ETV Bharat / entertainment

ಬೆಂಗಳೂರಿನಲ್ಲಿ 'ಹಾಯ್ ನಾನ್ನ' ಪ್ರಚಾರ: ಶಿವಣ್ಣನನ್ನು ಭೇಟಿಯಾದ ನ್ಯಾಚುರಲ್​​​ ಸ್ಟಾರ್ ನಾನಿ - nani with shivanna

ನ್ಯಾಚುರಲ್​​​ ಸ್ಟಾರ್ ನಾನಿ ಬೆಂಗಳೂರಿಗೆ ಆಗಮಿಸಿ 'ಹಾಯ್ ನಾನ್ನ' ಪ್ರಚಾರ ನಡೆಸಿದ್ದಾರೆ.

'Hi Nanna' movie promotion at Bangalore
ಬೆಂಗಳೂರಿನಲ್ಲಿ 'ಹಾಯ್ ನಾನ್ನ' ಪ್ರಚಾರ
author img

By ETV Bharat Karnataka Team

Published : Dec 5, 2023, 4:13 PM IST

ಬೆಂಗಳೂರಿನಲ್ಲಿ 'ಹಾಯ್ ನಾನ್ನ' ಪ್ರಚಾರ

ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ವಿಭಿನ್ನ ಪಾತ್ರ, ಚಿತ್ರಗಳ ಮೂಲಕ ತಮ್ಮದೇ ಆದ ಸ್ಟಾರ್ ಡಮ್ ಕ್ರಿಯೇಟ್ ಮಾಡಿಕೊಂಡಿರುವ ನಟ ನಾನಿ. 'ದಸರಾ' ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ನ್ಯಾಚುರಲ್​​​ ಸ್ಟಾರ್ ನಾನಿ ಅಭಿನಯಿಸಿರುವ ಸಿನಿಮಾ 'ಹಾಯ್ ನಾನ್ನ'. ಇದು ನಟನ 30ನೇ ಸಿನಿಮಾ. ಟ್ರೇಲರ್, ಹಾಡಿನ ಮೂಲಕ ನಿಪ್ರಿಯರಲ್ಲಿ ಕುತೂಹಲ ಮೂಡಿಸಿರೋ 'ಹಾಯ್ ನಾನ್ನ' ಇದೇ ಡಿಸೆಂಬರ್ 7ರಂದು ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಪ್ರಚಾರದ ಭಾಗವಾಗಿ ನಾನಿ ಬೆಂಗಳೂರಿಗೆ ಆಗಮಿಸಿದ್ದರು.

ಬೆಂಗಳೂರಿನಲ್ಲಿ 'ಹಾಯ್ ನಾನ್ನ' ಪ್ರಚಾರ: 'ಹಾಯ್ ನಾನ್ನ' ಚಿತ್ರದ ಕುರಿತು ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಮಾಧ್ಯಮಗೋಷ್ಟಿ ನಡೆಯಿತು. ಈ ಸಂದರ್ಭ ನಟ ನಾನಿ, ಕರ್ನಾಟದಲ್ಲಿ ಈ ಚಿತ್ರದ ವಿತರಣಾ ಜವಾಬ್ದಾರಿಯನ್ನು ಹೊತ್ತಿರುವ ನಿರ್ಮಾಪಕ, ವಿತರಕ ಜಾಕ್ ಮಂಜು ಉಪಸ್ಥಿತರಿದ್ದರು.

ಮೊದಲು ಮಾತನಾಡಿದ ಜಾಕ್ ಮಂಜು, ಹಾಯ್ ನಾನ್ನ ಚಿತ್ರವನ್ನು ಕನ್ನಡ ಹಾಗೂ ತೆಲುಗು ಭಾಷೆ ಸೇರಿ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡ ಡಬ್ಬಿಂಗ್ ಕೂಡ 35 ರಿಂದ 40ಕ್ಕೂ ಹೆಚ್ಚು ಥಿಯೇಟರ್​ನಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ತಂದೆ ಮಗಳ ಬಾಂಧವ್ಯ: ಬಳಿಕ ಮಾತನಾಡಿದ ನಟ ನಾನಿ, ಬೆಂಗಳೂರು ಅಂದ್ರೆ ಬಹಳ ಇಷ್ಟ. ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುವ ಜನರಿದ್ದಾರೆ. ನನ್ನ ಹೆಚ್ಚಿನ ಸ್ನೇಹಿತರು ಇರೋದು ಬೆಂಗಳೂರಿನಲ್ಲೇ ಎಂದು ತಿಳಿಸಿದರು. ಸಿನಿಮಾ ಬಗ್ಗೆ ಮಾತು ಮುಂದುವರಿಸಿ, ಇದೊಂದು ಯೂನಿವರ್ಸಲ್ ಕಥೆ. ಹಾಗಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಎಮೋಷನಲ್ ಫ್ಯಾಮಿಲಿ ಎಂಟರ್​​ಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡಿದೆ. ತಂದೆ ಮಗಳ ಬಾಂಧವ್ಯದ ಸುತ್ತ ಕಥೆ ಹೆಣೆಯಲಾಗಿದೆ. ವಿಭಿನ್ನ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಮಗಳ ಪಾತ್ರದಲ್ಲಿ ಬೇಬಿ ಕಿಯಾರಾ ಖಾನ್ ನಟಿಸಿದ್ದಾಳೆ. ಜೊತೆಗೆ ಸೀತಾ ರಾಮಂ ಖ್ಯಾತಿಯ ಮೃಣಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನಿಜಕ್ಕೂ ನೋಡುಗರನ್ನು ಭಾವನಾತ್ಮಕ ಜಗತ್ತಿಗೆ ಕರೆದೊಯ್ಯುತ್ತದೆ ಎಂದು ತಿಳಿಸಿದರು.

ನಮ್ಮ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಾನ್ನ ಅಂದ್ರೆ ಅಪ್ಪ. ಆದರೆ ಹಿಂದಿಯಲ್ಲಿ ಹಾಯ್ ಪಾಪ ಎಂದು ಶೀರ್ಷಿಕೆ ಇಟ್ಟಿದ್ದೇವೆ. ಹಿಂದಿಯಲ್ಲಿ ನಾನ್ನ ಅಂದ್ರೆ ತಾತ ಆಗುತ್ತೆ. ಹಾಗಾಗಿ ಪಾಪ ಎಂದು ಇಟ್ಟಿದ್ದೇವೆಂದು ತಿಳಿಸಿದರು. ಇನ್ನು, ಹಾಯ್​ ನಾನ್ನ ನನಗೆ ಬಹಳ ಹತ್ತಿರವಾದ ಚಿತ್ರ. ನನಗೆ 6 ವರ್ಷದ ಮಗನಿದ್ದಾನೆ. ಈ ಚಿತ್ರದಲ್ಲಿ ಹೆಣ್ಣು ಮಗುವಿನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನನಗೆ ತೃಪ್ತಿ ಕೊಟ್ಟಿದೆ. ಈ ಚಿತ್ರ ಯಾರಿಗೂ ನಿರಾಶೆ ಮಾಡಿಸಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'Hi Nanna' movie promotion at Bangalore
ಶಿವಣ್ಣನನ್ನು ಭೇಟಿಯಾದ ನ್ಯಾಚುರಲ್​​​ ಸ್ಟಾರ್ ನಾನಿ

ಶಿವಣ್ಣನನ್ನು ಭೇಟಿಯಾದ ನಾನಿ: ಹಾಯ್ ನಾನ್ನ ಪ್ರೆಸ್ ಮೀಟ್​ಗೂ ಮುನ್ನ ನಟ ನಾನಿ ನಾಗವಾರದಲ್ಲಿರುವ ನಟ ಶಿವರಾಜ್​​ಕುಮಾರ್ ಮನೆಗೆ ಭೇಟಿ ನೀಡಿ, ಅವರೊಂದಿಗೆ ಬ್ರೇಕ್ ಫಾಸ್ಟ್ ಮಾಡಿದ್ದಾರೆ. ಇದು ನಾನಿ ಅವರಿಗೆ ಬಹಳಾನೇ ಖುಷಿ ಕೊಟ್ಟಿದೆ. ನಾನು, ಶಿವಣ್ಣ ಆಗಾಗ್ಗೆ ಫೋನ್​ನಲ್ಲಿ ಮಾತನಾಡುತ್ತೇವೆ. ಶಿವಣ್ಣ ನನ್ನ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಸುತ್ತಾರೆ. ಇಂದು ಶಿವಣ್ಣನನ್ನು ಭೇಟಿ ಮಾಡಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸೋಮವಾರವೂ ಭರ್ಜರಿ ಕಲೆಕ್ಷನ್​​: ಅನಿಮಲ್​​​​ ಬಾಕ್ಸ್ ಆಫೀಸ್​ ಪ್ರಯಾಣ ಅತ್ಯುತ್ತಮ

ಇನ್ನೂ ನಾನಿ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಅಂದ್ರೆ ಬಹಳ ಇಷ್ಟವಂತೆ. ಈಗಾಗ್ಲೇ 'ಈಗ' ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ನಾನಿಗೆ ಸುದೀಪ್ ಜೊತೆ ಕಮರ್ಷಿಯಲ್ ಸಿನಿಮಾ ಮಾಡಬೇಕೆನ್ನುವ ಆಸೆಯಿದೆ. ಜೊತೆಗೆ ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಅವರ ಚಿತ್ರಗಳು ಇಷ್ಟ ಆಗುತ್ತವೆ ಎಂದು ಕೂಡ ತಿಳಿಸಿದರು.

ಇದನ್ನೂ ಓದಿ: ಡಂಕಿ ಟ್ರೇಲರ್​​: 'ಎಸ್​​ಆರ್​ಕೆಯ 3rd ಬ್ಲಾಕ್​ಬಸ್ಟರ್' ಅಂತಿದ್ದಾರೆ ಫ್ಯಾನ್ಸ್

ಹಾಯ್ ನಾನ್ನ ಸಿನಿಮಾಗೆ ಯುವ ನಿರ್ದೇಶಕ ಶೌರ್ಯುವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವೈರ ಎಂಟರ್​ಟೈನ್ಮೆಂಟ್ಸ್ ಬ್ಯಾನರ್ ಅಡಿ ಮೋಹನ್ ಚೆರುಕುರಿ, ಡಾ. ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾನು ಜಾನ್ ವರ್ಗೀಸ್ ಐಎಸ್​ಸಿ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿದ್ದು, ಇದೇ ಡಿಸೆಂಬರ್ 7ರಂದು ಹಾಯ್ ನಾನ್ನ ಸಿನಿಮಾ ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.