ಬಡವ ರಾಸ್ಕಲ್ ಹಾಗೂ ತೆಲುಗಿನ ಪುಷ್ಪ ಸಿನಿಮಾ ಸಕ್ಸಸ್ ಬಳಿಕ ಡಾಲಿ ಧನಂಜಯ್ ಈಗ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳು ಕೈಯಲ್ಲಿವೆ. ಇದೀಗ ತೋತಾಪುರಿ ಹಾಗೂ ಮಾನ್ಸೂನ್ ರಾಗ ಸಿನಿಮಾಗಳು ಈ ಇದೇ ತಿಂಗಳು ಬಿಡುಗಡೆ ಆಗುತ್ತಿದೆ. ಈ ಮಧ್ಯೆ ಡಾಲಿ ಧನಂಜಯ್ ಸಲಗ ಸಿನಿಮಾ ಬಳಿಕ ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿರುವ ಹೊಯ್ಸಳ ಸಿನಿಮಾದ ಬಿಡುಗಡೆ ದಿನಾಂಕವನ್ನ ಚಿತ್ರತಂಡ ಅನೌನ್ಸ್ ಮಾಡಿದೆ.
ಕಂಠೀರವ ಸ್ಟುಡಿಯೋದಲ್ಲಿ ಸೈಲೆಂಟ್ ಆಗಿ ಸೆಟ್ಟೇರಿದ ಹೊಯ್ಸಳ ಸಿನಿಮಾ ಭರದಿಂದ ಚಿತ್ರೀಕರಣ ಮಾಡಲಾಗುತ್ತಿದೆ. ಧನಂಜಯ್ ಅಭಿನಯದ 25ನೇ ಸಿನಿಮಾವಾಗಿರೋ ಹೊಯ್ಸಳ ಸಿನಿಮಾ, ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ಹೆಣೆದಿರುವ ಕಥೆ ಎನ್ನಲಾಗಿದೆ.
ಈಗಾಗ್ಲೇ ಬೆಳಗಾವಿ, ಬೆಂಗಳೂರು, ಮೈಸೂರಿನಲ್ಲಿ ಬಹುತೇಕ ಚಿತ್ರೀಕರಣ ಮಾಡಿರುವ ಹೊಯ್ಸಳ ಸಿನಿಮಾ 30.03.2023ಕ್ಕೆ ಬಿಡುಗಡೆ ದಿನಾಂಕವನ್ನ ಚಿತ್ರತಂಡ ಅನೌನ್ಸ್ ಮಾಡಿದೆ. ಖಾಕಿ ಗೆಟಪ್ನಲ್ಲಿ ಧನಂಜಯ್ ಮುಖಕ್ಕೆ ಗ್ಯಾಸ್ ಮಾಸ್ಕ್ ಹಾಕಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆರಕ್ಷಕ ರಾಕ್ಷಸನಾದಾಗ ಎಂಬ ಟ್ಯಾಗ್ ಲೈನ್ ಹೊಂದಿರುವ ಪೋಸ್ಟರ್ ಇದಾಗಿದೆ.
ಬಡವ ರಾಸ್ಕಲ್ ಬಳಿಕ ಧನಂಜಯ ಜೊತೆ ಮತ್ತೆ ಅಮೃತ ಅಯ್ಯಂಗಾರ್ ಜೋಡಿಯಾಗಿದ್ದಾರೆ. ಇದರ ಜೊತೆಗೆ ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಈ ಹಿಂದೆ ಗಣೇಶ್ ಗೀತಾ ಚಿತ್ರವನ್ನ ನಿರ್ದೇಶನ ಮಾಡಿದ್ದ ನಿರ್ದೇಶಕ ವಿಜಯ್ ಎನ್ ಹೊಯ್ಸಳ ಚಿತ್ರಕ್ಕೆ, ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕಾರ್ತಿಕ್ ಎಸ್ ಛಾಯಾಗ್ರಹಣವಿದೆ. ಸಂಕಲನ ದೀಪು ಎಸ್ ಕುಮಾರ್. ವಿಶ್ವಾಸ್ ಕಶ್ಯಪ್ ಅವರು ಕಲಾ ನಿರ್ದೇಶಕರಾಗಿದ್ದು, ಮಾಸ್ತಿ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ.
ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಬ್ಯಾನರ್‌ನಲ್ಲಿ ಈ ಸಿನಿಮಾ ಮೂಡಿ ಬರಲಿದೆ. ರತ್ನನ್ ಪ್ರಪಂಚ ಚಿತ್ರದ ನಿರ್ಮಾಪಕರಾದ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಓದಿ: RRR, ಭೂಲ್ ಭುಲೈಯಾ 2 ಮೀರಿಸಿದ 'ಬ್ರಹ್ಮಾಸ್ತ್ರ': ಬಾಲಿವುಡ್ಗೆ ಸಿಗುವುದೇ ಬೂಸ್ಟರ್ ಡೋಸ್?