ETV Bharat / entertainment

ಸಂಕ್ರಾಂತಿ ಹಬ್ಬಕ್ಕೆ 'ಹನುಮಾನ್'​ ಚಿತ್ರ ಬಿಡುಗಡೆ - Hanuman film

ಬಿಗ್​ ಬಜೆಟ್​ನಲ್ಲಿ ತಯಾರಾದ ಪ್ಯಾನ್ ಇಂಡಿಯಾ 'ಹನುಮಾನ್' ಚಿತ್ರ ತಂಡ ಪ್ರಚಾರ ನಿಮಿತ್ತ ಬೆಂಗಳೂರಿಗೆ ಆಗಮಿಸಿತ್ತು.

ಹನುಮಾನ್ ಚಿತ್ರ ತಂಡ
ಹನುಮಾನ್ ಚಿತ್ರ ತಂಡ
author img

By ETV Bharat Karnataka Team

Published : Jan 8, 2024, 8:37 PM IST

Updated : Jan 11, 2024, 7:31 PM IST

ಟಾಲಿವುಡ್​ನ ಯಂಗ್ ಹೀರೋ ತೇಜ್​ ಸಜ್ಜಾ ನಾಯಕ ನಟನಾಗಿ ಕಾಣಿಸಿಕೊಂಡಿರುವ, ಪ್ರಶಾಂತ್ ವರ್ಮಾ ಆ್ಯಕ್ಷನ್ ಕಟ್ ಹೇಳಿರುವ ಪ್ಯಾನ್ ಇಂಡಿಯಾ ಚಿತ್ರ 'ಹನುಮಾನ್' ಇದೇ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಟ್ರೇಲರ್​​ನಿಂದಲೇ ಸಖತ್​ ಸದ್ದು ಮಾಡಿರುವ ಚಿತ್ರ ಇದಾಗಿದ್ದು ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ನಟ ತೇಜ್ ಸಜ್ಜಾ, ನಾಯಕಿ ಅಮೃತಾ ಅಯ್ಯರ್ ಸೇರಿದಂತೆ ಪ್ರಚಾರದಲ್ಲಿ ತೊಡಗಿರುವ ಇಡೀ ಚಿತ್ರ ತಂಡ ಇಂದು ಬೆಂಗಳೂರಿಗೆ ಸಹ ಆಗಮಿಸಿತ್ತು.

ಹನುಮಾನ್ ಚಿತ್ರ ತಂಡ
ಹನುಮಾನ್ ಚಿತ್ರ ತಂಡ

ಚಿತ್ರದ ಕುರಿತು ಮೊದಲು ಮಾತನಾಡಿದ‌ ನಾಯಕ ತೇಜ್ ಸಜ್ಜಾ, ಇದು ಹನುಮಾನ್ ದೇವರ ಬಗ್ಗೆ ಇರುವ ಸಿನಿಮಾವಲ್ಲ. ಇದು ಒಬ್ಬ ಸಾಮಾನ್ಯ ವ್ಯಕ್ತಿಗೆ ಸೂಪರ್​ ಪವರ್ ಬಂದ್ರೆ ಏನಾಗುತ್ತದೆ ಅನ್ನೋದನ್ನು ಹೇಳಲು ಹೊರಟಿರುವ ಚಿತ್ರವಿದು. ವ್ಯಕ್ತಿ ಸೂಪರ್ ಹೀರೋ ಆಗುವುದು ಸೇರಿದಂತೆ, ಕಾಮಿಡಿ, ಆ್ಯಕ್ಷನ್​, ಪ್ರೀತಿ ಎಲ್ಲವೂ ಈ ಚಿತ್ರದಲ್ಲಿ ಅಡಗಿದೆ. ಮೊದಲ ಶಾಟ್​ನಲ್ಲಿ ನಿಮಗೆ ಗೂಸ್ ಬಂಪ್ಸ್ ಮೂಮೆಂಟ್ ಬರುತ್ತದೆ ಎಂದು ಚಿತ್ರದ ಕೆಲವು ಸ್ವಾರಸ್ಯಕರ ಸನ್ನಿವೇಶಗಳನ್ನು ಬಿಚ್ಚಿಟ್ಟಿರು.

ನಾಯಕಿ ಅಮೃತಾ ಅಯ್ಯರ್ ಮಾತನಾಡಿ, ಹನುಮಾನ್ ನಮ್ಮ ದೇವರು. ಇದೊಂದು ಫ್ಯಾಂಟಸಿ ಮೂವೀ. ಇದು ಹನುಮಾನ್ ಬಗ್ಗೆ ಅಲ್ಲ‌. ಒಂದು ಹುಡುಗನಿಗೆ ಹನುಮಾನ್ ಪವರ್ ಬಂದಾಗ ಏನಾಗುತ್ತದೆ ಅನ್ನೋದು ಚಿತ್ರದ ಕಥಾ ಹಂದರ. ಚಿತ್ರದ ಕಂಟೆಂಟ್ ತುಂಬಾ ಚೆನ್ನಾಗಿದೆ. ಈ ತರ ಸಿನಿಮಾ ಥಿಯೇಟರ್​​ನಲ್ಲಿ ನೋಡಬೇಕು. ಪ್ರಶಾಂತ್ ಸರ್ ಕ್ರಿಯೇಟಿವ್ ಆಗಿ ಡೈರೆಕ್ಟ್ ಮಾಡಿದ್ದಾರೆ. ಕನ್ನಡದಲ್ಲಿ ಕೆಆರ್​ಜಿ ರಿಲೀಸ್ ಮಾಡುತ್ತಿದೆ ಎಂದರು.

ಹನುಮಾನ್ ಚಿತ್ರ ತಂಡ
ಹನುಮಾನ್ ಚಿತ್ರ ತಂಡ

ಬಳಿಕ ನಿರ್ಮಾಪಕಿ ಚೈತನ್ಯ ರೆಡ್ಡಿ ಮಾತನಾಡಿ, ಸಿನಿಮಾದಲ್ಲಿ ಹನುಮಾನ್ ಪವರ್ ಬಗ್ಗೆ ತೋರಿಸಲಾಗಿದೆ. ಬಿಗ್ ಬಜೆಟ್​​ನಲ್ಲಿ ಸಿನಿಮಾ ಮಾಡಲಾಗಿದೆ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಟಪ್ ಶ್ರೀನು, ಸತ್ಯ ಒಳಗೊಂಡ ಸ್ಟಾರ್ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ. ಯುವ ಹಾಗೂ ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ ನೀಡಿದರೆ, ದಶರಧಿ ಶಿವೇಂದ್ರ ಕ್ಯಾಮರಾ ವರ್ಕ್ ಇದೆ. ಎಸ್ ಬಿ ರಾಜು ತಲರಿ ಅವರ ಸಂಕಲನ ಚಿತ್ರಕ್ಕಿದೆ.

ಹನುಮಾನ್ ಚಿತ್ರ ತಂಡ
ಹನುಮಾನ್ ಚಿತ್ರ ತಂಡ

ಪ್ಯಾನ್ ವರ್ಲ್ಡ್ ಲೆವೆಲ್​​ನಲ್ಲಿ ಹನುಮಾನ್ ಸಿನಿಮಾ ರಿಲೀಸ್ ಆಗುತ್ತಿದೆ. ಭಾರತೀಯ ವಿವಿಧ ಭಾಷೆಗಳಾದ ತೆಲುಗು, ಕನ್ನಡ, ಮರಾಠಿ, ತಮಿಳು, ಮಲಯಾಳಂ, ಇಂಗ್ಲೀಷ್, ಸ್ಪ್ಯಾನಿಶ್, ಚೈನೀಸ್, ಜಪಾನೀಸ್ ಮತ್ತು ಕೊರಿಯನ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಸಂಕ್ರಾಂತಿ ಹಬ್ಬಕ್ಕೆ ವಿಶ್ವದಾದ್ಯಂತ ಹನುಮಾನ್ ದರ್ಶನ ಆಗಲಿದೆ.

ಇದನ್ನೂ ಓದಿ: ಓಂ 2 ಬರುತ್ತೆ ಅಂದ್ರೆ ನಾನು ಎಷ್ಟು ವರ್ಷ ಬೇಕಾದರೂ ಕಾಯುತ್ತಿನಿ: ಶಿವರಾಜ್ ಕುಮಾರ್

Last Updated : Jan 11, 2024, 7:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.