ಹೈದರಾಬಾದ್: ಹಿಂದಿ ಚಿತ್ರರಂಗದ ಹೀಮ್ಯಾನ್ ಖ್ಯಾತಿಯ ಧರ್ಮೇಂದ್ರ ಅವರಿಗೆ 87ನೇ ವಸಂತದ ಸಂಭ್ರಮ. ಧರ್ಮೇಂದ್ರ ಅವರು ಪಂಜಾಬ್‌ನ ನಸ್ರ್ಲಿಯಲ್ಲಿ 8 ಡಿಸೆಂಬರ್ 1935 ರಂದು ಜನಿಸಿದರು. ಇವರು 60 ವರ್ಷಗಳಿಂದ ಹಿಂದಿ ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಅಪಾರ ಅಭಿಮಾನಿಗಳನ್ನು ಹೊಂದಿರು ಧರ್ಮೇಂದ್ರ ಅವರಿಗೆ ಚಿತ್ರರಂಗದಲ್ಲೂ ಸಹ ಪ್ರೀತಿಯ ಹಿಂಬಾಲಕರಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಧರ್ಮೇಂದ್ರ ಅವರ 87 ನೇ ಹುಟ್ಟುಹಬ್ಬಕ್ಕೆ ಇನ್ಸ್ಟಾಗ್ರಾಂ ನಲ್ಲಿ ಸ್ಟೋರಿ ಹಾಕಿ ಶುಭಾಶಯ ಕೋರಿದ್ದಾರೆ. ಇದ್ದಕ್ಕೆ ಅಭಿಮಾನಿಗಳೂ ಸಹ ಪ್ರತಿಕ್ರಿಯಿಸಿದ್ದು, ಶುಭಾಶಯದ ಸುರಿಮಳೆಯೇ ಹರಿದು ಬರುತ್ತಿದೆ.
ಧರ್ಮೇಂದ್ರ ಅವರ ಸಿನಿಮಾ ಜೀವನ: ಧರ್ಮೇಂದ್ರ ಅವರು 1960 ರಲ್ಲಿ 'ದಿಲ್ ಭಿ ತೇರಾ ಹಮ್ ಭಿ ತೇರೆ' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅವರು 1960 - 69ರವರೆಗೆ ಸುಮಾರು 50 ಚಿತ್ರಗಳಲ್ಲಿ ನಟರಾಗಿ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ, ಅವರು ಶೋಲಾ ಔರ್ ಶಬ್ನಮ್, ಅನ್ಪಾಧ್, ಪೂಜಾ ಕೆ ಫೂಲ್, ಆಯ್ ಮಿಲನ್ ಕಿ ಬೇಲಾ ಮುಂತಾದ ಅದ್ಭುತ ಚಿತ್ರಗಳನ್ನು ಮಾಡಿದರು.
ಇದಾದ ನಂತರ 1970-79ರ ಅವಧಿಯಲ್ಲಿ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಧರ್ಮೇಂದ್ರ ಕಾಣಿಸಿಕೊಂಡರು. ಇದರಲ್ಲಿ ಅವರು ಮೇರಾ ನಾಮ್ ಜೋಕರ್, ನಯಾ ಜಮಾನಾ, ಮೇರಾ ಗಾಂವ್ ಮೇರಾ ದೇಶ್, ರಾಜಾ ಜಾನಿ, ಸೀತಾ ಔರ್ ಗೀತಾ, ಶೋಲೆ ಹೆಚ್ಚು ಪ್ರಖ್ಯಾತಿ ತಂದುಕೊಟ್ಟವು. ಈ ಎರಡು ದಶಕಗಳ ಕಾಲ ಧರ್ಮೇಂದ್ರ ಹಿಂದಿ ಚಿತ್ರರಂಗದ ಬಾದ್ ಷಾ ಆಗಿ ಮೆರೆದರು. ನಂತರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು.
ಧರ್ಮೇಂದ್ರ ಅವರ ಮುಂಬರುವ ಚಲನಚಿತ್ರಗಳು: ಧರ್ಮೇಂದ್ರ ಅವರು ಕೊನೆಯ ಬಾರಿಗೆ ಯಮ್ಲಾ ಪಾಗ್ಲಾ ದೀವಾನಾ ಫಿರ್ ಸೆ (2018) ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಧರ್ಮೇಂದ್ರ ಅವರ ಮುಂಬರುವ ಚಿತ್ರಗಳಲ್ಲಿ ಹೋಮ್ ಪ್ರೊಡಕ್ಷನ್ ಚಿತ್ರ ಅಪ್ನೆ 2 ಮತ್ತು ಕರಣ್ ಜೋಹರ್ ಅವರ ನಿರ್ದೇಶನದ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಸೀತೆಯಾಗಿ ಸಾಯಿ ಪಲ್ಲವಿ ಬಾಲಿವುಡ್‌ಗೆ ಎಂಟ್ರಿ?