ETV Bharat / entertainment

ಕಪ್ಪೆರಾಗ ಸಾಕ್ಷ್ಯಚಿತ್ರಕ್ಕೆ ಗ್ರೀನ್​ ಆಸ್ಕರ್​ ಪ್ರಶಸ್ತಿ: ಅಭಿನಂದನೆ ತಿಳಿಸಿದ ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Sep 30, 2023, 1:15 PM IST

Updated : Sep 30, 2023, 1:27 PM IST

Kapperaaga Documentary: ಪ್ರಶಾಂತ್ ಎಸ್. ನಾಯ್ಕ ನಿರ್ದೇಶನದ ಕಪ್ಪೆರಾಗ ಸಾಕ್ಷ್ಯಚಿತ್ರ ಗ್ರೀನ್​ ಆಸ್ಕರ್​ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ.

Green Oscar Award for Kapperaaga Documentary
ಕಪ್ಪೆರಾಗ ಸಾಕ್ಷ್ಯಚಿತ್ರ ಗ್ರೀನ್​ ಆಸ್ಕರ್​ ಪ್ರಶಸ್ತಿ

ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್​​ಗೆ ಹೆಚ್ಚು ಮಹತ್ವ ಕೊಡಲಾಗುತ್ತಿದೆ. ಹೊಸ ಬಗೆಯ ಕಥೆಗಳು ಮೂಡಿ ಬರುತ್ತಿವೆ. ಪ್ರೇಕ್ಷಕರ ಸದಭಿರುಚಿಗೆ ತಕ್ಕಂತ ಸಿನಿಮಾ, ಕಿರುಚಿತ್ರ, ಸಾಕ್ಷ್ಯ ಚಿತ್ರಗಳು ನಿರ್ಮಾಣಗೊಳ್ಳುತ್ತಿವೆ. ಕೇವಲ ಬಿಗ್​ ಸ್ಕ್ರೀನ್​ನಲ್ಲಿ ಬರುವ ಸಿನಿಮಾಗಳು ಮಾತ್ರವಲ್ಲದೇ ಕಿರುಚಿತ್ರ, ಸಾಕ್ಷ್ಯ ಚಿತ್ರಗಳು ಸಹ ಪ್ರೇಕ್ಷಕರ ಮನ ಗೆಲ್ಲುತ್ತಿವೆ. ಒಂದೊಳ್ಳೆ ಕಥೆ, ಸಂದೇಶ ಅದರಲ್ಲಿರುತ್ತವೆ ಅನ್ನೋದರಲ್ಲಿ ಯಾವುದೇ ಸಂದೇಹ ಇಲ್ಲ. ಇದೀಗ ಸಾಕ್ಷ್ಯಚಿತ್ರವೊಂದು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ.

  • ಪ್ರತಿಷ್ಠಿತ ಜಾಕ್ಸನ್ ವೈಲ್ಡ್ ಅವಾರ್ಡ್‌ಗೆ ಭಾಜನವಾಗಿರುವ ಕನ್ನಡದ ಮೊದಲ 'ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯು ಫಿಲಂ' ಕಪ್ಪೆರಾಗ ಚಿತ್ರತಂಡಕ್ಕೆ ಅಭಿನಂದನೆಗಳು. ಕರುನಾಡಿನ ಪ್ರತಿಭೆಗಳ ಪರಿಶ್ರಮದ ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಹೆಸರುವಾಸಿಯಾಗಿರುವ ಜಾಕ್ಸನ್ ವೈಲ್ಡ್ ಅವಾರ್ಡ್ ‌ನಂತ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತದ್ದು… pic.twitter.com/Y2vkZIliWW

    — CM of Karnataka (@CMofKarnataka) September 29, 2023 " class="align-text-top noRightClick twitterSection" data=" ">

ಕನ್ನಡದ ಸಾಕ್ಷ್ಯಚಿತ್ರಕ್ಕೆ ಗ್ರೀನ್ ಆಸ್ಕರ್: ಕುಂಬಾರ ಕಪ್ಪೆ ಕುರಿತು ನಿರ್ಮಾಣ ಆಗಿರುವ ಸಾಕ್ಷ್ಯಚಿತ್ರ 'ಕಪ್ಪೆರಾಗ'ಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದೀಗ ಜಾಕ್ಸನ್ ವೈಲ್ಡ್ ಮೀಡಿಯಾ ಪ್ರಶಸ್ತಿಯನ್ನು ಈ ಸಾಕ್ಷ್ಯಚಿತ್ರ ಮುಡಿಗೇರಿಸಿಕೊಂಡಿದೆ. ಜಾಕ್ಸನ್ ವೈಲ್ಡ್ ಮೀಡಿಯಾ ಅವಾರ್ಡ್, ಗ್ರೀನ್​ ಆಸ್ಕರ್​ ಎಂದೇ ಹೆಸರುವಾಸಿ. ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಕೂಡ ಹೌದು.

  • ಪಶ್ಚಿಮ ಘಟ್ಟದಲ್ಲಿ ಕಂಡುಬರುವ 'ಕುಂಬಾರ ಕಪ್ಪೆ' ಎಂಬ ನಿಶಾಚರಿ ಕಪ್ಪೆಯ ಕುರಿತು ಕನ್ನಡಿಗರು ನಿರ್ಮಿಸಿರುವ 'ಕಪ್ಪೆರಾಗ-ಕುಂಬಾರನ ಹಾಡು' ಸಾಕ್ಷ್ಯಚಿತ್ರ, ಗ್ರೀನ್ ಆಸ್ಕರ್ ಎಂದೇ ಹೆಸರಾದ ಪ್ರತಿಷ್ಟಿತ 'ಜ್ಯಾಕ್ಸನ್ ವೈಲ್ಡ್ ಮೀಡಿಯಾ' ಪ್ರಶಸ್ತಿಗೆ ಭಾಜನಾವಾಗಿದೆ.

    ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ಚಿತ್ರ ನಿರ್ಮಿಸಿದ ತಂಡಕ್ಕೆ ಅಭಿನಂದನೆಗಳು. pic.twitter.com/nQaF0nin91

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 30, 2023 " class="align-text-top noRightClick twitterSection" data=" ">

ಅಭಿನಂದನೆ ತಿಳಿಸಿದ ಸಿಎಂ ಸಿದ್ದರಾಮಯ್ಯ: ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಟ್ವೀಟ್​ ಮೂಲಕ ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ''ಪ್ರತಿಷ್ಠಿತ ಜಾಕ್ಸನ್ ವೈಲ್ಡ್ ಅವಾರ್ಡ್‌ಗೆ ಭಾಜನವಾಗಿರುವ ಕನ್ನಡದ ಮೊದಲ 'ವೈಲ್ಡ್ ಲೈಫ್ ಮ್ಯೂಸಿಕಲ್ ಡಾಕ್ಯು ಫಿಲಂ' ಕಪ್ಪೆರಾಗ ತಂಡಕ್ಕೆ ಅಭಿನಂದನೆಗಳು. ಕರುನಾಡಿನ ಪ್ರತಿಭೆಗಳ ಪರಿಶ್ರಮದ ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಹೆಸರುವಾಸಿಯಾಗಿರುವ ಜಾಕ್ಸನ್ ವೈಲ್ಡ್ ಅವಾರ್ಡ್ ‌ನಂತಹ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತದ್ದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಸಂಗತಿ. ಚಿತ್ರದ ನಿರ್ದೇಶಕ ಪ್ರಶಾಂತ್ ಎಸ್. ನಾಯ್ಕ ಮತ್ತು ಅವರ ತಂಡದ ಸಾಧನೆ ನಾಡಿನ ಯುವ ನಿರ್ದೇಶಕರಿಗೆ ಪ್ರೇರಣೆಯಾಗಲಿ. ಇಂಥ ಇನ್ನಷ್ಟು ಚಿತ್ರಗಳು ನಮ್ಮಲ್ಲಿ ಮೂಡಿಬಂದು, ಕನ್ನಡದ ಕಲರವ ಜಗದಗಲ ಮೊಳಗಲಿ ಎಂದು ಹಾರೈಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಕನ್ನಡದ ಕೀರ್ತಿ 'ಕಾಂತಾರ'ಕ್ಕೆ ಒಂದು ವರ್ಷ: ಬರಲಿದೆ ವರಾಹ ರೂಪಂ ವಿಡಿಯೋ ಸಾಂಗ್

ದಿನೇಶ್​ ಗುಂಡೂರಾವ್​​ ಟ್ವೀಟ್​: ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​​ ಕೂಡ ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್​ (ಹಿಂದಿನ ಟ್ವಿಟರ್​) ನಲ್ಲಿ ಪ್ರತಿಷ್ಠಿತ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿರುವ ಸಾಕ್ಷ್ಯಚಿತ್ರಕ್ಕೆ ಅಭಿನಂದನೆ ತಿಳಿಸಿದ್ದಾರೆ. ಟ್ವೀಟ್​ ಮಾಡಿರುವ ಸಚಿವರು, ''ಪಶ್ಚಿಮ ಘಟ್ಟದಲ್ಲಿ ಕಂಡುಬರುವ 'ಕುಂಬಾರ ಕಪ್ಪೆ' ಎಂಬ ನಿಶಾಚರಿ ಕಪ್ಪೆಯ ಕುರಿತು ಕನ್ನಡಿಗರು ನಿರ್ಮಿಸಿರುವ 'ಕಪ್ಪೆರಾಗ-ಕುಂಬಾರನ ಹಾಡು' ಸಾಕ್ಷ್ಯಚಿತ್ರ, ಗ್ರೀನ್ ಆಸ್ಕರ್ ಎಂದೇ ಹೆಸರಾದ ಪ್ರತಿಷ್ಠಿತ 'ಜಾಕ್ಸನ್ ವೈಲ್ಡ್ ಮೀಡಿಯಾ' ಪ್ರಶಸ್ತಿಗೆ ಭಾಜನಾವಾಗಿದೆ. ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ಚಿತ್ರ ನಿರ್ಮಿಸಿದ ತಂಡಕ್ಕೆ ಅಭಿನಂದನೆಗಳು'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಿಬಿಎಫ್​ಸಿ ವಿರುದ್ಧ ಭ್ರಷ್ಟಾಚಾರ ಆರೋಪ: ಹೆಚ್ಚಿನ ಮಾಹಿತಿ ಹಂಚಿಕೊಂಡ ತಮಿಳು ನಟ ವಿಶಾಲ್​!

"ಸಾವಿರಾರು ವರ್ಷಗಳಿಂದ ನಮ್ಮ ಭಾರತ ದೇಶ ಸಂಗೀತ, ಸಾಹಿತ್ಯ ಮತ್ತು ವನ್ಯಜೀವಿಗಳ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಈ ವರ್ಷ ಇವೆಲ್ಲವುಗಳ ಸಂಯೋಜನೆಯು ಕನ್ನಡದ ಮೊಟ್ಟ ಮೊದಲ ವೈಲ್ಡ್​ಲೈಫ್​​ ಮ್ಯೂಸಿಕಲ್​​ ಡಾಕ್ಯುಮೆಂಟ್​ ಫಿಲಂ, ವಿಶ್ವ ಪ್ರತಿಷ್ಠಿತ, ಆಸ್ಕರ್‌ಗೆ ಸಮಾನವಾದ ಪ್ರಶಸ್ತಿ - ಜಾಕ್ಸನ್ ವೈಲ್ಡ್ ಮೀಡಿಯಾ ಅವಾರ್ಡ್ ಅನ್ನು ಪಡೆದುಕೊಂಡಿದೆ'' - ನಿರ್ದೇಶಕ ಪ್ರಶಾಂತ್ ಎಸ್. ನಾಯ್ಕ.

Last Updated : Sep 30, 2023, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.