ತಮ್ಮ ಗಾಯನದಿಂದಲೇ ಮೋಡಿ ಮಾಡುವ ಖ್ಯಾತ ಗಾಯಕ ಸೋನು ನಿಗಮ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜುಲೈ 30, 1973 ರಂದು ಜನಿಸಿದ ಸೋನು ನಿಗಮ್ ಇಂದು ತಮ್ಮ 49ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗ ಸೇರಿದಂತೆ ಅಭಿಮಾನಿಗಳಿಂದ ಸೋನು ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
![HBD Sonu Nigam](https://etvbharatimages.akamaized.net/etvbharat/prod-images/15966865_zsdf3e.png)
ಮೆಲೋಡಿ ಸಾಂಗ್ ಮೂಲಕ ಪ್ರಸಿದ್ಧಿ ಪಡೆದಿರುವ ಇವರು ಕನ್ನಡ, ಪಂಜಾಬಿ, ಬಂಗಾಳಿ, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ತಮಿಳು ಭಾಷೆಗಳಲ್ಲಿ ಹಿನ್ನೆಲೆ ಗಾಯಕರಾಗಿದ್ದಾರೆ. ಹಲವಾರು ಆಲ್ಬಮ್ಗಳನ್ನೂ ಸಹ ತಂದಿರುವ ಅವರು ಕೆಲವು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ.
- " class="align-text-top noRightClick twitterSection" data="">
ಕನ್ನಡ ಚಿತ್ರಗಳ ಅನೇಕ ಹಾಡುಗಳನ್ನು ಹಾಡಿರುವ ಇವರು ನಟ ಗಣೇಶ್ ಅಭಿನಯದ ಮುಂಗಾರು ಮಳೆ ಚಿತ್ರದ 'ಅನಿಸುತಿದೆ ಏಕೋ ಇಂದು' ಹಾಡಿನ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಪ್ರಸಿದ್ಧರಾದರು. ಕನ್ನಡ ಚಿತ್ರರಂಗದೊಂದಿಗೆ ಇಂದಿಗೂ ಉತ್ತಮ ಭಾಂದವ್ಯ ಹೊಂದಿರುವ ಸೋನು ನಿಗಮ್ ಕನ್ನಡ ಕುರಿತು ಅನೇಕ ಬಾರಿ ತಮ್ಮ ಅಭಿಮಾನ, ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="">
ಸೋನು ನಿಗಮ್ರ ಕೆಲ ಪ್ರಸಿದ್ಧ ಹಾಡುಗಳು (ಸಿನಿಮಾದ ಹೆಸರು ಸಹಿತ)
- ಹರ್ ಏಕ್ ಫ್ರೆಂಡ್ ಕಮೀನಾ ಹೋತಾ ಹೇ - ಚಶ್ಮೆ ಬದ್ದೂರ್
- ಯೇ ದಿಲ್ ದೀವಾನಾ - ಪರದೇಶ್
- ಮರೆ ಯಾರ್ ಕಿ ಶಾದಿ ಹೇ - ಮರೆ ಯಾರ್ ಕಿ ಶಾದಿ
- ದೋ ಪಲ್ ಕಿ ಥಿ - ವೀರ್ ಝಾರಾ
- ಸಂದೇಶ್ ಆತೆ ಹೇ - ಬಾರ್ಡರ್
- ಭಗವಾನ್ ಕಹಾ ಹೇ ತೂ - ಪಿಕೆ
- ಮುಜ್ಸೆ ಶಾದಿ ಕರೋಗಿ - ಮುಜ್ಸೆ ಶಾದಿ ಕರೋಗಿ
- ಅಭಿ ಮುಜ್ಮೆ ಕಹೀ - ಅಗ್ನಿಪಥ್
- ಮೇರೆ ಹಾಥ್ ಮೆ ಥೇರಾ ಹಾಥ್ ಹೋ - ಫನಾ
- " class="align-text-top noRightClick twitterSection" data="">
ಇದನ್ನೂ ಓದಿ: ಮೊದಲ ದಿನವೇ ಏಳು ಕೋಟಿ .. ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ 'ಏಕ್ ವಿಲನ್ ರಿಟರ್ನ್ಸ್'