ETV Bharat / entertainment

ಬಹುನಿರೀಕ್ಷಿತ ಗುಂಟೂರ್ ಕಾರಂನ 'ಓ ಮೈ ಬೇಬಿ' ಸಾಂಗ್​ ರಿಲೀಸ್​

author img

By ETV Bharat Karnataka Team

Published : Dec 13, 2023, 7:51 PM IST

'ಗುಂಟೂರ್ ಕಾರಂ' ಸಿನಿಮಾದ ಬಹುನಿರೀಕ್ಷಿತ 'ಓ ಮೈ ಬೇಬಿ' ಸಾಂಗ್​ ಅನಾವರಣಗೊಂಡಿದೆ.

Guntur Kaaram song Oh My Baby
ಗುಂಟೂರ್ ಕಾರಂನ 'ಓ ಮೈ ಬೇಬಿ' ಸಾಂಗ್​

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಗುಂಟೂರ್ ಕಾರಂ'. ಸಂಕ್ರಾಂತಿ ಸಂದರ್ಭ ಬಿಡುಗಡೆಯಾಗಲು ಸಜ್ಜಾಗಿರುವ 'ಗುಂಟೂರು ಕಾರಂ' ತಂಡ ಪ್ರೇಕ್ಷಕರನ್ನು ಸೆಳೆಯೋ ಕೆಲಸ ಮುಂದುವರಿಸಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾದ ಪ್ರಚಾರ ಜೋರಾಗೇ ನಡೆಯುತ್ತಿದೆ. ಚಿತ್ರ ತಯಾರಕರು ಇಂದು ಚಿತ್ರದ ಎರಡನೇ ಹಾಡನ್ನು ಅನಾವರಣಗೊಳಿಸಿದ್ದಾರೆ.

  • " class="align-text-top noRightClick twitterSection" data="">

ಓ ಮೈ ಬೇಬಿ ಸಾಂಗ್​ ರಿಲೀಸ್​: ಓ ಮೈ ಬೇಬಿ ಶೀರ್ಷಿಕೆಯ ಹಾಡು ಡಿಸೆಂಬರ್ 13 ರಂದು ಬಿಡುಗಡೆ ಆಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್​​​ ಕಟ್​ ಹೇಳಿರುವ ಈ ಸಿನಿಮಾದಲ್ಲಿ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಗೆಲ್ಲುವ ವಿಶ್ವಾಸ: ಸುಮಧುರ ಹಾಡನ್ನು ಎಸ್ ಥಮನ್ ಸಂಯೋಜಿಸಿದ್ದಾರೆ. ಶಿಲ್ಪಾ ರಾವ್ ದನಿ ನೀಡಿದ್ದಾರೆ. ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯವಿರುವ ಓ ಮೈ ಬೇಬಿ ಸಿನಿಮಾದ ಆಕರ್ಷಕ ಬಿಂದುವಾಗಿ ಗುರುತಿಸಿಕೊಂಡಿದೆ. ಹಾಡುಗಳು ಚಿತ್ರದ ಪ್ರಚಾರ ತಂತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಹಾಡುಗಳು ಸಿನಿಪ್ರಿಯರ ಮನಗೆದ್ದು, ಸೋಷಿಯಲ್​ ಮೀಡಿಯಾಗಳಲ್ಲಿ ಸಖತ್​ ಸದ್ದು ಮಾಡಿದ್ರೆ ಆ ಸಿನಿಮಾ ನೋಡೋ ಪ್ರೇಕ್ಷಕರ ಸಂಖ್ಯೆ ಹೆಚ್ಚೋದೊಂತು ಪಕ್ಕಾ. ಹೀಗೆ ಟೀಸರ್​, ಟ್ರೇಲರ್, ಹಾಡುಗಳು ಚಿತ್ರದ ಪ್ರಚಾರದ ಪ್ರಮುಖಾಂಶಗಳು. ಸದ್ಯ ಗುಂಟೂರು ಕಾರಂನ ಹಾಡುಗಳು ಸಖತ್​ ಸದ್ದು ಮಾಡುತ್ತಿದ್ದು, ಸಿನಿಮಾ ಗೆಲ್ಲುವ ವಿಶ್ವಾಸ ಅಭಿಮಾನಿಗಳು ಮತ್ತು ಚಿತ್ರತಂಡದ್ದು.

ಇದನ್ನೂ ಓದಿ: ಸ್ಯಾಂಡಲ್​ವುಡ್ ಪಯಣ 2023: ಕನ್ನಡ ಚಿತ್ರಗಳು ಪ್ರೇಕ್ಷಕರನ್ನು ತಲುಪಿತೇ?!

ಓ ಮೈ ಬೇಬಿ ಹಾಡಿಗೂ ಮುನ್ನ ಚಿತ್ರ ತಯಾರಕರು ದಮ್ ಮಸಾಲಾ ಶೀರ್ಷಿಕೆಯ ಹಾಡನ್ನು ಬಿಡುಗಡೆ ಮಾಡಿದ್ದರು. ದಮ್​ ಮಸಾಲಾ ಹಾಡು ಕೂಡ ಅನೇಕರ ಮನ ತಲುಪಿತು. ಈ ಹೈ ಎನರ್ಜಿಟಿಕ್ ಟ್ರ್ಯಾಕ್ ಅನ್ನು ಥಮನ್ ಸಂಯೋಜಿಸಿದ್ದಾರೆ. ಸಂಗೀತ ಸಂಯೋಜಿಸಿದ ಥಮನ್ ಮತ್ತು ಸಂಜಿತ್ ಹೆಗ್ಡೆ ದನಿ ನಿಡಿದ್ದಾರೆ. ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದರೆ, ಚಿತ್ರದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಹಾಡಿಗೆ ರ್ಯಾಪ್​ ವರ್ಷನ್​ ಸೇರಿಸಿದ್ದಾರೆ.

ಇದನ್ನೂ ಓದಿ: ಕಿರಿಕ್​ ಪಾರ್ಟಿ ಬಳಿಕ ಬ್ಯಾಚುಲರ್ ಪಾರ್ಟಿ: ಈ ಸಲ ಪಾರ್ಟಿ ಜೋರು! ಅಂತಿದ್ದಾರೆ ರಕ್ಷಿತ್​ ಶೆಟ್ಟಿ ಟೀಮ್

ಬಹುನಿರೀಕ್ಷಿತ ಗುಂಟೂರು ಕಾರಂ ಮುಂದಿನ ಸಂಕ್ರಾಂತಿ ಸಂದರ್ಭ ತೆರೆ ಕಾಣಲಿದೆ. 2024 ರ ಜನವರಿ 12 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮಹೇಶ್ ಬಾಬು, ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ಅವರಲ್ಲದೇ, ಚಿತ್ರದಲ್ಲಿ ಜಗಪತಿ ಬಾಬು, ರಮ್ಯಾ ಕೃಷ್ಣನ್, ಜಯರಾಮ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್ ರಾಧಾ ಕೃಷ್ಣ ಅವರು ಹಾರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ಬ್ಯಾನರ್ ಅಡಿ ಚಿತ್ರವನ್ನು ನಿರ್ಮಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.