ETV Bharat / entertainment

Julian Sands Death: ಕಣ್ಮರೆಯಾಗಿ ಐದು ತಿಂಗಳ ನಂತರ ಆಸ್ಕರ್ ನಾಮನಿರ್ದೇಶಿತ ಸಿನಿಮಾ ನಟನ ಶವ ಪತ್ತೆ! - ಜೂಲಿಯನ್ ಸ್ಯಾಂಡ್ಸ್ ನಿಧನ

ಜನವರಿಯಲ್ಲಿ ಕಣ್ಮರೆಯಾಗಿದ್ದ ಹಾಲಿವುಡ್​​ ನಟ ಜೂಲಿಯನ್ ಸ್ಯಾಂಡ್ಸ್ ಶವವಾಗಿ ಪತ್ತೆಯಾಗಿದ್ದಾರೆ.

Julian Sands death
ಜೂಲಿಯನ್ ಸ್ಯಾಂಡ್ಸ್ ನಿಧನ
author img

By

Published : Jun 28, 2023, 2:03 PM IST

ಲಾಸ್ ಏಂಜಲೀಸ್: ಎ ರೂಮ್ ವಿಥ್ ಎ ವ್ಯೂವ್​ ಮತ್ತು ಲೀವಿಂಗ್ ಲಾಸ್ ವೇಗಾಸ್ ಸೇರಿದಂತೆ 1980 ಮತ್ತು 90ರ ದಶಕದ ಸಂದರ್ಭದಲ್ಲಿ ಆಸ್ಕರ್​​ಗೆ ನಾಮನಿರ್ದೇಶನಗೊಂಡಿದ್ದ ಸಿನಿಮಾದಲ್ಲಿ ನಟಿಸಿದ್ದ ನಟ ಜೂಲಿಯನ್ ಸ್ಯಾಂಡ್ಸ್ (Julian Sands) ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಕ್​ಗೆ (hiking) ಹೊರಟು ನಂತರ ಕಣ್ಮರೆಯಾದ ಐದು ತಿಂಗಳ ನಂತರ ದಕ್ಷಿಣ ಕ್ಯಾಲಿಫೋರ್ನಿಯಾ ಪರ್ವತದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಮೌಂಟ್ ಬಾಲ್ಡಿ ಬಳಿಯ ಅರಣ್ಯದಲ್ಲಿ ಶನಿವಾರ ನಟ ಜೂಲಿಯನ್ ಸ್ಯಾಂಡ್ಸ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಸ್ಯಾನ್ ಬರ್ನಾರ್ಡಿನೊ ಕೌಂಟಿ ಶೆರಿಫ್ ಇಲಾಖೆ ತಿಳಿಸಿದೆ. 65 ವರ್ಷ ಹರೆಯದ ನಟ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದರು. ಅತ್ಯಾಸಕ್ತಿ ಮತ್ತು ಅನುಭವಿ ಪಾದಯಾತ್ರಿ (hiker) ಆಗಿದ್ದರು. ನಗರದ ಪೂರ್ವದಲ್ಲಿ 10,000 ಅಡಿ (3,048 ಮೀಟರ್) ಗೂ ಹೆಚ್ಚು ಎತ್ತರದ ಶಿಖರವನ್ನು ಏರಿದ ನಂತರ ಜನವರಿ 13ರಂದು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು.

ಡ್ರೋನ್‌ ಮತ್ತು ಹೆಲಿಕಾಪ್ಟರ್‌ಗಳ ಸಹಾಯದಿಂದ ರಕ್ಷಣಾ ಸಿಬ್ಬಂದಿ ಅವರನ್ನು ಹಲವಾರು ಬಾರಿ ಹುಡುಕಿದರು. ಆದರೆ, ಚಳಿಗಾಲದ ಪರಿಸ್ಥಿತಿಗಳಳು ರಕ್ಷಣಾ ಕಾರ್ಯಾಚರಣೆಗೆ ತೀವ್ರವಾಗಿ ಅಡಚಣೆಯಾಯಿತು. ಸ್ಯಾಂಡ್ಸ್ ಅವರು ಜೀವಂತವಾಗಿ ಪತ್ತೆಯಾಗಬಹುದೆಂಬ ನಿರೀಕ್ಷೆ ಬಹಳ ಹಿಂದೆಯೇ ಕಡಿಮೆ ಆಗಿತ್ತು. ಆದರೆ, ಅವರು ಶವವಾಗಿ ಪತ್ತೆಯಾದ ಹಿಂದಿನ ದಿನ ಹುಡುಕಾಟ ನಡೆಸಿದ್ದ ಜಿಲ್ಲಾಡಳಿತ, ಈ ಪ್ರಕರಣವು ಸಕ್ರಿಯವಾಗಿದೆ ಎಂದು ತಿಳಿಸಿತ್ತು. ಸದ್ಯ ಮೃತದೇಹ ಪತ್ತೆ ಆಗಿದೆ. ಶವಪರೀಕ್ಷೆ ಕೂಡ ನಡೆಸಲಾಗಿದೆ. ಸಾವಿನ ನಿಖರ ಕಾರಣ ನಿರ್ಧರಿಸುವ ಮೊದಲು ಹೆಚ್ಚಿನ ಪರೀಕ್ಷೆಯ ಫಲಿತಾಂಶಗಳ ಅಗತ್ಯ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ಹುಟ್ಟಿ, ಬೆಳೆದ ಮತ್ತು ಅಲ್ಲೇ ನಟನೆ ಪ್ರಾರಂಭಿಸಿದ ಜೂಲಿಯನ್ ಸ್ಯಾಂಡ್ಸ್, ಸಿನಿಮಾ ಮತ್ತು ದೂರದರ್ಶನದಲ್ಲಿ ನಿರಂತರವಾಗಿ ಗುರುತಿಸಿಕೊಂಡಿದ್ದರು. 40 ವರ್ಷಗಳ ವೃತ್ತಿಜೀವನದಲ್ಲಿ ಇವರು ಮಾಡಿದ ಸಾಧನೆ ಅಪಾರ. 1985 ರಿಂದ 1995 ರವರೆಗಿನ 10 ವರ್ಷಗಳ ಅವಧಿಯಲ್ಲಿ ಅವರು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಬಹುತೇಕ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.

ಲಂಡನ್‌ನ ರಾಯಲ್ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಆ್ಯಂಡ್ ಡ್ರಾಮಾದಲ್ಲಿ ಅಧ್ಯಯನ ಪೂರ್ಣಗೊಳಿಸಿದ ನಂತರ, ಆಕ್ಸ್‌ಫರ್ಡ್ ಬ್ಲೂಸ್ ಮತ್ತು ದಿ ಕಿಲ್ಲಿಂಗ್ ಫೀಲ್ಡ್ಸ್ ಸೇರಿದಂತೆ ಕೆಲ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸುವ ಮೂಲಕ ವೃತ್ತಿಜೀವನ ಪ್ರಾರಂಭಿಸಿದರು. ಬಳಿಕ ಪ್ರಮುಖ ನಾಯಕ ನಟನಾಗಿ ಕಾಣಿಸಿಕೊಂಡರು.

ಇದನ್ನೂ ಓದಿ: Satyaprem Ki Katha: ಮೊದಲ ದಿನ 8 ಕೋಟಿ ರೂ. ಕಲೆಕ್ಷನ್ ಸಾಧ್ಯತೆ​ ​ - ಕಿಲ್ಲಿಂಗ್​​ ಲುಕ್​​ ಕೊಟ್ಟ ಕಿಯಾರಾ

1985ರ ಎ ರೂಮ್ ವಿತ್ ಎ ವ್ಯೂವ್​​​ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ನಿರ್ದೇಶಕ ಜೇಮ್ಸ್ ಐವರಿ ಮತ್ತು ನಿರ್ಮಾಪಕ ಇಸ್ಮಾಯಿಲ್ ಮರ್ಚೆಂಟ್ ಅವರ ಈ ಚಲನಚಿತ್ರವು ಅತ್ಯುತ್ತಮ ಚಲನಚಿತ್ರಕ್ಕಾಗಿ ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಮತ್ತು ಟೆಲಿವಿಷನ್ ಆರ್ಟ್ಸ್ ಪ್ರಶಸ್ತಿ ಗೆದ್ದುಕೊಂಡಿತು. ಎಂಟು ವಿಭಾಗದಲ್ಲಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತು. ಆ ಪೈಕಿ ಮೂರು ಪ್ರಶಸ್ತಿ ಗೆದ್ದಿತು. ಈ ಯಶಸ್ಸಿನ ಹಿನ್ನೆಲೆಯಲ್ಲಿ, ನಟ ಜೂಲಿಯನ್ ಸ್ಯಾಂಡ್ಸ್ ಹಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿದರು. ಬಳಿಕ ಅನೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನೂ ಓದಿ: ಅಮೆರಿಕದಲ್ಲಿ‌ 'ವಿಶ್ವ ಶ್ರೇಷ್ಠ ಕನ್ನಡಿಗ 2023' ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.