ಅಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಡಾಲಿ ಧನಂಜಯ್ ಅಭಿನಯದ 25ನೇ ಚಿತ್ರ 'ಗುರುದೇವ್ ಹೊಯ್ಸಳ' ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಖತ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಎಂದೆಂದು ಕಂಡರಿಯದ ಟಫ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಧನಂಜಯ್ ಮಿಂಚಿದ್ದಾರೆ. ಮಾಸ್ ಜೊತೆಗೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ಇದಾಗಿದೆ.
ವಿಜಯ್ ಕಿರಗಂದೂರು ಅರ್ಪಿಸುವ ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ವಿಜಯ್ ಅವರ ನಿರ್ದೇಶನವಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಖಡಕ್ ಡೈಲಾಗ್ಗಳನ್ನು ಮಾಸ್ತಿ ಅವರು ಬರೆದಿದ್ದು, ಕಾರ್ತಿಕ್ ಅವರ ಛಾಯಗ್ರಹಣ ಮತ್ತು ದೀಪು ಎಸ್ ಕುಮಾರ್ ಅವರ ಸಂಕಲ ಇದೆ.
ನಿರೀಕ್ಷೆ ಮೂಡಿಸಿರುವ ಚಿತ್ರ: ಈ ಚಿತ್ರದ ಅದ್ದೂರಿ ಟ್ರೈಲರ್ ಅನ್ನು ಕಳೆದ ವಾರ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು. ಈಗಾಗಲೇ ಟೀಸರ್, ಹಾಡು, ಟ್ರೈಲರ್ಗಳಿಂದ ಸಿನಿಮಾ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ಕಾತುರಗೊಂಡಿದ್ದಾರೆ. ಈಗಾಗಲೇ ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳು ಸಾಕಷ್ಟು ಹೆಚ್ಚಿದೆ. ಚಿತ್ರದಲ್ಲಿ ಕರ್ನಾಟಕ ಭಾಷೆಯ ಸೊಗಡು ಹೆಚ್ಚಿದ್ದು, ಬಹುತೇಕ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ಆಗಿದೆ.
ಅದ್ದೂರಿ ತಾರಾಗಣ: ಧನಂಜಯ್ ಅವರಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್, ರಘು ಶಿವಮೊಗ್ಗ, ಅನಿರುದ್ಧ್ ಭಟ್, ಮಯೂರಿ ನಟರಾಜ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಈ 'ಗುರುದೇವ್ ಹೊಯ್ಸಳ' ಚಿತ್ರದ ಶೀರ್ಷಿಕೆ ಮೊದಲು ಕೇವಲ 'ಹೊಯ್ಸಳ' ಎಂದು ಇತ್ತು. ಬೇರೆ ಒಂದು ಚಿತ್ರ ಇದೇ ಹೆಸರಿನಲ್ಲಿ ನಿರ್ಮಾಣ ಆಗುತ್ತಿರುವ ಹಿನ್ನೆಲೆ ಸಿನಿಮಾದ ಹೆಸರನ್ನು 'ಗುರುದೇವ್ ಹೊಯ್ಸಳ' ಎಂಬುದಾಗಿ ಮರುನಾಮಕರಣ ಮಾಡಲಾಗಿದೆ
- " class="align-text-top noRightClick twitterSection" data="">
ಲೈವ್ ಬಂದ ರಾಣಿ- ಧನಂಜಯ್: ಈ ಚಿತ್ರ ಬಿಡುಗಡೆಗೆ ಮುನ್ನ ಇಂದು ಅವರು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಲೈವ್ ಬಂದಿದ್ದಾರೆ. ಇದೇ ಸೋಮವಾರದಿಂದ ಅಂದರೆ ಏಪ್ರಿಲ್ 3ರಿಂದ ಆರಂಭವಾಗಲಿರುವ ರಾಣಿ ಸೀರಿಯಲ್ ತಂಡದ ಜೊತೆಗೆ ಅವರು ಲೈವ್ ನಡೆಸಿ, ಶುಭ ಹಾರೈಸಿದರು.
ಪ್ರಶಾಂತ್ ನಿರ್ದೇಶನದಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ ಶ್ರವಣ ದೋಷ ಇರುವ ಹಳ್ಳಿಯಲ್ಲಿ ಬೆಳೆದ ಹುಡುಗಿಯ ಕಥೆಯನ್ನು ಈ ಧಾರಾವಾಹಿ ಒಳಗೊಂಡಿದೆ. ಕಿವಿ ಕೇಳದ ಹುಡುಗಿ ಕುಟುಂಬ ಸದಸ್ಯರ ಸಾವಿಗೆ ಕಾರಣರಾದವರ ಹುಡುಕುತ್ತಿರುತ್ತಾಳೆ. ಈ ವೇಳೆ ವಿದೇಶದಲ್ಲಿ ಓದಿ ಬಂದ ಕಥಾನಾಯಕ ಈ ಹಳ್ಳಿ ಹುಡುಗಿಯ ಪ್ರೇಮದಲ್ಲಿ ಸಿಲುಕುತ್ತಾನೆ. ಆತನ ತಾಯಿಯೇ ಆಕೆಯ ಕುಟುಂಬದವರನ್ನು ಕಳೆದುಕೊಳ್ಳಲು ಕಾರಣ ಎಂದು ತಿಳಿದಾಗ ಏನಾಗುತ್ತದೆ ಎಂಬುದು ಕಥೆಯ ಹಂದರ ಆಗಿದೆ.
ಇದನ್ನೂ ಓದಿ: ಮಾಡದ ಅಪರಾಧಕ್ಕೆ ನಾನೇಕೆ ನರಳಬೇಕು?: ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ