ETV Bharat / entertainment

ದಾಖಲೆ ಬೆಲೆಗೆ ಹೆಡ್ ಬುಷ್ ಸಿನಿಮಾ ರೈಟ್ಸ್ ಮಾರಾಟ - Head Bush detail

ಹೆಡ್ ಬುಷ್ ಚಿತ್ರತಂಡದ ಸದಸ್ಯರೊಬ್ಬರು ಹೇಳುವ ಪ್ರಕಾರ, ಝೀ ಸ್ಟುಡಿಯೋಸ್ ಸಂಸ್ಥೆ ಬರೋಬ್ಬರಿ 20 ರಿಂದ 25 ಕೋಟಿಗೆ ಡಿಜಿಟಲ್, ಸ್ಯಾಟಲೈಟ್ ಹಾಗೂ ಥಿಯೇಟ್ರಿಕಲ್ ರೈಟ್ಸ್ ಖರೀದಿಸಿದೆ ಎನ್ನಲಾಗ್ತಿದೆ.

Head Bush movie rights sold out for record price to zee studious
ದಾಖಲೆ ಬೆಲೆಗೆ ಹೆಡ್ ಬುಷ್ ಸಿನಿಮಾ ರೈಟ್ಸ್ ಮಾರಾಟ
author img

By

Published : Sep 24, 2022, 1:37 PM IST

ಅದ್ಭುತ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಡಾಲಿ ಧನಂಜಯ್. ನಟ ರಾಕ್ಷಸ ಅಂತಾ ಕರೆಸಿಕೊಳ್ಳುವ ಡಾಲಿ ಬೆಂಗಳೂರಿನ ಒಂದು ಕಾಲದ ಭೂಗತ ದೊರೆ ಡಾನ್‌ ಎಂ ಪಿ ಜಯರಾಜ್‌ ಅವರ ಜೀವನಾಧಾರಿತ ಸಿನಿಮಾ‌ ಮಾಡುತ್ತಿರುವುದು ಸೌಥ್​ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​​ ಟಾಕ್ ಆಗುತ್ತಿದೆ. ಅಕ್ಟೋಬರ್ 21ರ ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆ ಆಗಲಿರುವ ಹೆಡ್ ಬುಷ್ ಸಿನಿಮಾ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟ ಆಗಿದೆ.

ಡಾಲಿ ಧನಂಜಯ್ ಮಾಜಿ‌ ಡಾನ್ ಜಯರಾಜ್ ಬಯೋಫಿಕ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಹು ನಿರೀಕ್ಷಿತ ಸಿನಿಮಾ ಹೆಡ್ ಬುಷ್. ಸದ್ಯ ಪೋಸ್ಟರ್ ಹಾಗು ಹಾಡುಗಳಿಂದಲೇ ಸೌಂಡ್ ಮಾಡುತ್ತಿರುವ ಹೆಡ್ ಬುಷ್ ಸಿನಿಮಾ ಗಾಂಧಿನಗರದಿಂದ ದುಬೈವರೆಗೂ ಸದ್ದು ಮಾಡುತ್ತಿದೆ. ರಾಜ್ ಕಪ್ ಕ್ರಿಕೆಟ್ ಪಂದ್ಯಕ್ಕಾಗಿ ದುಬೈಗೆ ಹೋಗಿರುವ ಧನಂಜಯ್ ಅಲ್ಲೂ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಚಿತ್ರತಂಡದ ಕಡೆಯಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ‌ಹೆಡ್ ಬುಷ್ ಸಿನಿಮಾ‌ ಡಿಜಿಟಲ್, ಸ್ಯಾಟಲೈಟ್ ಹಾಗೂ ಥಿಯೇಟ್ರಿಕಲ್ ರೈಟ್ಸ್ ದಾಖಲೆಯ ಬೆಲೆಗೆ ಮಾರಾಟವಾಗಿದೆ ಅನ್ನೋ ಮಾಹಿತಿ ಇದೆ.

ಹೌದು, ಡಾಲಿ ಧನಂಜಯ್ ಅಭಿನಯಿಸಿ ನಿರ್ಮಾಣ ಮಾಡುತ್ತಿರುವ ಹೆಡ್‌ ಬುಷ್ ಸಿನಿಮಾ ಬಿಡುಗಡೆಗೂ ಮುನ್ನವೇ ಒಳ್ಳೆ ಬಿಸ್​​ನೆಸ್ ಆಗಿದೆ. ಹೆಡ್ ಬುಷ್ ಚಿತ್ರತಂಡದ ಸದ್ಯದರೊಬ್ಬರು ಹೇಳುವ ಪ್ರಕಾರ, ಝೀ ಸ್ಟುಡಿಯೋಸ್ ಸಂಸ್ಥೆ ಬರೋಬ್ಬರಿ 20 ರಿಂದ 25 ಕೋಟಿಗೆ ಡಿಜಿಟಲ್, ಸ್ಯಾಟಲೈಟ್ ಹಾಗೂ ಥಿಯೇಟ್ರಿಕಲ್ ರೈಟ್ಸ್ ಖರೀದಿಸಿದೆ ಎನ್ನಲಾಗ್ತಿದೆ.

ಬೆಂಗಳೂರು ಭೂಗತ ಲೋಕದ ನೈಜ ಕಥೆಯನ್ನು ಈ ಆ್ಯಕ್ಷನ್ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕ ಅಗ್ನಿ ಶ್ರೀಧರ್ ಶಿಷ್ಯ ಶೂನ್ಯ ಮಾಡಿದ್ದಾರೆ. ಅಗ್ನಿ ಶ್ರೀಧರ್ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಡಾಲಿ ಅಲ್ಲದೇ ಕ್ರೇಜಿಸ್ಟಾರ್ ವಿ.ರವಿಚಂದ್ರನ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ಶೃತಿ ಹರಿಹರನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಇದನ್ನೂ ಓದಿ: ಹೆಡ್ ಬುಷ್ ಸಿನಿಮಾ ಪ್ರಚಾರ: ಡಾನ್‌ ಜಯರಾಜ್‌ ಗೆಟಪ್​ನಲ್ಲಿ ದುಬೈಗೆ ಹಾರಿದ ಡಾಲಿ ಧನಂಜಯ್

ಹೆಡ್‌ ಬುಷ್ ಚಿತ್ರ 70-80ರ ದಶಕದ ಬೆಂಗಳೂರು ಭೂಗತ ಲೋಕದ ಕಥೆ ಒಳಗೊಂಡಿದೆ. ಮುಖ್ಯವಾಗಿ ಬೆಂಗಳೂರು ಭೂಗತ ಲೋಕದ ಆರಂಭದ ದಿನಗಳನ್ನು ಈ ಚಿತ್ರದಲ್ಲಿ ಹೇಳಿದ್ದಾರೆ. ಜಯರಾಜ್, ಕೊತ್ವಾಲರಂತಹ ರೌಡಿಗಳು ಭೂಗತಲೋಕಕ್ಕೆ ಹೇಗೆ ಎಂಟ್ರಿಕೊಟ್ಟರು ಎನ್ನುವುದನ್ನು ಮೊದಲ ಭಾಗದಲ್ಲಿ ನೋಡಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.