ETV Bharat / entertainment

ಸಮಾಜಕ್ಕೆ ಎಂತಹ ಗುಣಗಳಿರುವ ಪುರುಷರು ಬೇಕು? ಪ್ರಿಯಾಂಕಾ ಚೋಪ್ರಾ ಹೇಳಿದ್ದು ಹೀಗೆ..

ಪುರುಷ ಮತ್ತು ಮಹಿಳೆಯರ ನಡುವಿನ ವೇತನ ಸಮಾನತೆಯ ಬಗ್ಗೆ ನಟಿ ಪ್ರಿಯಾಂಕಾ ಚೋಪ್ರಾ ಮಾತನಾಡಿದ್ದಾರೆ.

author img

By

Published : Apr 18, 2023, 4:24 PM IST

Priyanka Chopra
ಪ್ರಿಯಾಂಕಾ ಚೋಪ್ರಾ

ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಅವರ ಜೀವನ ಪ್ರಯಾಣವು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ. 2000ನೇ ಇಸವಿಯಲ್ಲಿ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡು ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಾಧಿಸಿದ ಇವರ ಬಗ್ಗೆ ಭಾರತೀಯರಿಗೆ ವಿಶೇಷ ಅಭಿಮಾನವಿದೆ. ನಿಸ್ಸಂದೇಹವಾಗಿ ಯಶಸ್ಸಿಗೆ ಸಮನಾರ್ಥವಾಗಿ ಪ್ರಿಯಾಂಕಾ ಹೆಸರನ್ನು ಹೇಳುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಹಾಗಂತ ಇವರ ಯಶಸ್ಸಿನ ಪಯಣ ಗುಲಾಬಿಯ ಹಾಸಿಗೆ ಆಗಿರಲಿಲ್ಲ. ಇತರರಂತೆ ಹಲವಾರು ಅಡೆತಡೆಗಳನ್ನು ಜೀವನದಲ್ಲಿ ಎದುರಿಸಿದ್ದಾರೆ.

ಬಾಲಿವುಡ್​ ಲೋಕದಿಂದ ಇವರನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿತ್ತು. ಆದರೂ ಎಲ್ಲವನ್ನೂ ಮೆಟ್ಟಿ ನಿಂತು ಒಂದು ಹೆಜ್ಜೆ ಮುಂದಿರಿಸಿ ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಿದ್ದಾರೆ. ಸದ್ಯ ತಮ್ಮ ನಟನೆಯ ಸಿಟಾಡೆಲ್​ ವೆಬ್​ ಸಿರೀಸ್​ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ಪುರುಷ ಮತ್ತು ಮಹಿಳೆಯರ ನಡುವಿನ ವೇತನ ಸಮಾನತೆಯ ಬಗ್ಗೆ ಮಾತನಾಡಿದ್ದಾರೆ. ವೇತನ ಅಸಮಾನತೆಯಲ್ಲಿ ಪುರುಷರ ಅಭದ್ರತೆ ಹೇಗೆ ಪಾತ್ರ ವಹಿಸುತ್ತದೆ ಎಂಬುದನ್ನೂ ಚರ್ಚಿಸಿದ್ದಾರೆ.

"ನನ್ನ ಜೀವನದಲ್ಲಿ ಕೆಲವು ಪುರುಷರಿದ್ದಾರೆ. ಅವರಿಗೆ ನನ್ನ ಯಶಸ್ಸಿನಿಂದ ಅಭದ್ರತೆ ಕಾಡುತ್ತಿದೆ. ಪುರುಷರು ತಮಗಿರುವ ಸ್ವಾತಂತ್ರ್ಯವನ್ನು ಆನಂದಿಸುತ್ತಾರೆ. ಅವರಿಗೆ ನಾವೇ ಕುಟುಂಬದ ನಾಯಕರು ಎಂಬ ಹೆಮ್ಮೆ ಇರುತ್ತದೆ. ಒಂದು ವೇಳೆ ಮಹಿಳೆಯೂ ಹಾಗೆ ಮಾಡಿದ್ದಲ್ಲಿ ಅಥವಾ ಆಕೆ ಪುರುಷನಿಗಿಂತ ಹೆಚ್ಚು ಯಶಸ್ವಿಯಾದಲ್ಲಿ ಅಥವಾ ಪುರುಷರು ಮನೆಯಲ್ಲಿಯೇ ಇದ್ದು, ಮಹಿಳೆಯರು ಕೆಲಸಕ್ಕೆ ಹೋಗುತ್ತಿದ್ದಲ್ಲಿ ಖಂಡಿತ ಅವರಿಗದು ಸಹಿಸಲು ಸಾಧ್ಯವಾಗದು" ಎಂದು ಪ್ರಿಯಾಂಕಾ ಚೋಪ್ರಾ ಹೇಳುತ್ತಾರೆ.

"ಪುರುಷರು ಅಳುವುದಿಲ್ಲ. ಆದರೆ ಅಳುವುದರಲ್ಲಿ ನಾಚಿಕೆಯಿಲ್ಲ ಎಂಬುದನ್ನು ನಮ್ಮ ಮಕ್ಕಳಿಗೆ ಕಲಿಸಬೇಕು. ನಿಮ್ಮ ತಾಯಂದಿರು, ಸಹೋದರಿಯರು, ಗೆಳತಿಯರ ಮುಂದೆ ಅಳುವುದರಲ್ಲಿ ಯಾವುದೇ ಅವಮಾನವಿಲ್ಲ" ಎಂದು ಅವರು ಹೇಳಿದರು. ಬಳಿಕ ತನ್ನ ತಂದೆ ಯಾವಾಗಲೂ ತಾಯಿಯನ್ನು ಯಾವ ರೀತಿ ಬೆಂಬಲಿಸುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರು. ತಾಯಿಯ ಯಶಸ್ಸಿನ ಬಗ್ಗೆ ತಂದೆಗೆ ಎಂದಿಗೂ ಅಭದ್ರತೆ ಭಾವನೆ ಇರಲಿಲ್ಲ ಎಂದು ಅವರು ಹೇಳಿದರು.

"ನನ್ನ ತಾಯಿ ಕೆಲಸಕ್ಕೆ ಹೋಗುತ್ತಿದ್ದಳು. ತಂದೆ ಇನ್ನೂ ಮಿಲಿಟರಿಯಲ್ಲಿದ್ದರು. ನನ್ನ ತಾಯಿ ತಂದೆಗಿಂತಲೂ ಹೆಚ್ಚು ಸಂಪಾದಿಸಲು ಪ್ರಾರಂಭಿಸಿದರು. ಆದರೆ ಇದನ್ನು ನಮ್ಮ ತಂದೆ ಸಮಾನತೆಯಾಗಿ ಸ್ವೀಕರಿಸಿದರು. ಅಮ್ಮನಿಗೂ ಈ ಬಗ್ಗೆ ಯಾವುದೇ ಅಹಂ ಇರಲಿಲ್ಲ" ಎಂದು ಹೆಮ್ಮೆಯಿಂದ ನುಡಿದರು.

"ಇಂದು ನಾನು ನನ್ನ ಪತಿಯೊಂದಿಗೆ ರೆಡ್​ ಕಾರ್ಪೆಟ್​ ಮೇಲೆ ನಡೆಯುತ್ತಿದ್ದೇನೆ. ಅವನು ಪಕ್ಕಕ್ಕೆ ಸರಿದು ನನಗೆ ಸೆಂಟರ್​ ಸ್ಟೇಜ್​ ನೀಡಿದಾಗ ನಾನು ಹೆಮ್ಮೆ ಪಡುತ್ತೇನೆ. ಅಭದ್ರತೆಯನ್ನು ಹೊಂದಿರದ ನನ್ನ ತಂದೆ, ಪತಿ, ಸ್ನೇಹಿತರು, ಕಸಿನ್ಸ್​ ಇವರೊಂದಿಗಿರಲು ನಾನು ಖುಷಿ ಪಡುತ್ತೇನೆ. ಸಮಾಜದಲ್ಲಿ ನಾವು ಇಂತಹ ಪುರುಷರನ್ನು ಬೆಳೆಸಬೇಕಾಗಿದೆ" ಎಂದು ಪ್ರಿಯಾಂಕಾ ಹೇಳಿದರು.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ನಡು ಬಳುಕಿಸಿದ ಊರ್ವಶಿ ರೌಟೇಲಾ: ಪಾಕ್​ ಕ್ರಿಕೆಟಿಗನ ಜತೆ ಡೇಟಿಂಗ್​ ವದಂತಿ..​ ಅಭಿಮಾನಿಗಳಿಂದ ಕಮೆಂಟ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.