ETV Bharat / entertainment

ಆ್ಯಂಗ್ರಿ ಯಂಗ್​​ ಮ್ಯಾನ್​ಗೆ ಇಂದು 81ರ ಸಂಭ್ರಮ... ನಡುರಾತ್ರಿಯಲ್ಲೇ ಅಭಿಮಾನಿಗಳ ಶುಭ ಹಾರೈಕೆ! - ಅಭಿಮಾನಿಗಳತ್ತ ಕೈ ಬೀಸಿದ ಬಿಗ್​ ಬಿ

ಅಮಿತಾಬ್ ಬಚ್ಚನ್ ತಮ್ಮ 81 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಮುಂಬೈನಲ್ಲಿರುವ ಅವರ ನಿವಾಸ 'ಜಲ್ಸಾ'ದ ಹೊರಗೆ ಜಮಾಯಿಸಿದ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ಕೋರಿದರು. ಈ ವೇಳೆ ಅಭಿಮಾನಿಗಳತ್ತ ಕೈ ಬೀಸಿದ ಬಿಗ್​ ಬಿ, ಅವರಿಗೆಲ್ಲ ಕೃತಜ್ಞತೆ ಸಲ್ಲಿಸಿದರು.

greets his fans who have gathered outside his residence 'Jalsa
ಆ್ಯಂಗ್ರಿ ಯಂಗ್​​ ಮ್ಯಾನ್​ಗೆ ಇಂದು 81ರ ಸಂಭ್ರಮ
author img

By ETV Bharat Karnataka Team

Published : Oct 11, 2023, 7:36 AM IST

Updated : Oct 11, 2023, 10:27 AM IST

ಆ್ಯಂಗ್ರಿ ಯಂಗ್​​ ಮ್ಯಾನ್​ಗೆ ಇಂದು 81ರ ಸಂಭ್ರಮ

ಇಂದು ಭಾರತೀಯ ಚಿತ್ರರಂಗದ ಎವರ್​​​ಗ್ರೀನ್​ ಹೀರೋ ಬಿಗ್​ ಬಿ ಅಮಿತಾಬ್​ ಬಚ್ಚನ್​ ಅವರ 81ನೇ ಹುಟ್ಟುಹಬ್ಬ.. ಈ ನಿಮಿತ್ತ ಅವರ ಸೊಸೆ, ಮೊಮ್ಮಗಳು, ಮಗಳು ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಕೋಟ್ಯಂತರ ಅಭಿಮಾನಿಗಳು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.
ಅಮಿತಾಭ್ ಬಚ್ಚನ್ ಇಂದು 81 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಅವರ ಅದ್ಭುತವಾದ ಕೆಲಸ ಮತ್ತು ನಟನೆಯಿಂದ ಅಪ್ರತಿಮವಾಗಿ ಉಳಿದಿದ್ದಾರೆ. ಅವರ ಅಭಿಮಾನಿಯಲ್ಲದವರು ಯಾರೂ ಇಲ್ಲವೇ ಇಲ್ಲ ಅಂತಾ ಹೇಳಬಹುದು. ಬಿಗ್ ಬಿ ತಮ್ಮ ಹುಟ್ಟುಹಬ್ಬದ ಆಚರಣೆಯನ್ನು ತಮ್ಮ ನಿವಾಸ ಜಲ್ಸಾದ ಹೊರಗೆ ಅಭಿಮಾನಿಗಳಿಗೆ ಶುಭಾಶಯ ಕೋರುವ ಮೂಲಕ ಪ್ರಾರಂಭಿಸಿದ್ದಾರೆ. ಗಡಿಯಾರವು 12 ಗಂಟೆ ಹೊಡೆಯುತ್ತಿದ್ದಂತೆ, ಅವರು ಅಲ್ಲಿ ಸೇರಿದ್ದ ಎಲ್ಲ ಅಭಿಮಾನಿಗಳಿಗೆ, ಹಿತೈಸಿಗಳಿಗೆ ಕೃತಜ್ಞತೆ ಸಲ್ಲಿಸಿ ಅವರತ್ತ ಕೈ ಬೀಸಿದರು.

ಅಭಿಷೇಕ್ ಬಚ್ಚನ್​ ಪ್ರಸ್ತುತ ಶೂಜಿತ್ ಸಿರ್ಕಾರ್ ಅವರ ಮುಂದಿನ ಚಿತ್ರೀಕರಣದಲ್ಲಿದ್ದಾರೆ. ಹೀಗಾಗಿ ಅವರು, ತಂದೆ ಅಮಿತಾಬ್​ ಬಚ್ಚನ್​ ಹುಟ್ಟುಹಬ್ಬದ ಸಂದರ್ಭದಲ್ಲಿ ಹಾಜರಿರಲಿಲ್ಲ. ಆದರೆ ಅವರ ಪತ್ನಿ ಐಶ್ವರ್ಯ ರೈ ಬಚ್ಚನ್​ ಜತೆಗಿದ್ದರು.

ಅಮಿತಾಬ್​ ಅಕ್ಟೋಬರ್ 11, 1942 ರಂದು ಅಲಹಾಬಾದ್​ನಲ್ಲಿ ಸಾಮಾಜಿಕ ಕಾರ್ಯಕರ್ತೆ ತೇಜಿ ಬಚ್ಚನ್ ಮತ್ತು ಪ್ರಖ್ಯಾತ ಹಿಂದಿ ಕವಿ ಹರಿವಂಶ್ ರೈ ಬಚ್ಚನ್ ದಂಪತಿಯ ಪುತ್ರರಾಗಿ ಜನಿಸಿದರು. ಬಿಗ್ ಬಿ ಒಬ್ಬ ನಟನಷ್ಟೇ ಅಲ್ಲ, ಅವರು ತಮ್ಮ ಹಲವು ಚಲನಚಿತ್ರಗಳಿಗೆ ಹಾಡುಗಳನ್ನೂ ಹಾಡಿ ತಮ್ಮ ಪ್ರತಿಭೆ ಅನಾವರಣ ಮಾಡಿದ್ದಾರೆ.

ಅನೇಕ ಸರ್ಕಾರಿ ಯೋಜನೆಗಳಿಗೆ ಜಾಹೀರಾತು ನೀಡುವ ಮೂಲಕ ಅದರ ಯಶಸ್ಸಿಗೂ ಕಾರಣೀಭೂತರಾಗಿದ್ದಾರೆ. ಜೊತೆಗೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 1984 ರಲ್ಲಿ ಪದ್ಮಶ್ರೀ, 2001 ರಲ್ಲಿ ಪದ್ಮಭೂಷಣ ಹಾಗೂ 2015 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದು ದೇಶದ ಮನೆ ಮಾತಾಗಿದ್ದಾರೆ.

ಬಿಗ್​​ ಬಿ ಅಮಿತಾಬ್​ ಬಚ್ಚನ್​ 1969 ರಲ್ಲಿ 'ಸಾತ್ ಹಿಂದುಸ್ತಾನಿ' ಚಿತ್ರದಲ್ಲಿ ಏಳು ನಾಯಕರಲ್ಲಿ ತಾವೂ ಸಹ ಒಬ್ಬರಾಗಿ ತಮ್ಮ ವೃತ್ತಿಜೀವನವನ್ನು ಶುರು ಮಾಡಿದರು. ಆದರೆ ಆರಂಭಿಕ ಅವಧಿಯಲ್ಲಿ ಬಚ್ಚನ್ ಅವರ ಅನೇಕ ಚಲನಚಿತ್ರಗಳಿಗೆ ಅಷ್ಟೆನು ಬೇಡಿಕೆ ಇರಲಿಲ್ಲ. 1973ರ 'ಜಂಜೀರ್' ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್​ನಲ್ಲಿ ಅವರು ಭಾರಿ ಮನ್ನಣೆ ಪಡೆದುಕೊಂಡರು. ಈ ಚಿತ್ರದಲ್ಲಿ ಅವರು ಇನ್ಸ್​ಪೆಕ್ಟರ್​ ವಿಜಯ್ ಖನ್ನಾ ಪಾತ್ರ ನಿರ್ವಹಿಸಿದ್ದರು. ಅಮಿತಾಬ್ ಈ ಚಿತ್ರಕ್ಕಾಗಿ 'ಆಂಗ್ರಿ ಯಂಗ್ ಮ್ಯಾನ್' ಪ್ರಶಸ್ತಿಯನ್ನು ಪಡೆದುಕೊಂಡರು. ನಟಿ ಜಯ ಬಚ್ಚನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ನಂದಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಇದನ್ನು ಓದಿ: ನೆಟಿಜನ್ಸ್​ ತಲೆಗೆ ಹುಳ ಬಿಟ್ಟ ಬಿಗ್​ ಬಿ 'Arrested' ಪೋಸ್ಟ್​

Last Updated : Oct 11, 2023, 10:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.