ETV Bharat / entertainment

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ವೀಕ್ಷಿಸಿಲ್ವಾ.. ನೋಡಿಲ್ಲವಾದ್ರೆ ಒಟಿಟಿಯಲ್ಲಿ ಲಭ್ಯ - ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

Hostel Hudugaru Bekagiddare: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಒಟಿಟಿಯಲ್ಲಿ ಸದ್ದು ಮಾಡುತ್ತಿದೆ.

Hostel Hudugaru Bekagiddare
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'
author img

By ETV Bharat Karnataka Team

Published : Sep 16, 2023, 4:02 PM IST

ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಕಂಟೆಂಟ್​​ಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಹೊಸ ಬಗೆಯ ಸಿನಿಮಾಗಳ ಜೊತೆ ಜೊತೆಗೆ ಹೊಸಬರ ಎಂಟ್ರಿಯೂ ಆಗುತ್ತಿದೆ. ಅದರಂತೆ, ಹೊಸ ಪ್ರತಿಭೆಗಳ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಥಿಯೇಟರ್​ನಲ್ಲಿ ಕಮಾಲ್ ಮಾಡಿತ್ತು. ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶ ಕಂಡಿತ್ತು. ಜುಲೈ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಚಿತ್ರಕ್ಕೆ ಭರಪೂರ ಮೆಚ್ಚುಗೆ ಸಿಕ್ಕಿತ್ತು. ಹೊಟ್ಟೆ ಹುಣ್ಣಾಗಿಸುವಂತೆ ನಕ್ಕು ನಲಿಸಿದ್ದ ತುಂಗಾ ಹಾಸ್ಟೆಲ್ ಬಾಯ್ಸ್ ಇದೀಗ ಒಟಿಟಿಯಲ್ಲಿ ಸದ್ದು ಮಾಡುತ್ತಿದ್ದಾರೆ. ಈಗಾಗಲೇ ಒಟಿಟಿಗೆ ಎಂಟ್ರಿ ಕೊಟ್ಟು, ಮತ್ತಷ್ಟು ಸಿನಿಪ್ರಿಯರನ್ನು ರಂಜಿಸುವ ಕೆಲಸ ಮಾಡುತ್ತಿದೆ.

Hostel Hudugaru Bekagiddare
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತಂಡ

ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಇಡೀ ಸ್ಯಾಂಡಲ್​​ವುಡ್ ಸಪೋರ್ಟ್ ಕೊಟ್ಟಿತ್ತು. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಫಸ್ಟ್ ಲುಕ್ ಪೋಸ್ಟರ್​ಗೆ ಚಾಲನೆ ನೀಡಿದ್ದರು. ಚಿತ್ರದಲ್ಲಿ ರಿಷಬ್ ಶೆಟ್ಟಿ, ಶೈನ್ ಶೆಟ್ಟಿ, ಪವನ್ ಕುಮಾರ್ ಹಾಗೂ ರಮ್ಯಾ ಗೆಸ್ಟ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರರಂಗ ಬೆಂಬಲ ಕೊಟ್ಟಿದ್ದ ತುಂಗಾ ಹಾಸ್ಟೆಲ್ ಬಾಯ್ಸ್ ಬೆಳ್ಳಿತೆರೆಯಲ್ಲಿ ಮಿಂಚು ಹರಿಸಿದ್ದರು. ಸಿನಿರಸಿಕರನ್ನು ಚಿತ್ರಮಂದಿರಗಳಿಗೆ ಸೆಳೆದು ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಈ ಸಿನಿಮಾ ತೆಲುಗಿಗೂ ಡಬ್​ ಆಗಿದೆ. ಹೊರ ದೇಶದಲ್ಲಿಯೂ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.

Hostel Hudugaru Bekagiddare
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತಂಡ

ಇದನ್ನೂ ಓದಿ: ಭಾರತದಲ್ಲಿ 400, ವಿಶ್ವದಲ್ಲಿ 700: ಸಾವಿರ ಕೋಟಿ ರೂ. ಕಲೆಕ್ಷನ್​ ಮಾಡುತ್ತಾ 'ಜವಾನ್'​​?!

ವರುಣ್ ಗೌಡ, ನಿತಿನ್ ಕೃಷ್ಣಮೂರ್ತಿ, ಪ್ರಜ್ವಲ್ ಬಿ.ಪಿ, ಅರವಿಂದ್ ಎಸ್ ಕಶ್ಯಪ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮದೇ ಪರಂವಃ ಪಿಕ್ಚರ್ಸ್ ಅಡಿ ಸಿನಿಮಾ ಪ್ರೆಸೆಂಟ್ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಥಿಯೇಟರ್ ಅಂಗಳದಲ್ಲಿ ಮನರಂಜನೆ ರಸದೌತಣ ನೀಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಸಿನಿಮಾ ನೋಡಿಲ್ಲ ಅಂದ್ರೆ ನೀವು ಇದ್ದಲ್ಲಿಯೇ ಜೀ5 ನಲ್ಲಿ ವೀಕ್ಷಿಸಬಹುದಾಗಿದೆ.

Hostel Hudugaru Bekagiddare
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತಂಡ

ಇದನ್ನೂ ಓದಿ: ದುಬೈನಲ್ಲಿ ಸೌತ್​ ಸಿನಿ ಕಲರವ: ಇಂತಿದೆ ಸೈಮಾ ವಿಜೇತರ ಪಟ್ಟಿ.. ಕನ್ನಡ, ತೆಲುಗು ಸಾಧಕರಿವರು!

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಕಿರುಚಿತ್ರ ನಿರ್ದೇಶಿಸಲು ವಾರ್ಡನ್ ಸಪೋರ್ಟ್ ಕೊಟ್ಟಿದ್ದರು. ಸಿನಿಮಾ ಒಳಗೊಂದು ಕಿರುಚಿತ್ರ ಕಥೆ ಎಣೆಯಲಾಗಿತ್ತು. ಇದೀಗ ಜೀ5 ಅತ್ಯುತ್ತಮ ಕಿರುಚಿತ್ರ ನಿರ್ದೇಶಿಸುವವರಿಗೆ ಆಫರ್ ಒಂದನ್ನು ಕೊಟ್ಟಿದೆ. ಶಾರ್ಟ್ ಫಿಲ್ಮ್ ಕಂಟೆಸ್ಟ್ ಚಾನ್ಸ್ ನೀಡಿದ್ದು, ಇದರಲ್ಲಿ ಅತ್ಯುತ್ತಮ ಎನಿಸಿದ್ದನ್ನು ಜೀ5 ಒಟಿಟಿಯಲ್ಲಿ ಪ್ರಸಾರ ಮಾಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.