ETV Bharat / entertainment

ಆರ್​ಆರ್​ಆರ್​​ ಸಕ್ಸಸ್​: ಜೂನಿಯರ್ ಎನ್​ಟಿಆರ್​, ಆಲಿಯಾ ಭಟ್​ಗೆ HCA ಪ್ರಶಸ್ತಿ - Spotlight Award

ಆರ್​ಆರ್​ಆರ್​ ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಜೂನಿಯರ್ ಎನ್​ಟಿಆರ್​ ಮತ್ತು ಆಲಿಯಾ ಭಟ್ ಅವರಿಗೆ ಹಾಲಿವುಡ್​ ಕ್ರಿಟಿಕ್ಸ್​ ಅಸೋಸಿಯೇಶನ್​ ಫಿಲ್ಮ್ ಪ್ರಶಸ್ತಿ ಘೋಷಣೆ ಆಗಿದೆ.

rrr team
ಆರ್​ಆರ್​ಆರ್​​ ಚಿತ್ರತಂಡ
author img

By

Published : Mar 3, 2023, 6:13 PM IST

ಎಸ್‌ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದ ಆರ್‌ಆರ್‌ಆರ್ ಚಿತ್ರ ಇದೇ ಮಾರ್ಚ್​ 24ಕ್ಕೆ ಒಂದು ವರ್ಷ ಪೂರೈಸಲಿದೆ. ಸೌತ್ ಸಿನಿರಂಗದ ಸೂಪರ್​ ಹಿಟ್ ಮೂವಿ ಆರ್​ಆರ್​ಆರ್​​ ಈಗಾಗಲೇ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಸದ್ಯ ಎಲ್ಲರ ಗಮನ ಆಸ್ಕರ್​ ಮೇಲೆ ಕೇಂದ್ರೀಕೃತವಾಗಿದೆ.

ಟಾಲಿವುಡ್ ಸೂಪರ್​ ಸ್ಟಾರ್​ಗಳಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್​​​ಚರಣ್ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದಾರೆ. ಚಿತ್ರ ಪ್ರದರ್ಶನಗೊಂಡ ಪ್ರತೀ ದೇಶಗಳಲ್ಲೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ಇತ್ತೀಚೆಗೆ ನಡೆದ ಹಾಲಿವುಡ್​ ಕ್ರಿಟಿಕ್ಸ್​ ಅಸೋಸಿಯೇಶನ್​ ಪಿಲ್ಮ್​ ಅವಾರ್ಡ್ಸ್ ಸಮಾರಂಭದಲ್ಲಿ ಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಸಮಾರಂಭದಲ್ಲಿ ನಿರ್ದೇಶಕ ಎಸ್​ಎಸ್​ ರಾಜಮೌಳಿ, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ನಟ ರಾಮ್​ಚರಣ್​​​ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಆದರೆ ಚಿತ್ರದ ಪ್ರಮುಖ ನಟರಲ್ಲೊಬ್ಬರಾದ ಜೂನಿಯರ್ ಎನ್​​​ಟಿಆರ್ ಈ ಸಮಾರಂಭಕ್ಕೆ ಸಾಕ್ಷಿಯಾಗಿರಲಿಲ್ಲ.

ಸ್ಪಾಟ್‌ಲೈಟ್ ಪ್ರಶಸ್ತಿ: ಅಮೆರಿಕದಲ್ಲಿ ಅಂದು ನಡೆದ ಸಮಾರಂಭದಲ್ಲಿ ನಟ ರಾಮ್​ಚರಣ್​​ ಸ್ಪಾಟ್‌ಲೈಟ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಕಾರ್ಯಕ್ರಮದಲ್ಲಿ ಜೂನಿಯರ್ ಎನ್​​​ಟಿಆರ್ ಅವರ ಅನುಪಸ್ಥಿತಿ ಅವರ ಅಭಿಮಾನಿಗಳ ಅಸಮಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಹೆಚ್‌ಸಿಎ ಟ್ವೀಟ್ ಮೂಲಕ ಸ್ಪಷ್ಟನೆ ಕೂಡ ನೀಡಿತ್ತು.

ಆಲಿಯಾರಿಗೂ ಹೆಚ್‌ಸಿಎ ಪ್ರಶಸ್ತಿ: ಸದ್ಯ ಹಾಲಿವುಡ್​ ಕ್ರಿಟಿಕ್ಸ್​ ಅಸೋಸಿಯೇಶನ್​ ಫಿಲ್ಮ್​ ಅವಾರ್ಡ್ಸ್ ಟ್ವೀಟ್ ಮೂಲಕ ಶುಭ ಸುದ್ದಿಯೊಂದನ್ನು ಹಂಚಿಕೊಂಡಿದೆ. ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಕ್ಕಾಗಿ ಜೂನಿಯರ್ ಎನ್​ಟಿಆರ್​ ಮತ್ತು ಆಲಿಯಾ ಭಟ್ ಇಬ್ಬರಿಗೂ ಸ್ಪಾಟ್‌ಲೈಟ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಮುಂದಿನ ವಾರ ಇಬ್ಬರಿಗೂ ಪ್ರಶಸ್ತಿಗಳನ್ನು ಕಳುಹಿಸಲಾಗುವುದು ಎಂದು ಟ್ವಿಟರ್‌ನಲ್ಲಿ ಹೆಚ್​ಸಿಎ ತಿಳಿಸಿದೆ.

ಹೆಚ್‌ಸಿಎ ಟ್ವೀಟ್: ಆರ್​ಆರ್​ಆರ್​ ನಟ ಜೂನಿಯರ್ ಎನ್​ಟಿಆರ್ ಅಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗದಿರುವ ಬಗ್ಗೆ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿತ್ತು. ''ಭಾರತದಲ್ಲಿ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿರುವುದರಿಂದ ನಟ ಜೂನಿಯರ್ ಎನ್​ಟಿಆರ್ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ, ಆದರೆ ನಾವು ಅವರನ್ನು ಆಹ್ವಾನಿಸಿದ್ದೆವು, ಶೀಘ್ರದಲ್ಲೇ ನಮ್ಮಿಂದ ತಮ್ಮ ಪ್ರಶಸ್ತಿಗಳನ್ನು ಅವರು ಸ್ವೀಕರಿಸಲಿದ್ದಾರೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ಟ್ವೀಟ್ ಮಾಡಿತ್ತು.

ಇದನ್ನೂ ಓದಿ: ಅಮೆರಿಕದಾದ್ಯಂತ ಆರ್​ಆರ್​ಆರ್ ಸದ್ದು: ಪ್ರೇಕ್ಷಕರ ಚಪ್ಪಾಳೆಗೆ ಸಾಕ್ಷಿಯಾದ ಯುಎಸ್​ ಚಿತ್ರಮಂದಿರಗಳು

ವಾಸ್ತವವಾಗಿ ತಮ್ಮ ಸಹೋದರ, ನಟ ನಂದಮೂರಿ ತಾರಕರತ್ನ ಅವರ ನಿಧನದ ಹಿನ್ನೆಲೆ ಜೂನಿಯರ್​ ಎನ್‌ಟಿಆರ್ ಹೆಚ್‌ಸಿಎ ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎನ್ನುವ ಮಾಹಿತಿ ಇದೆ. ಸದ್ಯ ಎಲ್ಲಾ ವಿಧಿ ವಿಧಾನಗಳು ಮುಗಿದಿದ್ದು, ಮಾರ್ಚ್ 12ರಂದು ನಡೆಯಲಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಜೂನಿಯರ್ ಎನ್​​ಟಿಆರ್ ಭಾಗವಹಿಸಲಿದ್ದಾರೆ. ಮಾರ್ಚ್ 5 ಅಥವಾ 6 ರಂದು ಅಮೆರಿಕಕ್ಕೆ ತೆರಳಲಿದ್ದಾರೆ ಎನ್ನುವ ಮಾಹಿತಿ ಇದ್ದು, ಎಲ್ಲರ ಗಮನ ಆಸ್ಕರ್ ಮೇಲೆ ನೆಟ್ಟಿದೆ.

ಇದನ್ನೂ ಓದಿ: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೂ.ಎನ್​ಟಿಆರ್​ ಅನುಪಸ್ಥಿತಿ: ಹೆಚ್‌ಸಿಎ ಸ್ಪಷ್ಟನೆ ಹೀಗಿದೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.