ETV Bharat / entertainment

ಡಾಲಿ ಅಭಿನಯನದ 'ಹೊಯ್ಸಳ' ಚಿತ್ರದ ಟೀಸರ್ ಅನಾವರಣಕ್ಕೆ ಡೇಟ್ ಫಿಕ್ಸ್ - ETV Bharath Kannada news

ಸಲಗ ಚಿತ್ರದ ನಂತರ ಪೊಲೀಸ್​ ಪಾತ್ರದಲ್ಲಿ ಮತ್ತೆ ಬಣ್ಣ ಹಚ್ಚಿರುವ ಡಾಲಿ ಧನಂಜಯ್​ ಅವರ 25ನೇ ಚಿತ್ರವೇ ಹೊಯ್ಸಳ.

Etv BharatHoysala Movie Teaser Release Date announce
ಡಾಲಿ ಅಭಿನಯಿಸಿರೋ ಹೊಯ್ಸಳ ಚಿತ್ರದ ಟೀಸರ್ ಅನಾವರಣಕ್ಕೆ ಡೇಟ್ ಫಿಕ್ಸ್
author img

By

Published : Feb 3, 2023, 8:10 PM IST

ಹೊಯ್ಸಳ ಕನ್ನಡ ಚಿತ್ರರಂಗದಲ್ಲಿ ಟೈಟಲ್‌ನಿಂದಲೇ ಟಾಕ್ ಆಗುತ್ತಿರುವ ಸಿನಿಮಾ. ಡಾಲಿ ಧನಂಜಯ್ ಸಿನಿಮಾ ಕೆರಿಯರ್‌ನ 25ನೇ ಸಿನಿಮಾ ಇದಾಗಿದೆ. ಚಿತ್ರತಂಡ ಆಗಾಗ ಚಿತ್ರದ ಬಗ್ಗೆ ಅಪ್ಡೇಟ್ಸ್ ಕೊಡುತ್ತಿರುತ್ತದೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಮಾರ್ಚ್ 30ಕ್ಕೆ ಹೊಯ್ಸಳ ಬಿಡುಗಡೆ ಮಾಡುತ್ತಿದ್ದೇವೆ ಅಂತಾ ಕೆ.ಆರ್.ಜಿ ಸ್ಟುಡಿಯೋಸ್ ಈಗಾಗಲೇ ಅನೌಸ್ ಮಾಡಿದೆ. ಇದೀಗ ಟೀಸರ್ ಬಿಡುಗಡೆ ಮಾಡಲು ನಿರ್ಮಾಪಕರಾದ ಕಾರ್ತಿಕ್ ಹಾಗು ಯೋಗಿ ಜಿ.ರಾಜ್ ಪ್ಲಾನ್ ಮಾಡಿದ್ದಾರೆ.

ನಟನೆಯ ಜೊತೆಗೆ ಹೊಸ ಪ್ರತಿಭೆಗಳ ಚಿತ್ರಗಳ ನಿರ್ಮಾಣ ಮಾಡುತ್ತಿರುವ ಧನಂಜಯ್ ಅವರೀಗ ಹೊಯ್ಸಳನಾಗಿ ಬೆಳ್ಳಿ ತೆರೆ ಮೇಲೆ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಫೆಬ್ರವರಿ 5ಕ್ಕೆ ಟೀಸರ್​ ಅನಾವರಣ ಆಗಲಿದೆ. ಧನಂಜಯ್ ಸಲಗ ಚಿತ್ರದ ನಂತರ ಇದೀಗ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದಾರೆ. ಗುರುದೇವ ಹೊಯ್ಸಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ನಡೆದಿರುವ ಘಟನೆ ಆಧರಿಸಿದೆ.

ಈ ಹಿಂದೆ ಗಣೇಶ್ ನಟನೆಯ ಗೋಕಾಕ್​ ಚಳವಳಿಯ ಹಿನ್ನೆಲೆಯ ಗೀತಾ ಸಿನಿಮಾವನ್ನು ನಿರ್ದೇಶನ ಮಾಡಿದ್ದ ವಿಜಯ್ ನಾಗೇಂದ್ರ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಬಡವ ರಾಸ್ಕಲ್ ಸಿನಿಮಾದ ಬಳಿಕ‌ ಧನಂಜಯ್‌ಗೆ ಅಮೃತ ಅಯ್ಯಂಗಾರ್ ಜೋಡಿಯಾಗಿದ್ದಾರೆ.‌ ಪ್ರಮುಖ ಪಾತ್ರದಲ್ಲಿ ಅಚ್ಯುತ್ ಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ.

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಿನಿಮಾ ಬ್ಯಾಕಪ್‌ ಹೊಂದಿರುವ ನಟರಲ್ಲಿ ಧನಂಜಯ್ ಮುಂಚೂಣಿಯಲ್ಲಿದ್ದಾರೆ. ಕೆಆರ್​​ಜಿ ಸ್ಟುಡಿಯೋಸ್‌ ಮೂಲಕ ಕಾರ್ತಿಕ್‌ ಹಾಗೂ ಯೋಗಿ ಜಿ.ರಾಜ್‌ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಹೊಂಬಾಳೆ ಫಿಲ್ಮ್ಸ್​ನ ವಿಜಯ್‌ ಕಿರಗಂದೂರು ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತವಿದೆ. ವಿಶ್ವಾಸ್ ಕಶ್ಯಪ್ ಅವರು ಕಲಾ ನಿರ್ದೇಶಕರಾಗಿದ್ದು ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಕೂಡ ಕುತೂಹಲ ಮೂಡಿಸಿತ್ತು. ಹಾಗಾಗಿ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ನಿರೀಕ್ಷೆ ಕೂಡ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಆ‌ ನಿರೀಕ್ಷೆಯಂತೆ ಮಾರ್ಚ್ 30ರಂದು ರಾಜ್ಯವಲ್ಲದೇ, ವಿಶ್ವಾದ್ಯಂತ ಹೊಯ್ಸಳ ಬಿಡುಗಡೆ ಆಗೋದು ಪಕ್ಕಾ ಎಂದು ‌ಚಿತ್ರತಂಡ ತಿಳಿಸಿದೆ.

2023ರಲ್ಲಿ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಧನಂಜಯ್​ಗೆ ಈ ವರ್ಷದ ಮೊದಲ ಚಿತ್ರ ಇದಾಗಿದೆ. ನಿರ್ಮಾಪಕರಾಗಿ ಕಳೆದ ವರ್ಷ ತಾವೇ ನಟಿಸಿದ್ದ ಹೆಡ್​ ಬುಷ್​ನಲ್ಲಿ ಯಶಸ್ವಿಯಾಗಿದ್ದರು. ಮುಂದೆ ತಮಿಳಿನಲ್ಲಿ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ಪುಷ್ಪ 2 ದಿ ರೂಲರ್​ನಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ರಮ್ಯಾ ಅವರ ಚಿತ್ರರಂಗದ ರೀ ಎಂಟ್ರಿ ಚಿತ್ರ ಎಂದೇ ಕರೆಸಿಕೊಳ್ಳುತ್ತಿರುವ ಉತ್ತರಕಾಂಡದಲ್ಲಿ ಮಾಸ್​ ಹೀರೋ ಆಗಿ ಧನಂಜಯ್​ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ವರನಟ ರಾಜ್ ಕುಮಾರ್ ಆದರ್ಶದ‌ ಹಾದಿಯಲ್ಲಿ ಕಬ್ಜ ನಿರ್ದೇಶಕ ಆರ್ ಚಂದ್ರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.