ETV Bharat / entertainment

ಹರಿಪ್ರಿಯಾ - ವಸಿಷ್ಠ ಸಿಂಹ ನಿಶ್ಚಿತಾರ್ಥ.. ಆಪ್ತರ ಸಮ್ಮುಖದಲ್ಲಿ ನಡೆಯಿತು ಸಮಾರಂಭ - haripriya vasishta simha news

ಆಪ್ತರ ಸಮ್ಮುಖದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ನಿಶ್ಚಿತಾರ್ಥ ಸಮಾರಂಭ ನಡೆದಿದೆ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದೆ.

haripriya vasishta simha engagement
ಹರಿಪ್ರಿಯಾ-ವಸಿಷ್ಠ ಸಿಂಹ
author img

By

Published : Dec 2, 2022, 5:56 PM IST

ಕನ್ನಡ ಚಿತ್ರರಂಗದಲ್ಲಿ ಪ್ರೀತಿಸಿ ಮದುವೆಯಾದ ಸಾಕಷ್ಟು ತಾರಾ ಜೋಡಿಗಳಿವೆ. ಈ ಸಾಲಿಗೀಗ ನಟ ವಸಿಷ್ಠ ಸಿಂಹ ಹಾಗೂ ನಟ ಹರಿಪ್ರಿಯಾ ಹೊಸ ಸೇರ್ಪಡೆ. ಕೆಲ ದಿನಗಳಿಂದ ಹರಿಪ್ರಿಯಾ ಅವರು ವಸಿಷ್ಠ ಸಿಂಹನ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂಬ ವಿಷಯ ಸಖತ್​ ಸುದ್ದಿ ಮಾಡಿತ್ತು. ಇದೀಗ ಆಪ್ತರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದೆ.

haripriya vasishta simha engagement
ಹರಿಪ್ರಿಯಾ-ವಸಿಷ್ಠ ಸಿಂಹ

ಕಂಚಿನ ಕಂಠದ ನಾಯಕ ವಸಿಷ್ಠ ಸಿಂಹ ಮತ್ತು ನೀರ್​​ ದೋಸೆ ಬೆಡಗಿ ಹರಿಪ್ರಿಯಾ ನಡುವೆ ವಿಶಿಷ್ಟ ಪ್ರೇಮ ಕಥೆ ಆರಂಭವಾಗಿದೆ. ಮೊನ್ನೆ ದುಬೈ ಪ್ರವಾಸ ಮುಗಿಸಿಕೊಂಡು ಇಬ್ಬರೂ ಜೊತೆಯಲ್ಲಿ ಬಂದಿದ್ದರು. ಕೈ ಕೈ ಹಿಡಿದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿ ನಾವಿಬ್ಬರು ಲವರ್ಸ್ ಅಂತಾ ಸುಳಿವು ನೀಡಿದ್ದರು.

ಇದೀಗ ವಸಿಷ್ಠ ಮತ್ತು ಹರಿಪ್ರಿಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಅಂತಾ ಕರೆಯಿಸಿಕೊಂಡಿರುವ ಡಾಲರ್ಸ್ ಕಾಲೋನಿಯಲ್ಲಿರುವ ಹರಿಪ್ರಿಯಾ ಮನೆಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ಸಮಾರಂಭ ನಡೆದಿದೆ ಎನ್ನಲಾಗಿದೆ.

ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ‌ ಕೆಲವೇ ಕೆಲ ಆಪ್ತರು ಮತ್ತು ಕುಟುಂಬದವರು ಭಾಗಿಯಾಗಿ ಈ ನವ ಜೋಡಿಗೆ ಶುಭ ಹಾರೈಸಿದ್ದಾರೆ. 2023ರ ಆರಂಭದಲ್ಲಿ ವಸಿಷ್ಠ-ಪ್ರಿಯಾ ಮದುವೆ ನಡೆಯಲಿದೆ ಅನ್ನೋದು ಈ ಜೋಡಿಯ ಆಪ್ತರ ಮಾತು.

ಇದನ್ನೂ ಓದಿ: ನಟ ನಿರ್ದೇಶಕ ರಿಷಬ್ ಶೆಟ್ಟಿಗೆ ಪ್ರತಿಷ್ಠಿತ ಸಿದ್ದಶ್ರೀ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.