ಜೈಪುರ( ರಾಜಸ್ಥಾನ: ಬಾಲಿವುಡ್ನ ಬಾಲಕಲಾವಿದೆ ಮತ್ತು ಕನ್ನಡ ತೆಲುಗು ನಟಿಯಾಗಿರುವ ನಟಿ ಹನ್ಸಿಕಾ ಮೋಟ್ವಾನಿ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಇಲ್ಲಿನ 450 ವರ್ಷದ ಪುರಾತನ ಮಂಡೋಟಾ ಕೋಟೆಯಲ್ಲಿ ಉದ್ಯಮಿ ಸೂಹೈಲ್ ಕಥುರಿಯಾ ಅವರನ್ನು ಕುಟುಂಬ ಸಮ್ಮಖದಲ್ಲಿ ಅವರು ಮದುವೆಯಾದವರು.
450 ವರ್ಷದ ಕೋಟೆಯಲ್ಲಿ ಹನ್ಸಿಕಾ ಮದುವೆ ಸಂಭ್ರಮ ಡಿಸೆಂಬರ್ 1ರಿಂದಲೇ ಆರಂಭವಾಗಿತ್ತು. ಐದು ದಿನಗಳ ಕಾಲ ಮದುವೆ ಶಾಸ್ತ್ರ, ಮೆಹಂದಿ, ಹಳದಿ ಶಾಸ್ತ್ರ, ಸಂಗೀತ ಕಾರ್ಯಕ್ರಮಗಳ ಅದ್ದೂರಿಯಾಗಿ ನಡೆದವು. ಹನ್ಸಿಕಾ ಮೋಟ್ವಾನಿ ತಾಯಿ, ಒಡಹುಟ್ಟಿದವರು ಸೇರಿದಂತೆ ಎರಡು ಕುಟುಂಬದ ಸಂಬಂಧಿಕರು ಈ ಮದುವೆಗೆ ಸಾಕ್ಷಿಯಾದರು.
ಇದನ್ನೂ ಓದಿ: ರಾಜಸ್ಥಾನದ ಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹನ್ಸಿಕಾ ಮೋಟ್ವಾನಿ: ಮದುವೆ ವಿಡಿಯೋ