ETV Bharat / entertainment

'ಗುಂಟೂರು​ ಖಾರಂ'ನ 'ಓ ಮೈ ಬೇಬಿ' ಸಾಂಗ್​ ಪ್ರೋಮೋ ಔಟ್: ಪೂರ್ಣ ಹಾಡು ಯಾವಾಗ? - ಈಟಿವಿ ಭಾರತ ಕನ್ನಡ

Oh My Baby promo: ಮಹೇಶ್​ ಬಾಬು ನಟನೆಯ 'ಗುಂಟೂರು​ ಖಾರಂ' ಚಿತ್ರದ 'ಓ ಮೈ ಬೇಬಿ' ಸಾಂಗ್​ ಪ್ರೋಮೋ ಬಿಡುಗಡೆಯಾಗಿದೆ

Oh My Baby promo out
'ಗುಂಟೂರು​ ಖಾರಂ'ನ 'ಓ ಮೈ ಬೇಬಿ' ಸಾಂಗ್​ ಪ್ರೋಮೋ ಔಟ್: ಪೂರ್ಣ ಹಾಡು ಯಾವಾಗ?
author img

By ETV Bharat Karnataka Team

Published : Dec 11, 2023, 6:07 PM IST

ಟಾಲಿವುಡ್​ ಮೋಸ್ಟ್​ ಹ್ಯಾಂಡ್ಸಮ್​ ನಟ ಮಹೇಶ್​ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಕಾಂಬೋದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಗುಂಟೂರು ಖಾರಂ'. ಈ ಚಿತ್ರದ ಮೇಲೆ ಸಿನಿ ಪ್ರೇಮಿಗಳು ಮುಗಿಲೆತ್ತರದಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್​ಗಳು ಹಾಗೂ 'ದಮ್​ ಮಸಾಲ' ಹಾಡಿನ ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ. ಇದೀಗ ಚಿತ್ರದ ಎರಡನೇ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ. ಡಿಸೆಂಬರ್​ 13, ಬುಧವಾರದಂದು ಪೂರ್ಣ ಹಾಡು ಅನಾವರಣಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ.

  • " class="align-text-top noRightClick twitterSection" data="">

ಈ ಸಿನಿಮಾವನ್ನು ಕಮರ್ಷಿಯಲ್​ ಆಗಿ ಮಾತ್ರವಲ್ಲದೇ ಸಂಗೀತದಿಂದಲೂ ಹಿಟ್​ ಮಾಡಲು ಚಿತ್ರತಂಡ ವಿಶೇಷ ಕಾಳಜಿ ವಹಿಸಿದೆ. ಅದರ ಭಾಗವಾಗಿ ಕಳೆದ ತಿಂಗಳು ಮೊದಲ ಹಾಡನ್ನು 'ದಮ್​ ಮಸಾಲ' ಬಿಡುಗಡೆ ಮಾಡಿದ್ದ ಮೂವಿಯುನಿಟ್​ ಇದೀಗ ಎರಡನೇ ಹಾಡಿನ ಪ್ರೋಮೋ ಬಿಡುಗಡೆ ಮಾಡಿದೆ. ಸಂಗೀತ ಸೆನ್ಸೇಷನ್​ ಎಸ್​ ಎಸ್​ ಥಮನ್​ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇವರಿಬ್ಬರ ಕಾಂಬೋದಲ್ಲಿ ಈಗಾಗಲೇ ಅನೇಕ ಸಾಂಗ್​ಗಳು ಬಂದಿದ್ದು ಎಲ್ಲವೂ ಸೂಪರ್​ ಹಿಟ್​ ಆಗಿದೆ.

ಚಿತ್ರದಲ್ಲಿ ಒಟ್ಟು 4 ರಿಂದ 5 ಹಾಡುಗಳು ಮತ್ತು ಎರಡು ಥೀಮ್​ ಸಾಂಗ್​ ಇರುವಂತೆ ಸಂಗೀತ ನಿರ್ದೇಶಕ ಥಮನ್​ ನೋಡಿಕೊಂಡಿದ್ದಾರೆ. ಒಂದು ಥೀಮ್​ ಸಾಂಗ್​ ಮತ್ತು ಡ್ಯುಯೆಟ್​ ಸಾಂಗ್​ ಎಂಬುದಾಗಿ ಎರಡು ಪ್ರಮುಖ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಅದರಂತೆ ಥೀಮ್​ ಸಾಂಗ್​ ಈಗಾಗಲೇ ಅನಾವರಣಗೊಂಡಿದ್ದು, ಇದೀಗ ಡ್ಯುಯೆಟ್​ ಸಾಂಗ್​ ಬುಧವಾರ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ ಈ ಹಾಡುಗಳಲ್ಲಿ ಮಹೇಶ್​ ಬಾಬು ಅವರ ಕ್ಯಾರೆಕ್ಟರೈಸೇಶನ್​ ಅನ್ನು ಎತ್ತಿ ಹಿಡಿಯುವಂತೆ ಚಿತ್ರತಂಡ ನೋಡಿಕೊಂಡಿದೆ.

ಮಹೇಶ್​ ಬಾಬು ಅವರ 28ನೇ ಸಿನಿಮಾವಾದ 'ಗುಂಟೂರು ಖಾರಂ' ನಾನಾ ಕಾರಣಗಳಿಂದ ವಿಳಂಬವಾಗುತ್ತಾ ಬಂತು. ಅಂತಿಮವಾಗಿ, ಡಿಸೆಂಬರ್ ಮೊದಲ ವಾರದೊಳಗೆ ಶೂಟಿಂಗ್​​ ಪೂರ್ಣಗೊಳಿಸುವ ಗುರಿಯನ್ನು ಚಿತ್ರತಂಡ ಹೊಂದಿದೆ. ಇದು ಯಶಸ್ವಿ ನಟ-ನಿರ್ದೇಶಕ ಜೋಡಿ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಕಾಂಬೋದ ಬಹುನಿರೀಕ್ಷಿತ ಚಿತ್ರ. ದಿ ಮೋಸ್ಟ್ ಎಕ್ಸ್​​ಪೆಕ್ಟೆಡ್​​​ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾದಲ್ಲಿ ಮಹೇಶ್​​ ಬಾಬು ಜೊತೆ ಜಯರಾಮ್, ಶ್ರೀಲೀಲಾ, ಮೀನಾಕ್ಷಿ ಚೌಧರಿ, ಜಗಪತಿ ಬಾಬು ಮತ್ತು ರಮ್ಯಾ ಕೃಷ್ಣ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರಕ್ಕೆ ಅರಂಭದಲ್ಲಿ ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಆದ್ರೆ ಶೂಟಿಂಗ್​​ಗೆ ಡೇಟ್ಸ್ ಕೊರತೆ ಹಿನ್ನೆಲೆಯಲ್ಲಿ ನಟಿ ಪ್ರಾಜೆಕ್ಟ್​​​ನಿಂದ ದೂರ ಸರಿಯಬೇಕಾಯಿತು. ಪರಿಣಾಮ, ಕನ್ನಡತಿ ಶ್ರೀಲೀಲಾ ಮೈನ್​ ಲೀಡ್​ ರೋಲ್ ಆರಿಸಿಕೊಂಡರೆ, ಮೀನಾಕ್ಷಿ ಚೌಧರಿ ಎರಡನೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಬಹುತೇಕ ಕೊನೆ ಹಂತಕ್ಕೆ ತಲುಪಿದೆ. ಎಸ್ ತಮನ್ ಸಂಗೀತ ಸಂಯೋಜನೆ, ರವಿ ಕೆ.ಚಂದ್ರನ್ ಅವರ ಕ್ಯಾಮರಾ ವರ್ಕ್ ಚಿತ್ರಕ್ಕಿದೆ. ಮುಂದಿನ ವರ್ಷ ಜನವರಿ 12 ರಂದು ಸಂಕ್ರಾಂತಿ ಉಡುಗೊರೆಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ: ಮುಂದಿನ ವರ್ಷ ತೆರೆ ಕಾಣಲಿರುವ ಸೂಪರ್​ಸ್ಟಾರ್​ ನಟರ ಪ್ಯಾನ್​ ಇಂಡಿಯಾ ಸಿನಿಮಾಗಳಿವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.