ETV Bharat / entertainment

ಪರಿಣಿತಿ-ರಾಘವ್ ಮದುವೆ ಖಚಿತಪಡಿಸಿದ ಗಾಯಕ ಹಾರ್ಡಿ ಸಂಧು - ಪರಿಣಿತಿ ರಾಘವ್ ವಿಡಿಯೋ

ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ಗಾಯಕ ಹಾರ್ಡಿ ಸಂಧು ಮಾತನಾಡಿದ್ದಾರೆ.

Parineeti Raghav marriage
ಪರಿಣಿತಿ ರಾಘವ್ ಮದುವೆ
author img

By

Published : Mar 31, 2023, 1:26 PM IST

Updated : Mar 31, 2023, 3:47 PM IST

ದೆಹಲಿ ಏರ್​ಪೋರ್ಟ್ ಬಳಿ ಪರಿಣಿತಿ-ರಾಘವ್

ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಅವರ ಹೆಸರು ಕಳೆದ ಕೆಲ ದಿನಗಳಿಂದ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರೊಂದಿಗೆ ಕೇಳಿ ಬರುತ್ತಿದೆ. ಈ ಸುಂದರ ಜೋಡಿಯ ಮದುವೆ ವದಂತಿ ದಿನದಿಂದ ದಿನಕ್ಕೆ ರೆಕ್ಕೆಪುಕ್ಕ ಪಡೆಯುತ್ತಲೇ ಇದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋಗಳು ವೈರಲ್​ ಆಗುತ್ತಲೇ ಇವೆ. ಪರಿಣಿತಿ ಅವರು ಎಎಪಿ ನಾಯಕ ರಾಘವ್ ಚಡ್ಡಾರನ್ನು ನಿಜವಾಗಿಯೂ ಮದುವೆಯಾಗಲಿದ್ದಾರೆಯೇ ಎಂಬ ಒಂದೇ ಒಂದು ಪ್ರಶ್ನೆ ನಟಿಯ ಅಭಿಮಾನಿಗಳಲ್ಲಿದೆ. ಆದ್ರೆ ಈ ಇಬ್ಬರೂ ಮಾತ್ರ ಇನ್ನೂ ಮೌನ ಮುಂದುವರಿಸಿದ್ದಾರೆ.

ಜೋಡಿಯನ್ನು ಅಭಿನಂದಿಸಿದ ಗಾಯಕ: ಇದೀಗ ಪಂಜಾಬಿ ಗಾಯಕ ಮತ್ತು ನಟ ಹಾರ್ಡಿ ಸಂಧು ಕೂಡ ಈ ಸುದ್ದಿಯನ್ನು ಖಚಿತಪಡಿಸಿ ಪರಿಣಿತಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಹಾರ್ಡಿ ಸಂಧು ಕಳೆದ ವರ್ಷ 'ಕೋಡ್ ನೇಮ್: ತಿರಂಗಾ' ಚಿತ್ರದಲ್ಲಿ ಪರಿಣಿತಿ ಚೋಪ್ರಾ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ಇದೀಗ ಸಂದರ್ಶನವೊಂದರಲ್ಲಿ ಪರಿಣಿತಿ ರಾಘವ್​ ಮದುವೆ ವಿಚಾರವಾಗಿ ಪ್ರತಿಕ್ರಿಯಿಸಿ, 'ಇದು ಅಂತಿಮವಾಗಿ ನಡೆಯುತ್ತಿದೆ, ನನಗೆ ಬಹಳ ಸಂತೋಷವಾಗಿದೆ. ನಾನು ಅವರಿಗೆ ಶುಭ ಹಾರೈಸುತ್ತೇನೆ, ಅವರಿಗೆ ಕರೆ ಮಾಡಿ ಅಭಿನಂದಿಸಿದೆ' ಎಂದು ತಿಳಿಸಿದರು.

ಹಾರ್ಡಿ ಸಂಧು ಹೇಳಿದ್ದಿಷ್ಟು..: 'ಕೋಡ್ ನೇಮ್: ತಿರಂಗಾ' ಶೂಟಿಂಗ್‌ ಸಮಯದಲ್ಲಿ ಅವರ ಮದುವೆಯ ಬಗ್ಗೆ ಮಾತನಾಡುತ್ತಿದ್ದರು. ಒಳ್ಳೆಯ ಹುಡುಗ ಸಿಕ್ಕಾಗ ಮದುವೆ ಆಗುತ್ತೇನೆ ಎಂದು ಹೇಳುತ್ತಿದ್ದರು. ಅಂತಿಮವಾಗಿ ಮದುವೆ ಹಂತಕ್ಕೆ ತಲುಪಿದ್ದಾರೆ. ಅವರ ಈ ನಿರ್ಧಾರದಿಂದ ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಹಾರ್ಡಿ ಸಂಧು ತಿಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸದ್ದು ಮಾಡುತ್ತಿದೆ.

ಸಂಜೀವ್ ಅರೋರಾ ಟ್ವೀಟ್: ಈ ಮೊದಲು ಎಎಪಿ ನಾಯಕ ಸಂಜೀವ್ ಅರೋರಾ ಅವರ ಟ್ವೀಟ್ ಕೂಡ ವೈರಲ್ ಆಗಿತ್ತು. ಟ್ವೀಟ್ ಮೂಲಕ ಅವರು ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರ ಮದುವೆಗೆ ಅಭಿನಂದನೆ ಸಲ್ಲಿಸಿದ್ದರು. ನಾನು ರಾಘವ್ ಮತ್ತು ಪರಿಣಿತಿ ಅವರನ್ನು ಅಭಿನಂದಿಸುತ್ತೇನೆ, ನನ್ನ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದರು.

ಸಮೀತ್ ಠಕ್ಕರ್ ಟ್ವೀಟ್​: ಸಂಜೀವ್ ಅರೋರಾ ಟ್ವೀಟ್​ಗೂ ಮೂದಲು ಬಿಜೆಪಿ ಬೆಂಬಲಿಗ ಸಮೀತ್ ಠಕ್ಕರ್ ಅವರು ಟ್ವೀಟ್​ ಮಾಡಿದ್ದರು. ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ವಿಡಿಯೋವೊಂದನ್ನು ಶೇರ್ ಮಾಡಿದ್ದ ಅವರು, 'ಪಂಜಾಬಿ ಜೋಡಿಗೆ ರೋಕಾ (ಮದುವೆ ಮುನ್ನದ ಶಾಸ್ತ್ರ/ನಿಶ್ಚಿತಾರ್ಥ) ಶುಭಾಶಯಗಳು' ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಪರಿಣಿತಿ ಚೋಪ್ರಾ-ರಾಘವ್​ ಚಡ್ಡಾ ಮದುವೆ ವಿಚಾರ: ಶುಭ ಕೋರಿದ ಸಂಸದ

ಮದುವೆ ಬಗ್ಗೆ ಸಂಸದ ರಾಘವ್ ಚಡ್ಡಾ ಅವರನ್ನು ಮಾಧ್ಯಮದವರು ಪ್ರಶ್ನಿಸಿದ್ದ ವೇಳೆ, 'ರಾಜನೀತಿ ಬಗ್ಗೆ ಪ್ರಶ್ನಿಸಿ, ಪರಿಣಿತಿ ಬಗ್ಗೆ ಅಲ್ಲ' ಎಂದು ತಿಳಿಸಿದ್ದರು. ಮದುವೆ ಬಗ್ಗೆ ಏನಾದರು ನಿರ್ಧಾರವಾದರೆ ಮಾಹಿತಿ ಕೊಡುತ್ತೇನೆ ಎಂದು ಉತ್ತರಿಸಿದ್ದರಷ್ಟೇ. ಇವೆಲ್ಲದರ ನಡುವೆ ಪರಿಣಿತಿ ಚೋಪ್ರಾ ಬಾಲಿವುಡ್​ನ ಖ್ಯಾತ ಡಿಸೈನರ್​ ಮನೀಷ್ ಮಲ್ಹೋತ್ರಾ ಅವರನ್ನೂ ಭೇಟಿ ಆಗಿದ್ದಾರೆ. ತಮ್ಮ ವಿಶೇಷ ದಿನಕ್ಕಾಗಿ ವಿಭಿನ್ನ ಉಡುಗೆ ತೊಡುವ ಸಲುವಾಗಿ ವಸ್ತ್ರ ವಿನ್ಯಾಸಕರನ್ನು ಭೇಟಿಯಾಗಿದ್ದಾರೆಂದು ಹೇಳಲಾಗಿದೆ.

ಇದನ್ನೂ ಓದಿ: 'ಆಮ್ ಆದ್ಮಿ' ರಾಘವ್​ ಜೊತೆ ಮದುವೆ ಪ್ರಶ್ನೆಗೆ ನಾಚಿ ನೀರಾದ ಪರಿಣಿತಿ ಚೋಪ್ರಾ

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮುಂಬೈನ ರೆಸ್ಟೋರೆಂಟ್ ಬಳಿ ಕಾಣಿಸಿಕೊಂಡ ಬಳಿಕ ಮದುವೆ ಬಗ್ಗೆ ವದಂತಿಗಳು ಹಬ್ಬಿವೆ. ಅವರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

Last Updated : Mar 31, 2023, 3:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.