿತ್ರದ ನಾಯಕ ಮತ್ತು ನಿರ್ಮಾಪಕ ಸ್ಮೈಲ್ ಮಂಜು ನನಗೆ ಬಹಳ ಒಳ್ಳೆಯ ಸ್ನೇಹಿತರು. ಅವರ ಪ್ರಯತ್ನಗಳಿಗೆ ನನ್ನ ಬೆಂಬಲ ಇರುತ್ತದೆ. ಅದರಂತೆ, 'ಲಕ್ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡು, ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟದ್ದೇನೆ. ಆದರೆ, ಕಾರಣಾಂತರಗಳಿಂದ ನನಗೆ ಅವರ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಚಿತ್ರತಂಡದವರಿಗೂ ಮನವರಿಕೆ ಮಾಡಿಕೊಟ್ಟಿದ್ದೇನೆ. ಹಾಗಾಗಿ, ಲಕ್ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದು ಈ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ’ ಎನ್ನುತ್ತಾರೆ ಧನಂಜಯ್.

ಈ ಸಿನಿಮಾವನ್ನ ನಿರ್ದೇಶಕ ಹರೀಶ್ ನಿರ್ದೇಶನ ಮಾಡಿದ್ದು, ಸ್ಮೈಲ್ ಮಂಜು ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇನ್ನು ಲಕ್ ಚಿತ್ರದಲ್ಲಿ ಸ್ಮೈಲ್ ಮಂಜು ಅಲ್ಲದೇ ರೇಣು ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಪದ್ಮಜಾರಾವ್, ಕಡ್ಡಿಪುಡಿ ಚಂದ್ರು ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ಈ ಚಿತ್ರದ 90 ಕುಡಿ ಮಗ ಪಲ್ಟಿ ಹೊಡಿ ಎಂಬ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿತ್ತು. ಅಪ್ಪಿ ಹಾಗೂ ಹರೀಶ್ ಬರೆದಿರುವ ಈ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ. ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ಸದ್ಯ ಟೈಟಲ್​​ನೊಂದಿಗೆ ಸದ್ದು ಮಾಡುತ್ತಿರುವ ಲಕ್ ಸಿನಿಮಾ ಸದ್ಯದಲ್ಲೇ ತೆರೆಗೆ ತರುವ ಪ್ಲಾನ್​ನಲ್ಲಿ ಚಿತ್ರತಂಡ ಇದೆ.

ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ.. ರಾಜ್ಯಸಭಾ ಸದಸ್ಯ ಜಗ್ಗೇಶ್ ಸಿನಿಮಾ ಪೋಸ್ಟರ್​ಗೆ ಪೇಪರ್ ಅಂಟಿಸಿದ ಅಧಿಕಾರಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.