ETV Bharat / entertainment

'ಫೈಟರ್' ಟೀಸರ್​: ಮೈನವಿರೇಳಿಸುವ ವೈಮಾನಿಕ ದೃಶ್ಯಗಳೊಂದಿಗೆ ಬಂದ ಹೃತಿಕ್, ದೀಪಿಕಾ - ದೀಪಿಕಾ ಪಡುಕೋಣೆ

Fighter Teaser: ಹೃತಿಕ್​ ರೋಷನ್​ ಮತ್ತು ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ 'ಫೈಟರ್' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

Fighter Teaser
ಫೈಟರ್ ಟೀಸರ್
author img

By ETV Bharat Karnataka Team

Published : Dec 8, 2023, 2:03 PM IST

ಬಾಲಿವುಡ್​​ ಸಿನಿವಲಯದ ಬಹುಬೇಡಿಕೆ ತಾರೆಯರಾದ ಹೃತಿಕ್​ ರೋಷನ್​ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಫೈಟರ್'. ಸಿದ್ಧಾರ್ಥ್ ಆನಂದ್​ ನಿರ್ದೇಶನದ ಬಿಗ್​ ಪ್ರಾಜೆಕ್ಟ್​​ನಲ್ಲಿ ಅನಿಲ್​ ಕಪೂರ್​ ಸಹ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬಹುನಿರೀಕ್ಷಿತ ಚಿತ್ರದ ಹಿಂದಿರುವ ಬ್ಯಾನರ್ 'ಮಾರ್ಫ್ಲಿಕ್ಸ್' ಇಂದು ಟೀಸರ್ ಅನಾವರಣಗೊಳಿಸಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಪಠಾಣ್​ ಖ್ಯಾತಿಯ ಸಿದ್ಧಾರ್ಥ್ ಆನಂದ್ ಆ್ಯಕ್ಷನ್​ ಕಟ್​​ ಹೇಳಿರುವ ಮುಂದಿನ ಬಹುನಿರೀಕ್ಷಿತ ಚಿತ್ರದ ಮೇಲೆ ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅನಾವರಣಗೊಂಡಿರುವ ಪೋಸ್ಟರ್‌ಗಳು ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಪ್ರೇಕ್ಷಕರ ಕುತೂಹಲ, ಉತ್ಸಾಹ, ನಿರೀಕ್ಷೆಗಳನ್ನು ಹೆಚ್ಚಿಸಲು ನಿರ್ಮಾಪಕರಿಂದ ಟೀಸರ್ ಬಿಡುಗಡೆ ಮಾಡಿದ್ದಾರೆ. ಚಿತ್ರಕಥೆಯ ಸಣ್ಣ ಸುಳಿವಿನೊಂದಿಗೆ ಪ್ರಮುಖ ನಟರ ಪರಿಚಯ ಮಾಡಿಕೊಟ್ಟಿದೆ ಟೀಸರ್​. ಮೈನವಿರೇಳಿಸುವ ವೈಮಾನಿಕ ಆ್ಯಕ್ಷನ್​​ ದೃಶ್ಯಗಳು ಫಿಲ್ಮ್ ಪ್ರೊಡಕ್ಷನ್​ ಕಂಪನಿಯಾದ 'ಮಾರ್ಫ್ಲಿಕ್ಸ್' ಅನಾವರಣಗೊಳಿಸಿರುವ ಈ ಟೀಸರ್​​ನಲ್ಲಿದೆ.

ಫೈಟರ್ ಟೀಸರ್ ಬಿಡುಗಡೆಗೂ ಮುನ್ನ ಮಾರ್ಫ್ಲಿಕ್ಸ್ ಇಂಟ್ರೆಸ್ಟಿಂಗ್​​ ಪೋಸ್ಟ್ ಶೇರ್ ಮಾಡಿತ್ತು. ನಿಗೂಢ ರೇಡಿಯೋಗ್ರಾಮ್ ಸಂದೇಶದೊಂದಿಗೆ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು. ಟೀಸರ್‌ ಬಿಡುಗಡೆಯ ಸುಳಿವು ನೀಡಿತ್ತು. ಫೈನಲಿ, ಇಂದು ಟೀಸರ್​ ಅನಾವರಣಗೊಂಡಿದ್ದು, ಸಖತ್​ ಸದ್ದು ಮಾಡುತ್ತಿದೆ. ಸ್ಕ್ವಾಡ್ರನ್ ಲೀಡರ್ ಶಂಶೇರ್ ಪಠಾನಿಯಾ (ಪ್ಯಾಟಿ) ಆಗಿ ಹೃತಿಕ್ ರೋಷನ್, ಸ್ಕ್ವಾಡ್ರನ್ ಲೀಡರ್ ಮಿನಲ್ ರಾಥೋರ್ (ಮಿನ್ನಿ) ಆಗಿ ದೀಪಿಕಾ ಪಡುಕೋಣೆ ಮತ್ತು ಕಮಾಂಡಿಂಗ್ ಆಫೀಸರ್ ಆಗಿ ಅನಿಲ್​ ಕಪೂರ್​​, ಗ್ರೂಪ್ ಕ್ಯಾಪ್ಟನ್ ಆಗಿ ರಾಕೇಶ್ ಜೈ ಸಿಂಗ್​​ ನಟಿಸಿದ್ದಾರೆ.

ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ ರಕ್ಷಾ ರಾಮಯ್ಯ

ಬ್ಯಾಂಗ್ ಬ್ಯಾಂಗ್ ಮತ್ತು ವಾರ್ ನಂತಹ ಯಶಸ್ವಿ ಸಿನಿಮಾಗಳ ಬಳಿಕ ಸಿದ್ಧಾರ್ಥ್ ಆನಂದ್​ ಹಾಗೂ ಹೃತಿಕ್ ರೋಷನ್​​ ಮತ್ತೊಮ್ಮೆ ಸಿನಿಮಾವೊಂದರಲ್ಲಿ ಕೆಲಸ ಮಾಡಿದ್ದಾರೆ. ಸ್ಟಾರ್ ನಿರ್ದೇಶಕ ನಟ ಕಾಂಬೋದ ಮೂರನೇ ಸಿನಿಮಾವಿದು. ಇದೇ ಮೊದಲ ಬಾರಿಗೆ ಬಾಲಿವುಡ್​ ಸೂಪರ್ ಸ್ಟಾರ್ಸ್ ಹೃತಿಕ್ ರೋಷನ್​​, ದೀಪಿಕಾ ಪಡುಕೋಣೆ ತೆರೆ ಹಂಚಿಕೊಂಡಿದ್ದಾರೆ. ಫೈಟರ್ ಸಿನಿಮಾವನ್ನು 2021 ರಲ್ಲಿ ಘೋಷಿಸಲಾಗಿತ್ತು. ಈ ವರ್ಷದ ನವೆಂಬರ್‌ನಲ್ಲಿ ಶೂಟಿಂಗ್​ ಪೂರ್ಣಗೊಂಡಿತು.

ಇದನ್ನೂ ಓದಿ: ಮೋಹನ್‌ಲಾಲ್ ಮಖ್ಯಭೂಮಿಕೆಯ 'ಮಲೈಕೋಟೈ ವಾಲಿಬನ್‌' ಟೀಸರ್ ನೋಡಿ

2024ರ ಜನವರಿ 25 ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಫೈಟರ್ ಜೊತೆ ದಕ್ಷಿಣದ ಸೂಪರ್​ಸ್ಟಾರ್ ಮೋಹನ್‌ಲಾಲ್‌ ಅವರ ಮುಂಬರುವ ಪ್ಯಾನ್ ಇಂಡಿಯಾ ಚಿತ್ರ ಮಲೈಕೋಟ್ಟೈ ವಾಲಿಬನ್‌ ಪೈಪೋಟಿ ನಡೆಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.