ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ತೆಲುಗು ಆ್ಯಕ್ಷನ್ ಸಿನಿಮಾ 'ಗುಂಟೂರ್ ಖಾರಂ' ಮತ್ತು ತೇಜ ಸಜ್ಜಾ ಪ್ರಮುಖ ಪಾತ್ರ ನಿರ್ವಹಿಸಿರುವ 'ಹನುಮಾನ್' ಎರಡೂ ಕೂಡ ಇದೇ ಜನವರಿ 12 ರಂದು ಚಿತ್ರಮಂದಿರ ಪ್ರವೇಶಿಸಿದೆ. ಬಾಕ್ಸ್ ಆಫೀಸ್ ಫೈಟ್ ಹೊರತಾಗಿಯೂ ಎರಡೂ ಸಿನಿಮಾಗಳು ಉತ್ತಮ ಪ್ರದರ್ಶನ ನೀಡಿವೆ. ಈವರೆಗೆ ಚಿತ್ರಗಳು ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿವೆ. ಹೆಚ್ಚಾಗಿ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಬಿಗ್ ಫೈಟ್ ನಡುವೆಯೂ ತೆಲುಗಿನ 'ಹನುಮಾನ್' ಉತ್ತಮ ಪ್ರದರ್ಶನ ನೀಡುತ್ತಿದ್ದು, ಗುಂಟೂರು ಖಾರಮ್ ಅಂಕಿಅಂಶದಲ್ಲಿ ಕೊಂಚ ಇಳಿಕೆ ಕಂಡಿದೆ.
- " class="align-text-top noRightClick twitterSection" data="">
ಹನುಮಾನ್ ಕಲೆಕ್ಷನ್: ವಾರದ ದಿನಗಳಲ್ಲಿಯೂ ಸಹ ತೇಜ ಸಜ್ಜಾ ಅಭಿನಯದ 'ಹನುಮಾನ್' ಜನಪ್ರಿಯವಾಗಿ ಉಳಿದುಕೊಂಡಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಪ್ರಶಾಂತ್ ವರ್ಮಾ ನಿರ್ದೇಶನದ ಈ ಚಿತ್ರ ಮಂಗಳವಾರ ಭಾರತದಲ್ಲಿ 12.75 ಕೋಟಿ ರೂ. ಗಳಿಸಿದೆ. ಸೋಮವಾರದ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 15.2 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ವಾರದ ದಿನಗಳಲ್ಲಿಯೂ ತೆಲುಗು ಚಿತ್ರ ಎರಡಂಕಿಯ ಕಲೆಕ್ಷನ್ ಮಾಡುತ್ತಿದೆ.
'ಹನುಮಾನ್'ನ ಐದು ದಿನಗಳ ಒಟ್ಟು ಕಲೆಕ್ಷನ್ 68.75 ಕೋಟಿ ರೂ. ಚಿತ್ರತಯಾರಕರ ಪ್ರಕಾರ, ಹನುಮಾನ್ ಮಂಗಳವಾರದ ಹೊತ್ತಿಗೆ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ 100 ಕೋಟಿ ರೂ. ಗಳಿಸಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಮಾಹಿತಿಯನ್ನು ಚಲನಚಿತ್ರ ನಿರ್ಮಾಣ ಕಂಪನಿ ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಎಕ್ಸ್ ಪೇಜ್ನಲ್ಲಿ ಶೇರ್ ಮಾಡಿದೆ. ಚಿತ್ರದಲ್ಲಿ ವಿನಯ್ ರೈ, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಅಮೃತಾ ಅಯ್ಯರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: '12th ಫೇಲ್' ಸಿನಿಮಾ ಹೊಗಳಿದ ದೀಪಿಕಾ ಪಡುಕೋಣೆ
ಗುಂಟೂರ್ ಖಾರಂ ಕಲೆಕ್ಷನ್: ಜನವರಿ 12 ರಂದೇ ತೆರೆಕಂಡ ಗುಂಟೂರ್ ಖಾರಂ ಜಾಗತಿಕವಾಗಿ ಅದ್ಭುತ ಅಂಕಿ ಅಂಶಗಳೊಂದಿಗೆ ಪ್ರಯಾಣ ಆರಂಭಿಸಿತು. ಬಳಿಕ ಭಾರತದಲ್ಲಿ, ಶನಿವಾರದಂದು 13.55 ಕೋಟಿ ರೂ., ಭಾನುವಾರ 14.05 ಕೋಟಿ ರೂ., ಸೋಮವಾರದಂದು 14.1 ಕೋಟಿ ರೂ. ಗಳಿಸಿದ ಸಿನಿಮಾ ಮಂಗಳವಾರ 11.50 ಕೋಟಿ ರೂ. ಕಲೆಕ್ಷನ್ ಮಾಡಿದೆ. ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಶ್ರೀಲೀಲಾ, ಜಗಪತಿ ಬಾಬು, ಮೀನಾಕ್ಷಿ ಚೌಧರಿ, ಜಯರಾಮ್, ಪ್ರಕಾಶ್ರಾಜ್, ಸುನೀಲ್ ಮತ್ತು ರಮ್ಯಾ ಕೃಷ್ಣನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇದನ್ನೂ ಓದಿ: ಗದಗ ಕಟೌಟ್ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಯಶ್ ತಂಡ